ಮುಂಬೈ, ಅ.30- ಇಂದು ಆರಂಭಿಕ ವಹಿ ವಾಟಿನಲ್ಲಿ ಡಾಲರ್ ಎದುರು ರೂಪಾಯಿ 21 ಪೈಸೆ ಕುಸಿದು, 88.43 ಕ್ಕೆ ತಲುಪಿದೆ. ಅಂತರ ಬ್ಯಾಂಕ್ ವಿದೇಶಿ ವಿನಿಮಯದಲ್ಲಿ, ಯುಎಸ್ ಡಾಲರ್ ಎದುರು ರೂಪಾಯಿ 88.37 ಕ್ಕೆ ತೆರೆದು 88.43 ಕ್ಕೆ ಇಳಿದು ಹಿಂದಿನ ದಿನದ ಮುಕ್ತಾಯಕ್ಕಿಂತ 21 ಪೈಸೆ ಕುಸಿತ ಕಂಡಿತು.ಬುಧವಾರ, ಯುಎಸ್ ಡಾಲರ್ ಎದುರು ರೂಪಾಯಿ 88.22 ಕ್ಕೆ ಸ್ಥಿರವಾಗಿತ್ತು.
ಈ ವರ್ಷ ಮತ್ತೊಂದು ದರ ಕಡಿತವು ಪೂರ್ವಭಾವಿ ತೀರ್ಮಾನವಲ್ಲ ಎಂದು ಅಧ್ಯಕ್ಷರು ಘೋಷಿಸಿದ ನಂತರ ಡಾಲರ್ ಸೂಚ್ಯಂಕವು ಏರಿತು,ಮಾರುಕಟ್ಟೆ ವ್ಯತ್ಯಯ ,ಮಿಶ್ರ ಆರ್ಥಿಕತೆ ಪರಿಣಾಮ ಬೀರಿದೆ ಎಂದು ಖಜಾನೆ ಮುಖ್ಯಸ್ಥ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಬನ್ಸಾಲಿ ಹೇಳಿದರು.
ಜಾಗತಿಕ ತೈಲ ಮಾನದಂಡವಾದ ಬ್ರೆಂಟ್ ಕಚ್ಚಾ ತೈಲವು ಭವಿಷ್ಯದ ವಹಿವಾಟಿನಲ್ಲಿ ಪ್ರತಿ ಬ್ಯಾರೆಲ್‌ಗೆ 64.75 ಕ್ಕೆ ಶೇ. 0.25 ರಷ್ಟು ಕಡಿಮೆಯಾಗಿ ವಹಿವಾಟು ನಡೆಸುತ್ತಿದೆ.
