ಬೆಂಗಳೂರು, ಫೆ.24 : ನಿಯಮ ಪಾಲಿಸದ ಮಕ್ಕಳನ್ನು ತುಂಬಿಕೊಂಡು ಹೋಗುತ್ತಿದ್ದ ಖಾಸಗಿ ಶಾಲಾ, ಕಾಲೇಜು ವಾಹನಗಳಿಗೆ ಆರ್‌ಟಿಓ ಅಧಿಕಾರಿಗಳು ಬಿಸಿಮುಟ್ಟಿಸಿದ್ದಾರೆ. ನೂರಕ್ಕೂ ಹೆಚ್ಚು ಶಾಲಾ, ಕಾಲೇಜು ವಾಹನಗಳನ್ನು ಆರ್‌ಟಿಓ ಅಧಿಕಾರಿಗಳು ಜಪ್ತಿ ಮಾಡಿಲಾಗಿದೆ ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.
ಚಾಲಕರು ಮಕ್ಕಳನ್ನು ಬೇಕಾಬಿಟ್ಟಿಯಾಗಿ ವಾಹನಗಳಲ್ಲಿ, ಕರೆದುಕೊಂಡು ಹೋಗುತ್ತಿರುವುದನ್ನು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆಯಲಾಗಿದೆ. ಎಫ್‌ಸಿ, ಪರ್ಮಿಟ್ ಇಲ್ಲದೆ, ತೆರಿಗೆ ಕಟ್ಟದ, ಚಾಲಕರ ಡಿಎಲ್ ನವೀಕರಣ ಇಲ್ಲದ ವಾಹನಗಳನ್ನು ಹೆಚ್ಚಾಗಿ ಕಂಡು ಬಂದಿದೆ ಎಂದರು.
ಶಾಲಾ ವಾಹನಗಳು ಶಾಲೆ ಹೆಸರಿನಲ್ಲೇ ನೋಂದಣಿ ಆಗಿರಬೇಕು. ಹೆಸರು ಮತ್ತು ವಿಳಾಸ, ದೂರವಾಣಿ ಸಂಖ್ಯೆ ಇರಬೇಕು ಇದಲ್ಲದೆ ವಾಹನದೊಳಗೆ ಸಿಸಿ ಕ್ಯಾಮರಾ, ಫ್ಯಾನಿಕ್ ಬಟನ್, ಪ್ರಾಥಮಿಕ ಚಿಕಿತ್ಸಾ ಕಿಟ್, ಫೈರ್ ಎಸ್ಟಿಂಗ್ ವಿಷರ್ ಇರಬೇಕು. ಈ ಯಾವ ನಿಯಮಗಳನ್ನೂ ಕೂಡ ಪಾಲನೆಯಾಗದ ಹಿನ್ನೆಲೆಯಲ್ಲಿ ಶಾಲಾ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದರು.