Home ಇದೀಗ ಬಂದ ಸುದ್ದಿ ಉತ್ತರಪ್ರದೇಶ : ಸಂಭಾಲ್‌ ಮಸೀದಿ ಸಮೀಕ್ಷೆಯ ವೇಳೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ, ಲಘು ಲಾಠಿ ಪ್ರಹಾರ

ಉತ್ತರಪ್ರದೇಶ : ಸಂಭಾಲ್‌ ಮಸೀದಿ ಸಮೀಕ್ಷೆಯ ವೇಳೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ, ಲಘು ಲಾಠಿ ಪ್ರಹಾರ

0
ಉತ್ತರಪ್ರದೇಶ : ಸಂಭಾಲ್‌ ಮಸೀದಿ ಸಮೀಕ್ಷೆಯ ವೇಳೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ, ಲಘು ಲಾಠಿ ಪ್ರಹಾರ

ಸಂಭಾಲ್‌ (ಯುಪಿ), ನ.24 (ಪಿಟಿಐ) ಇಲ್ಲಿನ ಸಂಭಾಲ್‌ ಮಸೀದಿ ಸಮೀಕ್ಷೆಯ ವೇಳೆ ಕಲ್ಲು ತೂರಾಟ ನಡೆದು ಪರಿಸ್ಥಿತಿ ಉದ್ವಿಗ್ನಗೊಂಡಿದ್ದರಿಂದ ಪೊಲೀಸರು ಅಶ್ರುವಾಯು ಸಿಡಿಸಿ ಲಘುಲಾಠಿ ಪ್ರಹಾರ ನಡೆಸಿದ್ದಾರೆ.

ಇದು ಪುರಾತನ ಹಿಂದೂ ಹರಿಹರ ದೇವಾಲಯವಾಗಿದ್ದು ಸಂಭಾಲ್‌ ಮಸೀದಿ ನಿರ್ಮಿಸಲಾಗಿದೆ ಎಂಬ ಪ್ರಕರಣ ಕುರಿತುಸ್ಥಳೀಯ ನ್ಯಾಯಾಲಯದ ಸಮೀಕ್ಷೆಗೆ ಆದೇಶದ ನೀಡಿತ್ತು. ಸ್ಥಳೀಯ ಆಡಳಿತದ ಪ್ರಕಾರ, ವಿವಾದಿತ ಜಾಗದಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ಅಧಿಕಾರಿಗಳು ಬೆಳಿಗ್ಗೆ 7 ಗಂಟೆಗೆ ಸಮೀಕ್ಷೆ ಪ್ರಾರಂಭವಾಯಿತು ನಂತರ ಸ್ಥಳದಲ್ಲಿ ಜನಸಂದಣಿ ಸೇರಲು ಪ್ರಾರಂಭಿಸಿತು.

ಸ್ಥಳದಲ್ಲಿ ಜಮಾಯಿಸಿದ ಜನಸಂದಣಿಯಿಂದ ಕೆಲವು ದುಷ್ಕರ್ಮಿಗಳು ಭದ್ರತೆಗೆ ಇದ್ದ ಪೊಲೀಸ್‌‍ ಮೇಲೆ ಕಲ್ಲು ತೂರಿದರು. ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸಿ ನಂತರಅಶ್ರುವಾಯು ಬಳಸಿದರು ಎಂದು ಪೊಲೀಸ್‌‍ ವರಿಷ್ಠಾಧಿಕಾರಿ ಕೃಷ್ಣ ಕುಮಾರ್‌ ವಿಷ್ಣೋಯ್‌ ಹೇಳಿದ್ದಾರೆ. ಕಲ್ಲು ತೂರಾಟ ನಡೆಸಿದವರು ಹಾಗೂ ಪ್ರಚೋದನೆ ನೀಡಿದವರನ್ನು ಗುರುತಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ಕೆಲವು ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ ಆದರೆ ಈಗ ಪರಿಸ್ಥಿತಿ ಶಾಂತವಾಗಿದ್ದು, ಸಮೀಕ್ಷೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ರಾಜೇಂದ್ರ ಪೆಸಿಯಾ ತಿಳಿಸಿದರು. ಸಂಭಾಲ್‌ನಲ್ಲಿ ಸಮೀಕ್ಷೆಯ ಸ್ಥಳದ ಬಳಿ ಯುವಕರು ಪೊಲೀಸರ ಮೇಲೆ ಕಲ್ಲು ಎಸೆಯುವ ವೀಡಿಯೊಗಳು ಅಂತರ್ಜಾಲದಲ್ಲಿ ಕಾಣಿಸಿಕೊಂಡಿವೆ. ಸಿವಿಲ್‌ ನ್ಯಾಯಾಧೀಶರ ನ್ಯಾಯಾಲಯವು ಮಸೀದಿಯನ್ನು ಸಮೀಕ್ಷೆ ಮಾಡಲು ಅಡ್ವೊಕೇಟ್‌ ಆಯೋಗ ವನ್ನು ರಚಿಸುವಂತೆ ಆದೇಶಿಸಿದೆ ಎಂದು ಹೇಳಿದರು. ಆಯೋಗದ ಮೂಲಕ ವೀಡಿಯೋಗ್ರಫಿ ಮತ್ತು ಫೋಟೋಗ್ರಫಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರಗಳು, ಮಸೀದಿ ಸಮಿತಿ ಮತ್ತು ಸಂಭಾಲ್‌ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಅವರನ್ನು ಮಸೀದಿಗೆ ಸಂಬಂಧಿಸಿದ ಅರ್ಜಿಯಲ್ಲಿ ಪಕ್ಷವನ್ನಾಗಿ ಮಾಡಲಾಗಿದೆ ಎಂದು ವಕೀಲ ಜೈನ್‌ ಕಳೆದ ಹೇಳಿದ್ದಾರೆ.

ವಿಷ್ಣು ಶಂಕರ್‌ ಜೈನ್‌ ಮತ್ತು ಅವರ ತಂದೆ ಹರಿ ಶಂಕರ್‌ ಜೈನ್‌ ಅವರು ಜ್ಞಾನವಾಪಿ ಮಸೀದಿ-ಕಾಶಿ ವಿಶ್ವನಾಥ ದೇವಾಲಯ ವಿವಾದ ಸೇರಿದಂತೆ ಪೂಜಾ ಸ್ಥಳಗಳಿಗೆ ಸಂಬಂಧಿಸಿದ ಅನೇಕ ಪ್ರಕರಣಗಳಲ್ಲಿ ಹಿಂದೂ ಪರವಾಗಿ ಪ್ರತಿನಿಧಿಸಿದ್ದಾರೆ.

ಸ್ಥಳೀಯ ವಕೀಲ ಗೋಪಾಲ್‌ ಶರ್ಮಾ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ಈ ಸ್ಥಳದಲ್ಲಿ ಹರಿಹರ ದೇವಾಲಯವಿದೆ ಎಂದು ದೃಢಪಡಿಸಿದೆ ಎಂದು ಉಲ್ಲೇಖಿಸಿದ್ದಾರೆ. 1529 ರಲ್ಲಿ ಮೊಘಲ್‌ ರಾಜ ಬಾಬರ್‌ನಿಂದ ದೇವಾಲಯವನ್ನು ಕೆಡವಲಾಯಿತು ಎಂದು ಅವರು ಪ್ರತಿಪಾದಿಸಿದರು. ಈ ಪ್ರಕರಣದ ಮುಂದಿನ ವಿಚಾರಣೆ ಜನವರಿ 29ಕ್ಕೆ ನಿಗದಿಯಾಗಿದೆ.