Sunday, May 18, 2025
Homeರಾಜ್ಯಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಸಂಧ್ಯಾ ಮಂದಾರಿ ನೇಮಕ

ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಸಂಧ್ಯಾ ಮಂದಾರಿ ನೇಮಕ

Sandhya Mandari appointed as State Organizing Secretary of KPCC Labor Department

ಬೆಂಗಳೂರು,ಮೇ 18-ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪಮುಖ್ಯ ಮಂತ್ರಿಗಳಾದ ಡಿ. ಕೆ. ಶಿವಕುಮಾರ್‌ ರವರ ಆದೇಶದ ಮೇರೆಗೆ, ಮಾಜಿ ಮಂತ್ರಿ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ವಿನಯ್‌ ಕುಲಕರ್ಣಿ ರವರ ಶಿಾರಸ್ಸಿನ ಮೇರೆಗೆ, ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಸಂಧ್ಯಾ ಮಂದಾರಿರವರನ್ನು ನೇಮಕ ಮಾಡಲಾಗಿದೆ.

ಕಾರ್ಮಿಕ ವಿಭಾಗ ರಾಜ್ಯಾಧ್ಯಕ್ಷರಾದ ಪುಟ್ಟಸ್ವಾಮಿಗೌಡರು ರಾಜ್ಯ ಸಂಘಟನಾ ಕಾರ್ಯದರ್ಶಿ ಸಂಧ್ಯಾ ಮಂದಾರಿರವರಿಗೆ ನೇಮಕಾತಿ ಆದೇಶ ಪತ್ರ ನೀಡಿದರು, ಕೆಪಿಸಿಸಿ ಕಾರ್ಮಿಕ ವಿಭಾಗದ ಉಪಾಧ್ಯಕ್ಷರಾದ ಶರೀ್‌‍ ರವರು ಉಪಸ್ಥಿತರಿದ್ದರು.

ಕಾಂಗ್ರೆಸ್‌‍ ಪಕ್ಷದ ಐದು ಗ್ಯಾರೆಂಟಿ ಯೋಜನೆಗಳನ್ನು ಕಾರ್ಮಿಕರು, ಕೂಲಿ ಕಾರ್ಮಿಕರಿಗೆ ತಲುಪಿಸಲಾಗುವುದು. ಈಗಾಗಲೇ ಕೊಟ್ಯಂತರ ಕಾರ್ಮಿಕರು ಗ್ಯಾರೆಂಟಿ ಯೋಜನೆಯ ಲಾನುಭವಿಗಳು ಇದ್ದಾರೆ.

ಕಾರ್ಮಿಕರಿಗೆ ಕಾಂಗ್ರೆಸ್‌‍ ಪಕ್ಷದ ಸಾಧನೆ ಮತ್ತು ಯೋಜನೆಗಳನ್ನು ಅರಿವು ಮೂಡಿಸಿ ಪಕ್ಷದ ಸದಸ್ಯತ್ವ ನೋಂದಾಣೆ ಮಾಡಲಾಗುವುದು.ಕಾಂಗ್ರೆಸ್‌‍ ಪಕ್ಷ ಬಡವರ ಪರ ಹೋರಾಟ ಮಾಡುವ ಪಕ್ಷ, ಕಾಂಗ್ರೆಸ್‌‍ ಪಕ್ಷದ ಕಾರ್ಯಕರ್ತ ಎಂದರೆ ಹೆಮೆ ಪಡುವ ಸಂಗತಿ ಎಂದು ಸಂಧ್ಯಾ ಮಂದಾರಿರವರು ತಿಳಿಸಿದರು.

RELATED ARTICLES

Latest News