Tuesday, April 1, 2025
Homeಮನರಂಜನೆರಶ್ಮಿಕಾಳನ್ನು ಹಾಡಿ ಹೊಗಳಿದ 'ಸಿಕಂದರ್' ಸಲ್ಲು

ರಶ್ಮಿಕಾಳನ್ನು ಹಾಡಿ ಹೊಗಳಿದ ‘ಸಿಕಂದರ್’ ಸಲ್ಲು

Salman Khan Praises 'Amazing' Rashmika Mandanna

ನವದೆಹಲಿ, ಮಾ.28- ಬಾಲಿವುಡ್‌ ನಲ್ಲೂ ಮಿಂಚುತ್ತಿರುವ ಕನ್ನಡತಿ ರಶ್ಮಿಕಾ ಮಂದಣ್ಣ ಅವರನ್ನು ಅದ್ಭುತ ನಟಿ ಎಂದು ಬ್ಯಾಡ್‌ಬಾಯ್ ಸಲ್ಮಾನ್‌ಖಾನ್ ಹಾಡಿ ಹೋಗಳಿದ್ದಾರೆ. ಸಿಕಂದರ್‌ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದರೂ ಆಮೀರ್ ಖಾನ್ ಮತ್ತು ನಿರ್ದೇಶಕ ಎ.ಆರ್ ಮುರುಗದಾಸ್ ಜೊತೆಗಿನ ವಿಶೇಷ ಸಂದರ್ಶನದಲ್ಲಿ ಅವರು, ರಶ್ಮಿಕಾ ಮಂದಣ್ಣ ಶ್ರಮ ಜೀವಿ, ಅದ್ಭುತ ನಟಿ ಎಂದು ಹಾಡಿ ಹೊಗಳಿದ್ದಾರೆ.

ರಶ್ಮಿಕಾ ಮಂದಣ್ಣ ಅವರು ಹಾರ್ಡ್ ವರ್ಕರ್, ಆಕೆ ಅದ್ಭುತ ನಟಿ. ನಾವು ಹೈದರಾಬಾದ್‌ನಲ್ಲಿ ಚಿತ್ರೀಕರಣದಲ್ಲಿದ್ದಾಗ, ಅವರು ಬೆಳಿಗ್ಗೆ 6 ಗಂಟೆಗೆ ಸಿದ್ಧರಾಗಿ ಪುಷ್ಪ 2 ಚಿತ್ರೀಕರಣದಲ್ಲಿ ಇರುತ್ತಿದ್ದರು. ಆ ಚಿತ್ರದ ಚಿತ್ರೀಕರಣ ಮುಗಿದ ನಂತರ, ಅವರು ನಮ್ಮೊಂದಿಗೆ ಶೂಟಿಂಗ್‌ ಬರುತ್ತಿದ್ದರು. ಅವರಿಗೆ ಜ್ವರ ಬಂದಾಗಲೂ, ನಟಿ ವಿಶ್ರಾಂತಿ ಇಲ್ಲದೆ ಕೆಲಸ ಮಾಡುತ್ತಿದ್ದರು ಎಂದಿದ್ದಾರೆ.

ಇನ್ನೂ ಅವರು ಒಂದು ಸೆಟ್‌ ನಿಂದ ಮತ್ತೊಂದು ಸೆಟ್‌ ಗೆ ಹೋಗುವ ಪ್ರಯಾಣದ ಸಮಯದಲ್ಲಿ ವಿಶ್ರಾಂತಿ ಪಡೆಯತ್ತಿದ್ದರು ಎಂದು ಹೇಳಿದ್ದಾರೆ. ಅವರನ್ನು ನೋಡಿದಾಗ ನನಗೆ ನನ್ನ ಹಳೆಯ ದಿನಗಳು ನೆನಪಾಗುತ್ತಿದ್ದವು. 25 ವರ್ಷಗಳ ಹಿಂದೆ, ಆಮಿರ್ ಖಾನ್, ನಾನು ಮತ್ತು ಇನ್ನೂ ಅನೇಕರು 2ರಿಂದ 3 ಶಿಫ್ಟ್ಗಳಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದ್ದೆವು.

ರಶ್ಮಿಕಾ ಈಗ ದಿನಕ್ಕೆ ಎರಡರಿಂದ ಮೂರು ಶಿಫ್ಟ್ಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳುತ್ತಾ ಸಲ್ಮಾನ್ ಖಾನ್ ತಮ್ಮ ಕೆರಿಯರ್‌ನ ಆರಂಭಿಕ ದಿನಗಳನ್ನು ಸ್ಮರಿಸಿದರು. ಇನ್ನೂ ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ, ಕಾಜಲ್ ನಟನೆಯ ಸಿಕಂದರ್ ಸಿನಿಮಾ ಇದೇ ಮಾ.30ರಂದು ರಿಲೀಸ್‌ ಆಗಲಿದೆ.

RELATED ARTICLES

Latest News