ಮುಂಬೈ, ಮೇ 5 (ಪಿಟಿಐ) : ಬಾಲಿವುಡ್ ಸೂಪರ್‌ಸ್ಟಾರ್ ಸಲಾನ್ ಖಾನ್ ಅವರ ಮನೆಯ ಹೊರಗೆ ಗುಂಡು ಹಾರಿಸಿದ ಪ್ರಕರಣದಲ್ಲಿ ಬಂಧನದ ನಂತರ ಪೊಲೀಸ್ ಕಸ್ಟಡಿಯಲ್ಲಿದ್ದಾಗ ಸಾವನ್ನಪ್ಪಿದ ಅನುಜ್ ಥಾಪನ್ ಸಾವಿನ ಕುರಿತು ಸಿಬಿಐ ತನಿಖೆಗೆ ಕೋರಿ ಅವರ ಕುಟುಂಬ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಥಾಪನ್ ಲಾಕ್‌ಅಪ್‌ನಲ್ಲಿ ಆತಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದರೆ, ಅವರ ತಾಯಿ ರೀಟಾ ದೇವಿ ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಉದ್ದೇಶಪೂರ್ವಕವಾಗಿ ನನ್ನ ಮಗನನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಮುಂದಿನ ದಿನಗಳಲ್ಲಿ ವಿಚಾರಣೆಗೆ ಬರಲಿರುವ ಅರ್ಜಿಯಲ್ಲಿ ದೇವಿ ಅವರು ತಮ ಮಗನ ಸಾವಿನ ಕುರಿತು ತನಿಖೆ ನಡೆಸಲು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ನಿರ್ದೇಶಿಸುವಂತೆ ಹೈಕೋರ್ಟ್‌ಗೆ ಕೋರಿದ್ದಾರೆ.ಕಸ್ಟಡಿಯಲ್ಲಿದ್ದ ಪೊಲೀಸರು ಥಾಪನ್ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಮತ್ತು ಚಿತ್ರಹಿಂಸೆ ನೀಡಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಥಾಪನ್‌ನನ್ನು ಬಂಧಿಸಿರುವ ಪೊಲೀಸ್ ಠಾಣೆ ಮತ್ತು ಲಾಕ್‌ಅಪ್‌ನ ಸಿಸಿಟಿವಿ ದಶ್ಯಾವಳಿಗಳನ್ನು ಹಸ್ತಾಂತರಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡುವಂತೆ ಅವರು ಹೈಕೋರ್ಟ್‌ಗೆ ಮನವಿ ಮಾಡಿಕೊಂಡಿದ್ದಾರೆ. ಏಪ್ರಿಲ್ 24 ರಿಂದ ಮೇ 2 ರವರೆಗೆ ಗುಂಡಿನ ದಾಳಿಯ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳ ಕರೆ ಡೇಟಾ ದಾಖಲೆಗಳನ್ನು (ಸಿಡಿಆರ್) ಸಂರಕ್ಷಿಸುವಂತೆ ಅರ್ಜಿದಾರರು ಕೋರಿದ್ದಾರೆ.ಥಾಪನ್‌ನ ಸಾವಿನ ಕುರಿತು ಹೊಸದಾಗಿ ಮರಣೋತ್ತರ ಪರೀಕ್ಷೆಗೆ ನಿರ್ದೇಶನಗಳನ್ನು ಕೇಳಿದೆ.
ಗುಂಡು ಹಾರಿಸಿದ ಘಟನೆಗೆ ಸಂಬಂಧಿಸಿದಂತೆ ಥಾಪನ್, ಸೋನು ಬಿಷ್ಣೋಯ್, ಆಪಾದಿತ ಶೂಟರ್‌ಗಳಾದ ಸಾಗರ್ ಪಾಲ್ ಮತ್ತು ವಿಕ್ಕಿ ಗುಪ್ತಾ ಎಂಬ ನಾಲ್ವರನ್ನು ಬಂಧಿಸಲಾಗಿದ್ದು, ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಮತ್ತು ಅವರ ಸಹೋದರ ಅನೋಲ್ ಬಿಷ್ಣೋಯ್ ಅವರನ್ನು ಪೊಲೀಸರು ಬೇಕಾಗಿರುವ ಆರೋಪಿಗಳೆಂದು ಘೋಷಿಸಿದ್ದಾರೆ.
ಗುಂಡಿನ ಘಟನೆಗೆ ಬಂದೂಕು ಮತ್ತು ಗುಂಡುಗಳನ್ನು ಸರಬರಾಜು ಮಾಡಿದ ಆರೋಪಿ ಥಾಪನ್ ಅವರನ್ನು ಏಪ್ರಿಲ್ 26 ರಂದು ಪಂಜಾಬ್‌ನಿಂದ ಸೋನು ಬಿಷ್ಣೋಯ್ ಜೊತೆಗೆ ಬಂಧಿಸಲಾಯಿತು ಮತ್ತು ಏಪ್ರಿಲ್ 30 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಯಿತು. ಏಪ್ರಿಲ್ 29 ರಂದು, ಪೊಲೀಸರು ಥಾಪನ್ ಸೇರಿದಂತೆ ಎಲ್ಲಾ ನಾಲ್ವರು ಆರೋಪಿಗಳನ್ನು ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು, ಅದು ಅವರನ್ನು ಮೇ 8 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ.
ಮೇ 1 ರಂದು ಇಲ್ಲಿನ ಕ್ರಾಫರ್ಡ್ ಮಾರ್ಕೆಟ್‌ನಲ್ಲಿರುವ ಕಮಿಷನರೇಟ್ ಕಾಂಪ್ಲೆಕ್‌್ಸನಲ್ಲಿರುವ ಅಪರಾಧ ವಿಭಾಗದ ಲಾಕ್‌ಅಪ್‌ನ ಶೌಚಾಲಯದಲ್ಲಿ ಥಾಪನ್ ಶವವಾಗಿ ಪತ್ತೆಯಾಗಿದ್ದರು. ಏಪ್ರಿಲ್ 14 ರಂದು ಮುಂಬೈನ ಬಾಂದ್ರಾ ಪ್ರದೇಶದಲ್ಲಿ ಸಲಾನ್ ಖಾನ್ ಅವರ ನಿವಾಸದ ಹೊರಗೆ ಮೋಟಾರ್ ಬೈಕ್ ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದರು.