Friday, November 29, 2024
Homeರಾಷ್ಟ್ರೀಯ | Nationalಸಂಭಾಲ್‌ ಹಿಂಸಾಚಾರದ ತನಿಖೆಗೆ ನ್ಯಾಯಾಂಗ ಆಯೋಗ ರಚನೆ

ಸಂಭಾಲ್‌ ಹಿಂಸಾಚಾರದ ತನಿಖೆಗೆ ನ್ಯಾಯಾಂಗ ಆಯೋಗ ರಚನೆ

Sambhal Violence: Uttar Pradesh Guv sets up three-member judicial commission

ನವದೆಹಲಿ,ನ.29– ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ನಡೆದ ಹಿಂಸಾಚಾರದ ಬಗ್ಗೆ ತನಿಖೆ ನಡೆಸಲು ನ್ಯಾಯಮೂರ್ತಿ ದೇವೇಂದ್ರ ಕುಮಾರ್‌ ಅರೋರಾ (ನಿವತ್ತ) ನೇತತ್ವದ ಮೂವರು ಸದಸ್ಯರ ನ್ಯಾಯಾಂಗ ತನಿಖಾ ಆಯೋಗವನ್ನು ಉತ್ತರ ಪ್ರದೇಶದ ರಾಜ್ಯಪಾಲ ಆನಂದಿಬೆನ್‌ ಪಟೇಲ್‌ ಅವರು ರಚಿಸಿದ್ದಾರೆ.

ಆಯೋಗದ ಇತರ ಇಬ್ಬರು ಸದಸ್ಯರು ನಿವತ್ತ ಐಎಎಸ್‌‍ ಅಮಿತ್‌ ಮೋಹನ್‌ ಪ್ರಸಾದ್‌ ಮತ್ತು ನಿವತ್ತ ಐಪಿಎಸ್‌‍ ಅರವಿಂದ್‌ ಕುಮಾರ್‌ ಜೈನ್‌ ಅವರನ್ನು ಒಳಗೊಂಡಿದೆ.

ಆಯೋಗವು ಘಟನೆಯನ್ನು ಯೋಜಿಸಲಾಗಿದೆಯೇ ಅಥವಾ ಹಠಾತ್‌ ಘಟನೆಯೇ ಎಂಬುದರ ಕುರಿತು ಮತ್ತು ಜಿಲ್ಲಾಡಳಿತ ಮತ್ತು ಪೊಲೀಸರು ಮಾಡಿದ ಕಾನೂನು ಮತ್ತು ಸುವ್ಯವಸ್ಥೆಯ ವ್ಯವಸ್ಥೆಗಳ ಪರಿಣಾಮಕಾರಿತ್ವದ ಬಗ್ಗೆ ವರದಿಯನ್ನು ಸಲ್ಲಿಸುತ್ತದೆ.

ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸಮಿತಿಯು ಸಲಹೆಗಳನ್ನು ನೀಡುತ್ತದೆ. ಎರಡು ತಿಂಗಳಲ್ಲಿ ಆಯೋಗ ತನ್ನ ವರದಿ ಸಲ್ಲಿಸಲಿದೆ. ಹೀಗಾಗಿ ಇಂದು ಆಯೋಗ ಸಂಭಾಲ್‌ ಮಸೀದಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ಸಾಧ್ಯತೆ ಇರುವುದರಿಂದ ಮಸೀದಿಗೆ ಭಾರಿ ಭದ್ರತೆ ಒದಗಿಸಲಾಗಿದೆ.

RELATED ARTICLES

Latest News