Sunday, November 24, 2024
Homeರಾಜಕೀಯ | Politics5 ವರ್ಷ ಸರ್ಕಾರ ಗಟ್ಟಿಯಾಗಿರಲಿದೆ : ಸತೀಶ್ ಜಾರಕಿಹೊಳಿ

5 ವರ್ಷ ಸರ್ಕಾರ ಗಟ್ಟಿಯಾಗಿರಲಿದೆ : ಸತೀಶ್ ಜಾರಕಿಹೊಳಿ

Satish Jarakiholi

ಚಿಕ್ಕಮಗಳೂರು, ಅ.10– ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಈಗಾಗಲೇ 18 ತಿಂಗಳು ಮುಗಿದಿದ್ದು ಪೂರ್ಣ ಐದು ವರ್ಷ ಸರ್ಕಾರ ಗಟ್ಟಿಯಾಗಿರಲಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

ತರೀಕೆರೆಯಲ್ಲಿ ಲೋಕೋಪಯೋಗಿ ಇಲಾಖೆಯ ವಿವಿಧ ಕಾರ್ಯಕ್ರಮಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆಗೆ ಆಗಮಿಸಿದ್ದು ಹಾಗೆಯೇ ಸ್ಥಳೀಯ ಶಾಸಕ ಎಚ್ ಡಿ ತಮ್ಮಯ್ಯ ಮನೆಗೆ ಆಗಮಿಸಿ ಬೆಳಗಿನ ಉಪಹಾರ ಸೇವಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಶಾಸಕರು ಕಳೆದ ಬಾರಿಗಿಂತ ಮಳೆ ಹೆಚ್ಚಾಗಿರುವ ಪರಿಣಾಮ ರಸ್ತೆಗಳು ಹಾನಿಯಾಗಿರುವ ಕುರಿತು ತಮ್ಮ ಗಮನ ಸೆಳೆದಿದ್ದರು .

ಹಾಗಾಗಿ ಚಿಕ್ಕಮಗಳೂರಿಗೆ ಆಗಮಿಸಿದ್ದು ಅಧಿಕಾರಿಗಳ ಜೊತೆ ಈ ಬಗ್ಗೆ ಚರ್ಚಿಸಲಾಗಿದೆ ಎಂದರು. ಜಿಲ್ಲೆಯಲ್ಲಿ ರಸ್ತೆಗಳು ತುಂಬಾ ಹಾನಿ ಗಿಡ ಆಗಿರುವ ಬಗ್ಗೆ ಪ್ರಶ್ನಿಸಿದಾಗ ಉತ್ತರಿಸಿ ಸಚಿವರು ಈಗಾಗಲೇ ಸ್ವಲ್ಪ ಅನುದಾನವನ್ನು ರಸ್ತೆ ಅಭಿವೃದ್ಧಿಗೆ ಬಿಡುಗಡೆ ಮಾಡಿದ್ದು ಇನ್ನೊಮ್ಮೆ ಜಿಲ್ಲೆಗೆ ಆಗಮಿಸಿ ರಸ್ತೆಗಳ ದುರಸ್ತಿ ಪಡಿಸುವ ಬಗ್ಗೆ ಖುದ್ದಾಗಿ ನೋಡಿ ಅವಶ್ಯಕತೆ ಇದ್ದರೆ ವಿಶೇಷ ಅನುದಾನ ನೀಡುವುದಾಗಿ ಭರವಸೆ ನೀಡಿದರು.

ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿ ವಿಪಕ್ಷದ ಮುಖಂಡರು ಹೇಳಿದ ತಕ್ಷಣ ಸರ್ಕಾರ ಬೀಳುವುದಿಲ್ಲ ಜಾತಿಗಣತಿ ವರದಿ ಕುರಿತು ಕ್ಯಾಬಿನೆಟ್ ನಲ್ಲಿ ಚರ್ಚೆ ಆಗಬೇಕು ಸದನಕ್ಕೆ ಬರಬೇಕು ಅದರಲ್ಲಿ ಏನಿದೆ ಎಂದು ನೋಡೋಣ ಅನಂತರ ತೀರ್ಮಾನ ಎಂದರು.

ಸತೀಶ್ ಜಾರಕಿಹೊಳಿ ಪರ ತಮಯ್ಯ ಬ್ಯಾಟಿಂಗ್: ಸಿಎಂ ಸಿದ್ದರಾಮಯ್ಯ ನಂತರ ರಾಜ್ಯ ಕಾಂಗ್ರೆಸ್ ನಲ್ಲಿ ಯಾರಾದರೂ ಗಟ್ಟಿ ನಾಯಕರಿದ್ದರೆ ಅದು ಸತೀಶ್ ಜಾರಕಿಹೊಳಿಯವರು ಮಾತ್ರ ಎಂದು ಚಿಕ್ಕಮಗಳೂರು ಕ್ಷೇತ್ರದ ಶಾಸಕ ಎಚ್.ಡಿ. ತಮಯ್ಯ ಸತೀಶ್ ಜಾರಕಿಹೊಳಿ ಪರ ಬ್ಯಾಟಿಂಗ್ ಮಾಡಿದರು.

ರಾಜ್ಯದಲ್ಲಿ ದಲಿತ ಸಿಎಂ ಕೂಗು, ಸಿಎಂ ಬದಲಾವಣೆ, ರಾಜೀನಾಮೆ, ಪ್ರತ್ಯೇಕ ಸಭೆ, ಮೀಟಿಂಗು ಎಚ್ಚುತ್ತಿರುವ ಹಿನ್ನೆಲೆಯಲ್ಲಿ ಸತೀಶ್ ಜಾರಕಿಹೊಳಿ ಪರ ಹೇಳಿಕೆ ನೀಡಿರುವುದು ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಒಂದು ಕಡೆ ಡಿಕೆಶಿ ಸಿಎಂ ಕನಸು ಕಾಣುತ್ತಿದ್ದಾರೆ ಇನ್ನೊಂದು ಕಡೆ ಸತೀಶ್ ಜಾರಕಿಹೊಳಿ ಅವರ ಹೆಸರು. ಮತ್ತೊಂದು ಕಡೆ ತೆರೆಮರೆಯಲ್ಲಿ ಕರಗಿ ಹಾಗೂ ಪರಮೇಶ್ವರ್ ಕಸರತ್ತಿನ ಒದಂತಿಗಳು ಜೋರಾಗಿವೆ.

ಈ ನಡುವೆ ಸಾರ್ವಜನಿಕವಾಗಿ ಮಾತನಾಡಿರುವ ಸ್ಥಳೀಯ ಶಾಸಕ ತಮ್ಮಯ್ಯ ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಹೊರತುಪಡಿಸಿದರೆ ಸತೀಶ್ ಜಾರಕಿಹೊಳಿ ಅವರೇ, ಭವಿಷ್ಯದ ನಾಯಕರು ಸತೀಶ್ ಜಾರಕಿಹೊಳಿಯವರು ಸರಳ ಸಜ್ಜನ ಮನುಷ್ಯ ಮತ್ತೊಬ್ಬರಿಲ್ಲ ಸಿದ್ದು ನಂತರ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಅಂತಹ ನಾಯಕನಿದ್ದರೆ ಅದು ಸತೀಶ್ ಜಾರಕಿಹೊಳಿ ಎಂದು ಬ್ಯಾಟಿಂಗ್ ಮಾಡಿರುವುದು ಮುಂದಿನ ರಾಜಕೀಯ ಬದಲಾವಣೆಗಳಿಗೆ ಸಾಕ್ಷಿ ಆಗಲಿದೆ ಎಂಬುದು ಕಾದು ನೋಡಬೇಕಾಗಿದೆ.

RELATED ARTICLES

Latest News