Friday, November 22, 2024
Homeರಾಜಕೀಯ | Politicsಸಿದ್ದರಾಮಯ್ಯ ರಾಜೀನಾಮೆ ನೀಡಿದರೆ ಬೆಳಗಾವಿ ಜಿಲ್ಲೆಯವರು ಸಿಎಂ ಎಂಬ ಪೋಸ್ಟರ್ ವೈರಲ್, ಭಾರಿ ಚರ್ಚೆ

ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ ಬೆಳಗಾವಿ ಜಿಲ್ಲೆಯವರು ಸಿಎಂ ಎಂಬ ಪೋಸ್ಟರ್ ವೈರಲ್, ಭಾರಿ ಚರ್ಚೆ

Satish Jarkiholi

ಬೆಂಗಳೂರು,ಸೆ.8- ಸಿದ್ದರಾಮಯ್ಯ ಅವರು ರಾಜೀನಾಮೆ ಕೊಟ್ಟರೆ ಮುಂದಿನ ಮುಖ್ಯಮಂತ್ರಿ ಬೆಳಗಾವಿ ಜಿಲ್ಲೆಯವರು ಎಂಬ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ.

ಮುಡಾ ಪ್ರಕರಣದಲ್ಲಿ ಸೆ.9 ಮತ್ತು 12 ರಂದು ನ್ಯಾಯಾಲಯದ ವಿಚಾರಣೆ ನಡೆಯಲಿದೆ. ಈ ಸಂದರ್ಭದಲ್ಲಿ ರಾಜ್ಯಪಾಲರು ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ಅಭಿಯೋಜನೆಗೆ ನೀಡಿರುವ ಪೂರ್ವಾನುಮತಿಯನ್ನು ಹೈಕೋರ್ಟ್‌ ಎತ್ತಿ ಹಿಡಿದರೆ ಸಿದ್ದರಾಮಯ್ಯ ಅವರ ವಿರುದ್ಧ ಪ್ರಕರಣ ದಾಖಲಾಗುತ್ತದೆ. ಅಂತಹ ಸಂದರ್ಭದಲ್ಲಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕಾಗುತ್ತದೆ ಎಂಬ ವ್ಯಾಖ್ಯಾನಗಳಿವೆ.

ಸತೀಶ್‌ ಜಾರಕಿಹೊಳಿಯವರು ಮುಖ್ಯಮಂತ್ರಿಯಾಗಲು ತೆರೆಮರೆಯಲ್ಲಿ ಭಾರೀ ಕಸರತ್ತು ನಡೆಸುತ್ತಿದ್ದಾರೆ. ದೆಹಲಿಗೆ ಪದೇಪದೇ ಭೇಟಿ ನೀಡುತ್ತಿದ್ದು, ಹೈಕಮಾಂಡ್‌ ನಾಯಕರನ್ನು ಭೇಟಿಯಾಗಿ ತಮ ಅಭಿಲಾಷೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಇದು ಅವರ ಬೆಂಬಲಿಗರಲ್ಲಿ ಮತ್ತಷ್ಟು ಭರವಸೆಗಳನ್ನು ಹುಟ್ಟುಹಾಕಿವೆ. ಇದಕ್ಕೆ ಪೂರಕ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಂದೇಶಗಳು ಹರಿದಾಡಲಾರಂಭಿಸಿವೆ.

ಮುಂದಿನ ಮುಖ್ಯಮಂತ್ರಿ ಸತೀಶ್‌ ಜಾರಕಿಹೊಳಿ ಎಂಬ ಪ್ರತ್ಯೇಕ ಗ್ರೂಪ್‌ಗಳೇ ಸೃಷ್ಟಿಯಾಗಿವೆ. ಖಾಸಗಿ ಮಾಧ್ಯಮವೊಂದು ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆಯನ್ನು ಮುಂದಿಟ್ಟಾಗ ಸತೀಶ್‌ ಜಾರಕಿಹೊಳಿ ಎಲ್ಲರಿಗಿಂತ ಹೆಚ್ಚಿನ ಜನಾಭಿಪ್ರಾಯ ಪಡೆದಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಪರವಾಗಿ ಶೇ.25 ರಷ್ಟು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪರವಾಗಿ ಶೇ.32 ರಷ್ಟು ಅಭಿಪ್ರಾಯಗಳು ಕ್ರೂಢೀಕೃತವಾದರೆ, ಸತೀಶ್‌ ಜಾರಕಿಹೊಳಿ ಪರವಾಗಿ ಶೇ.43ರಷ್ಟು ಮಂದಿ ಒಲವು ತೋರಿಸಿದ್ದಾರೆ.

ಇದರ ನಡುವೆ ವಿಚಿತ್ರ ಎಂಬಂತೆ ಬಿಜೆಪಿ ನಾಯಕರ ಫೋಟೊ ಬಳಸಿ ರಜನೀಶ್‌ ಆಚಾರ್ಯ ಎಂಬುವರು ಸತೀಶ್‌ ಜಾರಕಿಹಹೊಳಿಯವರು ಮುಖ್ಯಮಂತ್ರಿಯಾದರೆ ತುಂಬು ಹೃದಯದಿಂದ ಸ್ವಾಗತಿಸುತ್ತೇವೆ ಎಂದು ಜಾಹೀರಾತು ನೀಡಿದ್ದಾರೆ.

ಗೌರಿ-ಗಣೇಶ ಹಬ್ಬದ ಶುಭಾಶಯ ತಿಳಿಸಿರುವ ಪೋಸ್ಟರ್‌ನಲ್ಲಿ ಮೊದಲ ಬಾರಿಗೆ ಬೆಳಗಾವಿ ಜಿಲ್ಲೆಗೆ ಸಿಎಂ ಸ್ಥಾನ, ಸತೀಶ್‌ ಜಾರಕಿಹೊಳಿಯವರಿಗೆ ಲಭಿಸುವುದಾದರೆ ಸ್ವಾಗತವಿದೆ ಎಂದು ಹೇಳಿರುವ ರಜನೀಶ್‌ ಆಚಾರ್ಯ ಅವರು ಒಂದು ಕಡೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಶಾಸಕ ರಮೇಶ್‌ ಜಾರಕಿಹೊಳಿಯವರ ಭಾವಚಿತ್ರ ಪ್ರಕಟಿಸಿದರೆ ಮತ್ತೊಂದು ಕಡೆ ಸತೀಶ್‌ ಜಾರಕಿಹೊಳಿಯವರ ಭಾವಚಿತ್ರ ಹಾಕಿದ್ದಾರೆ. ಇದು ಸಾಕಷ್ಟು ವೈರಲ್‌ ಆಗುತ್ತಿದೆ.ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್‌‍ನಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆಗಳು ಸಾಕಷ್ಟು ವೈರಲ್‌ ಆಗುತ್ತಿವೆ.

RELATED ARTICLES

Latest News