ಬೆಂಗಳೂರು,ಫೆ.26- ಕಾಡುಗಳ್ಳ ವೀರಪ್ಪನ್ ಅವರ ಪುತ್ರಿ ವಿದ್ಯಾ ವೀರಪ್ಪನ್ ಇಂದು ವಕೀಲೆಯಾಗಿದ್ದು ತಮಿಳುನಾಡು ಬಿಜೆಪಿ ಹಿಂದುಳಿದ ಮೋರ್ಚಾ ಉಪಾಧ್ಯಕ್ಷರಾಗಿ ರಾಜಕೀಯ ಜೀವನಕ್ಕೂ ಕಾಲಿಟ್ಟಿದ್ದು ಯಶಸ್ವಿ ರಾಜಕಾರಣಿಯಾಗುವ ಎಲ್ಲ ಲಕ್ಷಣಗಳನ್ನು ತೋರಿಸಿದ್ದಾರೆ. ಕಾಡುಗಳ್ಳ ವೀರಪ್ಪನ್ ಅವರ ಪುತ್ರಿಯ ಈ ಯಶಸ್ಸಿಗೆ ಆರ್‍ಎಸ್‍ಎಸ್ ಕಾರಣ ಎನ್ನುವುದು ಇಲ್ಲಿ ಉಲ್ಲೇಖಾರ್ಹವಾದದ್ದು ಏಕೆಂದರೆ ವಿದ್ಯಾಳನ್ನು ದತ್ತು ಪಡೆದು ಲಾ ಓದಿಸಿದ ವನವಾಸಿ ಕಲ್ಯಾಣ ಆಶ್ರಮ ಆರ್‍ಎಸ್‍ಎಸ್‍ನ ಅಂಗಸಂಸ್ಥೆಯಾಗಿರುವುದು ಪ್ರಮುಖ ಕಾರಣವಾಗಿದೆ.
ಕಾಡುಗಳ್ಳನ ಪುತ್ರಿಯ ವಿದ್ಯಾಭ್ಯಾಸಕ್ಕೆ ಆರ್‍ಎಸ್‍ಎಸ್ ಅಂಗಸಂಸ್ಥೆ ಸಹಕರಿಸಿರುವ ವಿಷಯವನ್ನು ಅಮಿತ್ ಸಿಂಗ್ ರಾಜಾವತ್ ಎನ್ನುವರು ಎಕ್ಸ್ ಮಾಡಿದ್ದು ಅವರ ಈ ಪೋಸ್ಟ್ ಗೆ ಸಹಸ್ರಾರು ಸಂಖ್ಯೆಯ ಲೈಕ್‍ಗಳು ಬಂದಿರುವುದು ವಿಶೇಷ. ಬೆಂಗಳೂರಿನ ಲಾ ಕಾಲೇಜಿನಲ್ಲಿ ಐದು ವರ್ಷಗಳ ಪದವಿ ಪೂರ್ಣಗೊಳಿಸಿರುವ ವಿದ್ಯಾ ವೀರಪ್ಪನ್ ಇಂದು ತಮಿಳುನಾಡು ರಾಜಕಾರಣದಲ್ಲಿ ಬ್ಯುಸಿಯಾಗಿದ್ದು, ತಂದೆ ಮಾಡಿದ ತಪ್ಪಿಗೆ ಪ್ರಾಯಶ್ಚಿತವಾಗಿ ಜನಸೇವೆ ಮಾಡುವ ಗುರಿ ಇರಿಸಿಕೊಂಡಿದ್ದು ಮುಂಬರುವ ಚುನಾವಣೆಯಲ್ಲಿ ಸ್ರ್ಪಧಿಸಿ ಶಾಸಕರಾಗಿ ಹೊರಹೊಮ್ಮಿದರೂ ಆಶ್ಚರ್ಯಪಡುವಂತಿಲ್ಲ ಎಂದು ಆಶಾಭಾವ ವ್ಯಕ್ತಪಡಿಸಿದ್ದಾರೆ ಕೆಲವರು.
ಮೆಟ್ರೋದಲ್ಲಿ ರೈತನ ಪ್ರಯಾಣಕ್ಕೆ ತಡೆ: ಸಿಬ್ಬಂದಿ ವರ್ತನೆಗೆ ವ್ಯಾಪಕ ಆಕ್ರೋಶ
ವಿದ್ಯಾ ಮೂರನೇ ತರಗತಿ ಓದುತ್ತಿದ್ದಾಗ ತಂದೆ ವೀರಪ್ಪನ್ ಅವರನ್ನು ನೋಡಿದ ನೆನಪು ಮಾತ್ರ ಅವರಲ್ಲಿದೆ. ನನ್ನ ತಂದೆಯೊಂದಿಗೆ ಆಗ ಕೇವಲ 30 ನಿಮಿಷಗಳ ಕಾಲ ಮಾತನಾಡಿದ್ದು ನೆನಪಿದೆ ಉಳಿದಂತೆ ಅವರ ಯಾವುದೇ ನೆನಪು ನನ್ನಲ್ಲಿ ಉಳಿದಿಲ್ಲ ಎನ್ನುತ್ತಾರೆ ವಿದ್ಯಾ ವೀರಪ್ಪನ್.
ಇದೀಗ ಆರ್‍ಎಸ್‍ಎಸ್ ಅಂಗಸಂಸ್ಥೆಯಿಂದ ಸಹಾಯದಿಂದ ವಕೀಲರಾಗಿರುವ ವಿದ್ಯಾ ಅವರು ಸ್ಪರ್ಧಾತ್ಮಕ ಪರೀಕ್ಷೆ ಬರೆದು ಅಧಿಕಾರಿಯಾಗಿ ಉತ್ತಮ ಸೇವೆ ಸಲ್ಲಿಸುವ ಗುರಿಯನ್ನು ಇರಿಸಿಕೊಂಡಿದ್ದಾರಾದರೂ ಅವರ ಪ್ರಯತ್ನಕ್ಕೆ ಇನ್ನು ಫಲ ಸಿಕ್ಕಿಲ್ವಂತೆ. ನಾನು ಕಾಡುಗಳ್ಳ ವೀರಪ್ಪನ್ ಪುತ್ರಿ ಎಂದು ಜನ ನನ್ನನ್ನು ತಿರಸ್ಕರಿಸಿಲ್ಲ ನನಗೆ ಅವರಿಂದ ಪ್ರೀತಿ ಸಿಗುತ್ತಿದೆ ಅವರ ಋಣ ತೀರಿಸಲು ನನ್ನ ಕೈಲಾದ ಸೇವೆ ಮಾಡಬೇಕು ಎಂಬ ಗುರಿ ಇರಿಸಿಕೊಂಡಿದ್ದೇನೆ ಎಂದು ವಿದ್ಯಾ ತಿಳಿಸಿದ್ದಾರೆ.
ಇದರ ಜೊತೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ಸ್ಫೂರ್ತಿ ಪಡೆದು ನಾನು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ ಕೇಸರಿ ಪಕ್ಷಕ್ಕೆ ನೆಲೆಯಿಲ್ಲದ ತಮಿಳುನಾಡಿನಲ್ಲಿ ಆ ಪಕ್ಷದ ಗೆಲುವಿಗೆ ಸಹಕರಿಸುವ ಕಾರ್ಯದಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದೇನೆ ಎಂದು ವಿದ್ಯಾ ಹೇಳಿಕೊಂಡಿದ್ದಾರೆ.
ಸಿಎಂ – ಡಿಸಿಎಂ ಜೊತೆ ಜನಾರ್ಧನ ರೆಡ್ಡಿ ರಹಸ್ಯ ಮಾತುಕತೆ
ತಮಿಳುನಾಡು ಮತ್ತು ಕರ್ನಾಟಕದ ದಟ್ಟ ಅರಣ್ಯದಲ್ಲಿ ಕಾಡುಗಳ್ಳನಾಗಿದ್ದ ವೀರಪ್ಪನ್ ಕನ್ನಡದ ಖ್ಯಾತ ಚಿತ್ರನಟ ಡಾ.ರಾಜ್‍ಕುಮಾರ್ ಅವರನ್ನು ಅಪಹರಿಸಿ ಭಾರಿ ಸಂಚಲನ ಸೃಷ್ಟಿಸಿದ್ದ ಇಂತಹ ಕಾಡುಗಳ್ಳನನ್ನು ಎಸ್‍ಟಿಎಫ್ ಅಧಿಕಾರಿಗಳು 2014 ಅಕ್ಟೋಬರ್ 18ರಂದು ಹತ್ಯೆ ಮಾಡಿದ್ದರು.