Friday, June 28, 2024
Homeಕ್ರೀಡಾ ಸುದ್ದಿಮಿರ್ಜಾ-ಶಮಿ ವಿವಾಹದ ಬಗ್ಗೆ ತಿಳಿಯಬೇಕಾದರೆ ತಾಳ್ಮೆಯಿಂದಿರಿ

ಮಿರ್ಜಾ-ಶಮಿ ವಿವಾಹದ ಬಗ್ಗೆ ತಿಳಿಯಬೇಕಾದರೆ ತಾಳ್ಮೆಯಿಂದಿರಿ

ನವದೆಹಲಿ,ಜೂ.23- ಟೆನ್ನಿಸ್‌‍ ಮಾಜಿ ಆಟಗಾರ್ತಿ ಸಾನಿಯಾ ಮಿರ್ಜಾ ಖ್ಯಾತ ಕ್ರಿಕೆಟಿಗ ಮಹಮದ್‌ ಶಮಿ ಅವರನ್ನು ವರಿಸಲಿದ್ದಾರೆಯೇ.. ಇದು ಗೊತ್ತಾಗಬೇಕಾದರೆ ನೀವು ಸ್ವಲ್ಪ ತಾಳ್ಮೆಯಿಂದ ಇರಬೇಕು.ಯಾಕೆ ಅಂತೀರಾ ಇಬ್ಬರ ವಿವಾಹ ಕುರಿತಂತೆ ಸ್ವತಃ ಸಾನಿಯಾ ಮಿರ್ಜಾ ಅವರೇ ತಾಳ್ಮೆಯಿಂದೀರಿ ಎಲ್ಲಕ್ಕೂ ಕಾಲವೇ ಉತ್ತರಿಸಲಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಖ್ಯಾತ ಟೆನ್ನಿಸ್‌‍ ಆಟಗಾರ್ತಿಯಾಗಿದ್ದ ಮಿರ್ಜಾ ಅವರು ಪಾಕ್‌ ಕ್ರಿಕೆಟ್‌ ತಂಡದ ಆಟಗಾರ ಶೋಯೆಬ್‌ ಮಲಿಕ್‌ ಅವರನ್ನು ಪ್ರೀತಿಸಿ ವಿವಾಹವಾಗಿದ್ದರೂ ನಂತರ ಅವರು ವಿಚ್ಛೇದನ ಪಡೆದುಕೊಂಡಿದ್ದರು. ಅದೇ ರೀತಿ ಶಮಿ ದಾಂಪತ್ಯ ಜೀವನದಲ್ಲೂ ತಾಳ-ಮೇಳವಿರಲಿಲ್ಲ. ಹೀಗಾಗಿ ಮಿರ್ಜಾ ಮತ್ತು ಶಮಿ ವಿವಾಹವಾಗಲಿದ್ದಾರೆ ಎಂಬ ಮಾತುಗಳೂ ಕೇಳಿ ಬಂದಿದ್ದವು. ಆದರೆ ಅದನ್ನು ಯಾರು ಖಚಿತಪಡಿಸಿರಲಿಲ್ಲ.

ಆದರೆ, ಇದೀಗ ಸ್ವತಃ ಮಿರ್ಜಾ ಅವರೇ ತಮ ಅಭಿಮಾನಿಗಳಿಗೆ ತಾಳೆಯಿಂದಿರಿ ಎನ್ನುವ ಮೂಲಕ ಎನೋ ನಡೆಯುತ್ತಿದೆ ಎನ್ನುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುಳಿವು ನೀಡಿದ್ದಾರೆ.

ತಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಸಬರ್‌ ಕರೋ ಆಲ್‌ವೇಯ್ಸ್ ಸಬರ್‌ ಕರೋ ಎಂದು ಬರೆದುಕೊಂಡಿದ್ದಾರೆ. ಅಂದರೆ ಇದಕ್ಕೆ ಉತ್ತರ ತಾಳೆಯಿಂದಿರಿ… ಯಾವಾಗಲೂ ತಾಳೆಯಿಂದಿರಿ ಎಂದು ಅರ್ಥ. ಎಲ್ಲಾ ವದಂತಿಗಳಿಗೂ ಸ್ಪಷ್ಟತೆ ಸಿಗಲಿದೆ ತಾಳೆಯಿಂದಿರಿ ಎಂದು ಹೇಳಿದ್ದಾರೆ.

ಸಾನಿಯಾ ಮಿರ್ಜಾ ಮದುವೆಯ ವದಂತಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೋ ಅಥವಾ ವದಂತಿಗಳನ್ನು ಹರಡುವುದನ್ನು ನಿಲ್ಲಿಸುವಂತೆ ಜನರನ್ನು ಒತ್ತಾಯಿಸುತ್ತಿದ್ದಾರೋ ಎಂದು ಜನ ತಲೆ ಕೆಡಿಸಿಕೊಂಡಿದ್ದಾರೆ. ಅವರು ಮಾತ್ರ ಯಾವುದೇ ಸ್ಪಷ್ಟತೆ ನೀಡಿಲ್ಲ. ಅವರ ಉತ್ತರ ಅವರಿಗೆ ಮಾತ್ರ ಖಚಿತವಾಗಿ ತಿಳಿದಿದೆ.

ಶೋಯೆಬ್‌ ಮಲಿಕ್‌ ಅವರಿಂದ ವಿಚ್ಛೆದನ ಪಡೆದ ನಂತರ ಹಜ್‌ ಯಾತ್ರೆ ಮಾಡಿದ್ದ ಮಿರ್ಜಾ ತಮ ಮನಸ್ಸನ್ನು ಮತ್ತಷ್ಟು ಗಟ್ಟಿ ಮಾಡಿಕೊಳ್ಳುವ ಯತ್ನ ಇದು ಎನ್ನಲಾಗಿದೆ.

RELATED ARTICLES

Latest News