ಹುಬ್ಬಳ್ಳಿ,ಏ.29- ಲೋಕಸಭಾ ಚುನಾವಣೆ ರಾಷ್ಟ್ರದ ಭವಿಷ್ಯ ನಿರ್ಧರಿಸುವಂತದ್ದಾಗಿದ್ದು, ಇಲ್ಲಿ ಕಳೆದ 10 ವರ್ಷಗಳಿಂದ ನಡೆದಿರುವ ಅಭಿವೃದ್ಧಿ ಯೋಜನೆಗಳ ಕುರಿತು ಚರ್ಚೆಯಾಗಬೇಕೇ ಹೊರತು ವ್ಯಕ್ತಿಗತ ವಿಚಾರಗಳಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿಯವರು ತಮ್ಮ ಪ್ರಚಾರ ಭಾಷಣದಲ್ಲಿ ಕಾಂಗ್ರೆಸ್‌ನಿಂದ ಲೂಟಿ, ಪಿಕ್‌ಪ್ಯಾಕೆಟ್ ಎಂಬ ವಿಚಾರಗಳನ್ನು ಪ್ರಸ್ತಾಪಿಸುತ್ತಿದ್ದಾರೆ. ತಾವು ಮಾಡುತ್ತಿರುವ ಆರೋಪಗಳಿಗೆ ಯಾವುದಕ್ಕೂ ಸರಿಯಾದ ಆಧಾರ ನೀಡುವುದಿಲ್ಲ. ತಮ್ಮ ಹುದ್ದೆಯ ಘನತೆಯನ್ನು ಕುಬ್ಜಗೊಳಿಸಿ ರಾಜಕೀಯ ಲಾಭಕ್ಕಾಗಿ ಜನರನ್ನು ಭಾವನಾತ್ಮಕವಾಗಿ ಕೆರಳಿಸುವ ಯತ್ನ ನಡೆಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ 10 ವರ್ಷಗಳಿಂದ ದೇಶದಲ್ಲಾಗಿರುವ ಅಭಿವೃದ್ಧಿ ವಿಚಾರಗಳ ಕುರಿತು ಚರ್ಚೆಯಾಗಬೇಕಿತ್ತು. ಆದರೆ ಅದರ ಬಗ್ಗೆ ಎಲ್ಲಿಯೂ ಪ್ರಸ್ತಾಪವಾಗುತ್ತಿಲ್ಲ. ಇವರು ಯಾವ ಆಧಾರದ ಮೇಲೆ ಮತ ಕೇಳುತ್ತಿದ್ದಾರೆ ಎಂಬುದನ್ನು ಮೊದಲು ಸ್ಪಷ್ಟಪಡಿಸಬೇಕು ಎಂದರು. ಎನ್‌ಸಿಆರ್‌ಬಿ ಮಾಹಿತಿ ಪ್ರಕಾರ ದೇಶದಲ್ಲಿ 13.13 ಲಕ್ಷ ಮಹಿಳೆಯರು ಕಾಣೆಯಾಗಿದ್ದಾರೆ.
ದೇಶದ ಸಾಲ 183 ಲಕ್ಷ ಕೋಟಿ ರೂ. ಗಳಾಗಿವೆ. ಡಾಲರ್ ವೌಲ್ಯ 58 ರೂ.ಗಳಿಂದ 83 ರೂ.ಗಳಿಗೆ ಕುಸಿದಿದೆ. ಬಂಡವಾಳಶಾಹಿಗಳ 16 ಲಕ್ಷ ಕೋಟಿ ರೂ. ಸಾಲಮನ್ನಾವಾಗಿದೆ. ಇದ್ಯಾವ ವಿಚಾರಗಳು ಚರ್ಚೆಯಾಗಬಾರದೇ ಎಂದು ಪ್ರಶ್ನಿಸಿದರು.
ಅಮೆರಿಕದಲ್ಲಿ ಭಾಷಣ ಮಾಡಿದ ಮೋದಿಯವರು ಪ್ರತಿ ವಾರ ಒಂದು ವಿಶ್ವವಿದ್ಯಾಲಯವನ್ನು ಸ್ಥಾಪಿಸುವುದಾಗಿ ಹೇಳಿದ್ದರು. ಎಲ್ಲಿಗೆ ಆ ವಿಶ್ವವಿದ್ಯಾಲಯಗಳು ಎಂಬುದನ್ನು ಯಾರೂ ತೋರಿಸಿದ್ದಿಲ್ಲ, ನೋಟು ಅಮಾನೀಕರಣ ದೊಡ್ಡ ವಂಚನೆಯ ಹಗರಣ. 3 ಲಕ್ಷ ನಕಲಿ ನೋಟುಗಳನ್ನು ಪತ್ತೆ ಹಚ್ಚುವುದಾಗಿ ಹೇಳಿದರು.
ಈವರೆಗೂ ಅದನ್ನು ಲೆಕ್ಕ ಕೊಟ್ಟಿಲ್ಲ. ಪುಲ್ವಾಮ ದಾಳಿಯ ಬಗ್ಗೆ ಆಗಿನ ಲೆಫ್ಟಿನೆಂಟ್ ಗವರ್ನರ್ ಸತ್ಯಪಾಲ್ ಮಲ್ಲಿಕ್ ಹೇಳಿಕೆ ಪ್ರಚಾರಕ್ಕೆ ಬರುತ್ತಿಲ್ಲ. ದಾಳಿಯಾದ ಬಳಿಕ ಆಗಿನ ಸರ್ಕಾರದ ಅಧಿ ಕೃತ ಪ್ರತಿನಿಧಿ ಗಳ್ಯಾರು ಪತ್ರಿಕಾಗೋಷ್ಠಿ ನಡೆಸಲಿಲ್ಲ. ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪತ್ರಿಕಾಗೋಷ್ಠಿ ಯಲ್ಲಿ ಮೃತಪಟ್ಟವರ ಲೆಕ್ಕ ಹೇಳಿದರು. ಅವರಿಗೆ ಹೇಗೆ ಗೊತ್ತಿತ್ತು ಎಂದು ಪ್ರಶ್ನಿಸಿದರು.
ಸಾಲ ಮಾಡಿ ದೇಶ ಬಿಟ್ಟು ಪರಾರಿಯಾಗಿರುವ 25 ಮಂದಿಯಲ್ಲಿ 12 ಜನ ಗುಜರಾತ್‌ನವರಿದ್ದಾರೆ. ಅವರನ್ನು ಈವರೆಗೂ ವಾಪಸ್ ಕರೆತರಲಾಗಿಲ್ಲ. ಉದ್ಯಮಿ ಗೌತಮ್ ಅದಾನಿಯವರ ಸಂಪತ್ತು 11 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಾಗಿದ್ದು ಹೇಗೆ ಎಂಬ ವಿಚಾರ ವಿಶ್ಲೇಷಣೆಯಾಗುವುದಿಲ್ಲ. ಸರ್ಕಾರದ ವಿಮಾನನಿಲ್ದಾಣ, ಬಂದರು, ರಸ್ತೆ ಸೇರಿದಂತೆ ಎಲ್ಲವನ್ನೂ ಅವರಿಗೆ ನೀಡಲಾಗಿದೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರ ಸರ್ವಾಧಿ ಕಾರಿ ಧೋರಣೆ ಅನುಸರಿಸುತ್ತಿದೆ. ಈಗಾಗಲೇ ಎಕ್‌್ಸ ಖಾತೆಯ ಮೇಲೆ ನಿಗಾ ವಹಿಸಲಾಗಿದೆ. ಮುಂದುವರೆದು ವಾಟ್‌್ಸ ಆಪ್ ಸಂದೇಶಗಳಿಗೂ ಕಳ್ಳಗಣ್ಣಿಡುವ ಪ್ರಯತ್ನಗಳಾಗುತ್ತಿವೆ. ಸಾರ್ವಜನಿಕ ಉದ್ಯಮವಾಗಿರುವ ಬಿಎಸ್‌ಎನ್‌ಎಲ್ ಅನ್ನು ಮುಚ್ಚಿಸಿ ಖಾಸಗಿ ಸಂಸ್ಥೆ ಜಿಯೋವನ್ನು ಉದ್ಧಾರ ಮಾಡಲಾಗುತ್ತಿದೆ ಎಂದು ದೂರಿದರು.