ಸಾಂಬಾ, ಮಾ. 02: ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ತುಕ್ಕು ಹಿಡಿದಿದ್ದ ಟ್ಯಾಂಕ್ ವಿರೋಧಿ ಮೈನ್ ಪತ್ತೆಯಾಗಿದೆ. ಸಬಾಂಬ್ ನಿಷ್ಕ್ರಿಯ ದಳದ ನಿಯಂತ್ರಿತ ಸ್ಫೋಟದಲ್ಲಿ ತುಕ್ಕು ಹಿಡಿದಿದ್ದ ಟ್ಯಾಂಕ್ ವಿರೋಧಿ ಮೈನ್ ಪತ್ತೆಯಾಗಿದ್ದು, ನಂತರ ಅದನ್ನು ನಾಶಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತನ್ವರ್ ಪೋಸ್ಟ್ ಬಾರ್ಡರ್ ಬಳಿಯ ಕಮೋರ್ ಗ್ರಾಮದಲ್ಲಿ ಶನಿವಾರ ವ್ಯಕ್ತಿಯೊಬ್ಬರ ಅಂತ್ಯಕ್ರಿಯೆಯ ಸಮಯದಲ್ಲಿ ಗ್ರಾಮಸ್ಥರೊಬ್ಬರು ಟ್ಯಾಂಕ್ ವಿರೋಧಿ ಮೈನ್ ಅನ್ನು ಗಮನಿಸಿದ್ದಾರೆ. ಪೊಲೀಸರು ಬಾಂಬ್ ನಿಷ್ಕ್ರಿಯ ದಳವನ್ನು ಕರೆಸಿದರು ಮತ್ತು ನಿಯಂತ್ರಿತ ಸ್ಫೋಟದಲ್ಲಿ ಅದನ್ನು ನಾಶಪಡಿಸಲಾಗಿದೆ.