Thursday, February 6, 2025
Homeರಾಷ್ಟ್ರೀಯ | Nationalಮೋದಿಯ ಪರೀಕ್ಷಾ ಪೇ ಚರ್ಚೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಸೆಲೆಬ್ರಿಟಿಗಳು

ಮೋದಿಯ ಪರೀಕ್ಷಾ ಪೇ ಚರ್ಚೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಸೆಲೆಬ್ರಿಟಿಗಳು

Sadhguru, Deepika Padukone, Mary Kom to join PM Modi for Pariksha Pe Charcha

ನವದೆಹಲಿ, ಫೆ.6- ಪರೀಕ್ಷೆಯ ಒತ್ತಡವನ್ನು ನಿವಾರಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳೊಂದಿಗೆ ನಡೆಸುವ ವಾರ್ಷಿಕ ಸಂವಾದ ಪರೀಕ್ಷಾ ಪೆ ಚರ್ಚಾ ಗೆ ಈ ಬಾರಿ ಹೊಸ ಆಯಾಮ ನೀಡಲಾಗಿದೆ.ಇದುವರೆಗೂ ಪರೀಕ್ಷಾ ಪೇ ಚರ್ಚಾ ಸಂದರ್ಭದಲ್ಲಿ ಕೇವಲ ಮೋದಿ ಮಾತ್ರ ಹಾಜರಿರುತ್ತಿದ್ದರು ಆದರೆ, ಫೆ.10 ರಂದು ನಡೆಯಲಿರುವ ಸಂವಾದದಲ್ಲಿ ಈ ಬಾರಿ ಸೆಲೆಬ್ರಿಟಿಗಳು ಹಾಜರಿರಲಿದ್ದಾರೆ.
ಮೋದಿ ಅವರೊಂದಿಗೆ ಸದ್ಗುರು, ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ, ಮೇರಿ ಕೋಮ್‌ ಮತ್ತು ಅವನಿ ಲೇಖರಾ ಅವರುಗಳು ಹಾಜರಿದ್ದು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ ಮತ್ತು ಶೈಕ್ಷಣಿಕ ಮತ್ತು ಜೀವನದ ಸವಾಲುಗಳನ್ನು ಹೇಗೆ ಎದುರಿಸುವುದು ಎಂಬುದರ ಕುರಿತು ಮಾರ್ಗದರ್ಶನ ನೀಡುತ್ತಾರೆ.

ಪರೀಕ್ಷಾ ಪೆ ಚರ್ಚಾದಲ್ಲಿ ಪ್ರಧಾನಿ ನರೇಂದ್ರ ಮೋದಿ 35 ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಎಲ್ಲಾ ವಿದ್ಯಾರ್ಥಿಗಳು ಬೇರೆ ಬೇರೆ ರಾಜ್ಯಗಳಿಂದ ಬಂದವರಾಗಿರುತ್ತಾರೆ. 50-60 ವಿದ್ಯಾರ್ಥಿಗಳು ಮತ್ತು ಇತರೆ ಪ್ರಮುಖರು ಪಾಲ್ಗೊಳ್ಳಿಲಿದ್ದಾರೆ. ಈ ಬಾರಿ ಸುಮಾರು ಆರುನೂರು ವಿದ್ಯಾರ್ಥಿಗಳು ಈ ಚರ್ಚೆಯಲ್ಲಿ ನೇರವಾಗಿ ಭಾಗವಹಿಸಲಿದ್ದಾರೆ. ಆದಾಗ್ಯೂ, ಈ ಬಾರಿ ಪ್ರಧಾನಿ ಮೋದಿಯವರೊಂದಿಗಿನ ಈ ಚರ್ಚೆಗಾಗಿ ದೇಶಾದ್ಯಂತ ಮತ್ತು ಪ್ರಪಂಚದಾದ್ಯಂತದ ದಾಖಲೆಯ 3.5 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ನೋಂದಾಯಿಸಿಕೊಂಡಿದ್ದಾರೆ.

ಅವರೆಲ್ಲರೂ ಈಗ ಫೆಬ್ರವರಿ 10 ರಂದು ಈ ಚರ್ಚೆಯನ್ನು ಕೇಳಲು ಸಾಧ್ಯವಾಗುತ್ತದೆ ಮತ್ತು ಅವರ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದ ನೋಂದಣಿ ಪ್ರಕ್ರಿಯೆಯು ಡಿಸೆಂಬರ್‌ 14, 2024 ರಿಂದ ಪ್ರಾರಂಭವಾಗಿ ಜನವರಿ 14, 2025 ರವರೆಗೆ ನಡೆದಿತ್ತು. ಒಟ್ಟು 2,500 ಆಯ್ದ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಅವರ ಕಲಿಕಾ ಅನುಭವವನ್ನು ಹೆಚ್ಚಿಸಲು ಶಿಕ್ಷಣ ಸಚಿವಾಲಯದಿಂದ ಪಿಪಿಸಿ ಕಿಟ್‌ಗಳನ್ನು ಸ್ವೀಕರಿಸಲಿದ್ದಾರೆ.

ದೀರ್ಘ ಸಮಯದ ಅಧ್ಯಯನ, ಅತಿಯಾಗಿ ಸ್ಕ್ರೀನ್‌ ನೋಡುವುದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳು ತಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಯಾವ ಅಭ್ಯಾಸಗಳನ್ನು ಅಳವಡಿಸಿಕೊಳ್ಳಬಹುದು? ಶಾಲೆ, ಟ್ಯೂಷನ್‌, ಸ್ವ-ಅಧ್ಯಯನ ಮತ್ತು ವೈಯಕ್ತಿಕ ಸಮಯದ ನಡುವೆ ಸಮತೋಲನ ಸಾಧಿಸುವುದು ವಿದ್ಯಾರ್ಥಿಗಳಿಗೆ ಸವಾಲಾಗಿ ಪರಿಣಮಿಸಿದೆ.

ಸಮಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಮತ್ತು ದೈನಂದಿನ ದಿನಚರಿಯನ್ನು ರೂಪಿಸಲು ಕೆಲವು ಪ್ರಾಯೋಗಿಕ ತಂತ್ರಗಳನ್ನು ಹಂಚಿಕೊಳ್ಳಬಹುದೇ? ಎಂಬುದರ ಬಗ್ಗೆ ಗಣ್ಯರು ಸಲಹೆ ನೀಡಲಿದ್ಧಾರೆ.

RELATED ARTICLES

Latest News