Friday, July 11, 2025
Homeರಾಷ್ಟ್ರೀಯ | National75ವರ್ಷ ಕುರಿತ ಆರ್‌ಎಸ್‌‍ಎಸ್‌‍ ಹೇಳಿಕೆ : ಮೋದಿ ಕಾಲೆಳೆದ ಕಾಂಗ್ರೆಸ್‌‍

75ವರ್ಷ ಕುರಿತ ಆರ್‌ಎಸ್‌‍ಎಸ್‌‍ ಹೇಳಿಕೆ : ಮೋದಿ ಕಾಲೆಳೆದ ಕಾಂಗ್ರೆಸ್‌‍

RSS chief says leaders should retire at 75, Congress's 'poor Prime Minister' dig

ನವದೆಹಲಿ, ಜು. 11 (ಪಿಟಿಐ) ಆರ್‌ಎಸ್‌‍ಎಸ್‌‍ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು 75 ವರ್ಷ ತುಂಬಿದವರು ಪಕ್ಷದಿಂದ ಕೆಳಗಿಳಿಯುವ ಬಗ್ಗೆ ನೀಡಿರುವ ಹೇಳಿಕೆಗೆ ಕಾಂಗ್ರೆಸ್‌‍ ಪಕ್ಷ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದು, ವಿದೇಶದಿಂದ ಹಿಂದಿರುಗಿದ ಪ್ರಧಾನಿಗಳಿಗೆ ಸರಸಂಘಚಾಲಕ್‌ ಅವರು 75 ವರ್ಷ ತುಂಬುತ್ತಿರುವುದನ್ನು ನೆನಪಿಸಿದ್ದು ಮಾತ್ರ ವಿಪರ್ಯಾಸ ಎಂದಿದೆ.

ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಆರ್‌ಎಸ್‌‍ಎಸ್‌‍ ಮುಖ್ಯಸ್ಥ ಭಾಗವತ್‌ ಅವರು 75 ವರ್ಷ ವಯಸ್ಸಿನ ನಂತರ ಪಕ್ಷದಿಂದ ಕೆಳಗಿಳಿಯುವ ಬಗ್ಗೆ ಸಂಘದ ಸಿದ್ಧಾಂತವಾದಿ ದಿವಂಗತ ಮೊರೋಪಂತ್‌ ಪಿಂಗ್ಲೆ ಅವರ ಹೇಳಿಕೆಯನ್ನು ಉಲ್ಲೇಖಿಸಿದರು.

75 ವರ್ಷಗಳ ಶಾಲು ನಿಮ್ಮ ಮೇಲೆ ಹೊದಿಸಿದರೆ, ನೀವು ಒಂದು ನಿರ್ದಿಷ್ಟ ವಯಸ್ಸನ್ನು ತಲುಪಿದ್ದೀರಿ ಮತ್ತು ಪಕ್ಷದಿಂದ ಕೆಳಗಿಳಿದು ಇತರರಿಗೆ ಕೆಲಸ ಮಾಡಲು ಬಿಡಬೇಕು ಎಂಬ ಪಿಂಗ್ಲೆ ಅವರ ಹೇಳಿಕೆಯನ್ನು ಭಾಗವತ್‌ ನಿರ್ದಿಷ್ಟವಾಗಿ ಉಲ್ಲೇಖಿಸಿದರು.

ಪ್ರಶಸ್ತಿ ಅರಸುವ ಬಡ ಪ್ರಧಾನಿ! ಇದು ಎಂತಹ ಪುನರಾಗಮನ ವಿದೇಶದಿಂದ ಹಿಂದಿರುಗಿದಾಗ ಸರಸಂಘಚಾಲಕ್‌ ಅವರು ಸೆಪ್ಟೆಂಬರ್‌ 17, 2025 ರಂದು ಅವರಿಗೆ 75 ವರ್ಷ ತುಂಬುತ್ತದೆ ಎಂದು ನೆನಪಿಸಿದರು ಎಂದು ಕಾಂಗ್ರೆಸ್‌‍ ಪ್ರಧಾನ ಕಾರ್ಯದರ್ಶಿ, ಸಂವಹನ ಉಸ್ತುವಾರಿ ಜೈರಾಮ್‌ ರಮೇಶ್‌ ಎಕ್‌್ಸನಲ್ಲಿ ಹಿಂದಿಯಲ್ಲಿ ಪೋಸ್ಟ್‌ ಮಾಡಿದ್ದಾರೆ.

ಆದರೆ ಪ್ರಧಾನ ಮಂತ್ರಿಗಳು ಸರಸಂಘಚಾಲಕ್‌ಗೆ ಸಹ ಹೇಳಬಹುದು – ಅವರೂ ಸಹ ಸೆಪ್ಟೆಂಬರ್‌ 11, 2025 ರಂದು 75 ವರ್ಷ ತುಂಬುತ್ತಾರೆ! ಒಂದು ಬಾಣ, ಎರಡು ಗುರಿಗಳು! ಅವರು ಕಾಲೆಳೆದಿದ್ದಾರೆ.

RELATED ARTICLES

Latest News