Wednesday, September 3, 2025
Homeಇದೀಗ ಬಂದ ಸುದ್ದಿಸೌಜನ್ಯ ಕೇಸ್‌‍ : ಕ್ಲೀನ್‌ಚಿಟ್‌ ಪಡೆದಿದ್ದ ಆರೋಪಿಗಳನ್ನು ಪುನಃ ತನಿಖೆಗೆ ಒಳಪಡಿಸಿದ ಎಸ್‌‍ಐಟಿ

ಸೌಜನ್ಯ ಕೇಸ್‌‍ : ಕ್ಲೀನ್‌ಚಿಟ್‌ ಪಡೆದಿದ್ದ ಆರೋಪಿಗಳನ್ನು ಪುನಃ ತನಿಖೆಗೆ ಒಳಪಡಿಸಿದ ಎಸ್‌‍ಐಟಿ

Saujanya case: SIT re-investigates accused who got clean chit

ಬೆಂಗಳೂರು,ಸೆ.3– ರಾಜ್ಯಾದ್ಯಂತ ಭಾರೀ ಸದ್ದು ಮಾಡಿದ್ದ ವೈದ್ಯಕೀಯ ವಿದ್ಯಾರ್ಥಿನಿ ಸೌಜನ್ಯ ಭಟ್‌ ಕೊಲೆ ಪ್ರಕರಣದಲ್ಲಿ ಈ ಹಿಂದೆ ಸಿಬಿಐನಿಂದ ಕ್ಲೀನ್‌ಚಿಟ್‌ ಪಡೆದಿದ್ದ ಆರೋಪಿಗಳನ್ನು ವಿಶೇಷ ತನಿಖಾ ತಂಡ(ಎಸ್‌‍ಐಟಿ) ಪುನಃ ತನಿಖೆಗೆ ಒಳಪಡಿಸಿದೆ. ಪ್ರಕರಣದಲ್ಲಿ ತಳುಕು ಹಾಕಿಕೊಂಡಿದ್ದ ಉದಯ್‌ಕುಮಾರ್‌ ಜೈನ್‌, ಧೀರಜ್‌ ಕೆಲ್ಲಾ ಮತ್ತು ಮಲ್ಲಿಕ ಜೈನ್‌ ಅವರುಗಳಿಂದ ಬೆಳ್ತಂಗಡಿಯ ಎಸ್‌‍ಐಟಿ ಕಚೇರಿಯಲ್ಲಿ ಮಾಹಿತಿ ಪಡೆಯಲಾಗಿದೆ.

ಇತ್ತೀಚೆಗಷ್ಟೇ ಸೌಜನ್ಯ ತಾಯಿ ಎಸ್‌‍ಐಟಿಗೆ ದೂರು ನೀಡಿ ತಮ ಮಗಳ ಕೊಲೆ ಪ್ರಕರಣವನ್ನು ತನಿಖೆ ನಡೆಸಬೇಕೆಂದು ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಮೂವರನ್ನು ವಿಚಾರಣೆಗೆ ಗುರಿಪಡಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಪ್ರಕರಣದ ಹಿನ್ನೆಲೆ :
2012ರ ಅಕ್ಟೋಬರ್‌ನಲ್ಲಿ ಸೌಜನ್ಯ ಕಾಲೇಜಿನಿಂದ ಮನೆಗೆ ತೆರಳುವಾಗ ಕಾಣೆಯಾಗಿದ್ದರು. ಮರುದಿನ ಅವರ ಮೃತದೇಹ ಧರ್ಮಸ್ಥಳದ ಬಳಿಯ ಪಾಂಗಲದಲ್ಲಿ ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಬೆಳ್ತಂಗಡಿ ಪೊಲೀಸರು ಆರಂಭಿಕ ತನಿಖೆ ನಡೆಸಿದ್ದು, ಸಂತೋಷ್‌ ರಾವ್‌ ಎಂಬಾತನನ್ನು ಬಂಧಿಸಿದ್ದರು. ನಂತರ ಈ ಪ್ರಕರಣವನ್ನು ಸಿಐಡಿ ಮತ್ತು 2013ರಲ್ಲಿ ಸಿಬಿಐಗೆ ವರ್ಗಾಯಿಸಲಾಗಿತ್ತು. ಆದರೆ 2023ರ ಜೂನ್‌ 16ರಂದು ಸಿಬಿಐ ವಿಶೇಷ ನ್ಯಾಯಾಲಯವು ಸಂತೋಷ್‌ ರಾವ್‌ನನ್ನು ಸಾಕ್ಷ್ಯಗಳ ಕೊರತೆಯಿಂದಾಗಿ ಖುಲಾಸೆಗೊಳಿಸಿತ್ತು. ತನಿಖೆಯಲ್ಲಿ ಲೋಪದೋಷಗಳಿವೆ ಎಂದು ನ್ಯಾಯಾಲಯ ಟೀಕಿಸಿತ್ತು. ಇದರಿಂದ ಸೌಜನ್ಯ ಕುಟುಂಬಸ್ಥರು ಮತ್ತು ಕಾರ್ಯಕರ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

ಈಗ ಎಸ್‌‍ಐಟಿ ಈ ಪ್ರಕರಣವನ್ನು ಕೈಗೆತ್ತಿಕೊಂಡಿದ್ದು, ಉದಯ್‌ ಜೈನ್‌ ಸೇರಿದಂತೆ ಆರೋಪಿತರನ್ನು ವಿಚಾರಣೆಗೊಳಪಡಿಸಿದೆ. ಉದಯ್‌ ಜೈನ್‌ ಅವರಿಗೆ ಎಸ್‌‍ಐಟಿ ಕರೆ ಮಾಡಿ ಇಂದು ಬೆಳ್ತಂಗಡಿ ಕಚೇರಿಗೆ ಬರಲು ಸೂಚಿಸಿತ್ತು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ವಿಚಾರಣೆಗೆ ಸಿದ್ಧನಿದ್ದೇನೆ. ಸತ್ಯವನ್ನು ಹೇಳುವವರಿಗೆ ಭಯವಿಲ್ಲ, ಸುಳ್ಳು ಹೇಳುವವರಿಗೇ ಭಯ ಇರುತ್ತದೆ ಎಂದು ಹೇಳಿದರು. ತಾವು ಈಗಾಗಲೇ ಸಿಬಿಐ ತನಿಖೆಯಲ್ಲಿ ಭಾಗಿಯಾಗಿದ್ದು, ಡಿಎನ್‌ಎ, ಬ್ರೈನ್‌ ಮ್ಯಾಪಿಂಗ್‌, ಮತ್ತು ಪಾಲಿಗ್ರಾಫ್‌ ಪರೀಕ್ಷೆಗಳಿಗೆ ಒಳಗಾಗಿದ್ದೇವೆ ಎಂದು ಒತ್ತಿ ಹೇಳಿದರು.

ಇನ್ನೊಮೆ ಬ್ರೈನ್‌ ಮ್ಯಾಪಿಂಗ್‌ ಮಾಡಲಿ, ನಾನು ಸಿದ್ಧನಿದ್ದೇನೆ. ಸಾಯುವವರೆಗೂ ತನಿಖೆಗೆ ತಯಾರಾಗಿದ್ದೇನೆ ಎಂದು ಉದಯ್‌ ಜೈನ್‌ ತಮ ನಿರಪರಾಧಿತ್ವವನ್ನು ಸಮರ್ಥಿಸಿಕೊಂಡರು. ಅವರು ಸೌಜನ್ಯ ಕುಟುಂಬದ ತಾಯಿಯ ಬಗ್ಗೆ ಗೌರವ ವ್ಯಕ್ತಪಡಿಸಿದರು ಕೂಡ ಕುಟುಂಬವು ತಮನ್ನು ಬಾಣವಾಗಿ ಬಳಸಿಕೊಂಡು ತಮ ಖ್ಯಾತಿಗೆ ಕಳಂಕ ತಂದಿದೆ ಎಂದು ಆರೋಪಿಸಿದ್ದಾರೆ.

RELATED ARTICLES

Latest News