ಜೈಪುರ, ಮಾ.18- ರಾಜಸ್ಥಾನದ ಜುಂಜುನುನಲ್ಲಿ ಗಂಡು ಮಗುವಿಗೆ ಜನ್ಮ ನೀಡಲು ಸಾಧ್ಯವಾಗದ ಕಾರಣ ಮಹಿಳೆಯೊಬ್ಬಳು ತನ್ನ 17 ದಿನದ ಹೆಣ್ಣು ಮಗುವನ್ನು ನೀರಿನ ಟ್ಯಾಂಕ್ ಗೆ ಎಸೆದು ಕೊಂದಿದ್ದಾಳೆ.
ಪೊಲೀಸರ ಪ್ರಕಾರ, ಮಹಿಳೆ ತನಗೆ ಗಂಡು ಮಗು ಬೇಕು ಎಂದು ಹೇಳಿದಳು. ಆದರೆ ಅಂತಿಮವಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಇದರಿಂದಾಗಿ ಅವಳು ಮಗುವನ್ನು ನೀರಿನ ಟ್ಯಾಂಕ್‌ಗೆ ಎಸೆದು ಮುಚ್ಚಳವನ್ನು ಮುಚ್ಚಿದ್ದಾರೆ. ಹೆಣ್ಣು ಮಗುವನ್ನು ನೀರಿನ ಟ್ಯಾಂಕ್ ಗೆ ಎಸೆದ ಮಹಿಳೆಯನ್ನು ಇಲ್ಲಿನ ಶ್ರೀ ರಾಮ್ ಕಾಲೋನಿಯ ಆಚ್ಚಿ ದೇವಿ (22) ಎಂದು ಗುರುತಿಸಲಾಗಿದೆ.
ಈಕೆ ತನ್ನ 17 ದಿನದ ಹೆಣ್ಣು ಮಗುವನ್ನು ನೀರಿನ ಟ್ಯಾಂಕ್‌ಗೆ ಎಸೆದಿದ್ದಾಳೆ ಎಂದು ಕೊಟ್ಟಾಲಿ ಸ್ಟೇಷನ್ ಹೌಸ್ ಆಫೀಸರ್ (ಎಸ್ ಎಚ್‌ಒ) ನಾರಾಯಣ್ ಸಿಂಗ್ ತಿಳಿಸಿದ್ದಾರೆ. ಮಗುವನ್ನು ನೀರಿಗೆ ಎಸೆದು ಟ್ಯಾಂಕ್ ನ ಮುಚ್ಚಳ ಮುಚ್ಚಿದ ಪರಿಣಾಮವಾಗಿ ಮಗು ಸಾವನ್ನಪ್ಪಿದೆ ಎಂದು ಅವರು ಹೇಳಿದರು.
ಘಟನೆಯ ಬಗ್ಗೆ ಮಹಿಳೆ ತನ್ನ ಪರಿಚಯಸ್ಥರೊಬ್ಬರಿಗೆ ಮಾಹಿತಿ ನೀಡಿದ್ದು, ನಂತರ ಮಹಿಳೆಯ ಪತಿ ದೂರು ದಾಖಲಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ. ದೂರಿನ ಆಧಾರದ ಮೇಲೆ ಆಕೆಯ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಆಕೆಯನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು. ಮಹಿಳೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.