Friday, November 22, 2024
Homeರಾಷ್ಟ್ರೀಯ | Nationalಚುನಾವಣಾ ಪ್ರಚಾರಕ್ಕಾಗಿ ಎಎಪಿ ಶಾಸಕನಿಗೆ ಜಾಮೀನು ನಿರಾಕರಿಸಿದ ಸುಪ್ರೀಂ

ಚುನಾವಣಾ ಪ್ರಚಾರಕ್ಕಾಗಿ ಎಎಪಿ ಶಾಸಕನಿಗೆ ಜಾಮೀನು ನಿರಾಕರಿಸಿದ ಸುಪ್ರೀಂ

ನವದೆಹಲಿ, ಮೇ 29-ಬ್ಯಾಂಕ್‌ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ಬಂಧಿಸಲ್ಪಟ್ಟಿರುವ ಪಂಜಾಬ್‌ ಎಎಪಿ ಶಾಸಕ ಜಸ್ವಂತ್‌ ಸಿಂಗ್‌ ಗಜ್ಜನ್‌ ಮಜ್ರಾ ಅವರಿಗೆ ಮಧ್ಯಂತರ ಜಾಮೀನು ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

ನ್ಯಾಯಮೂರ್ತಿಗಳಾದ ಸಂಜಯ್‌ ಕರೋಲ್‌ ಮತ್ತು ಅರವಿಂದ್‌ ಕುಮಾರ್‌ ಅವರನ್ನೊಳಗೊಂಡ ರಜಾಕಾಲದ ಪೀಠವು ಇಡಿಗೆ ನೋಟಿಸ್‌‍ ಜಾರಿ ಮಾಡಿದೆ ಮತ್ತು ಪ್ರಸ್ತುತ ಲೋಕಸಭೆ ಚುನಾವಣೆಗೆ ಪ್ರಚಾರ ಮಾಡಲು ಮಧ್ಯಂತರ ಜಾಮೀನು ಕೋರಿ ಮಜ್ರಾ ಸಲ್ಲಿಸಿದ ಮನವಿಯ ಬಗ್ಗೆ ಪ್ರತಿಕ್ರಿಯೆ ಕೇಳಿದೆ.

ಶಾಸಕರ ಪರ ವಾದ ಮಂಡಿಸಿದ ವಕೀಲರು ಚುನಾವಣಾ ಪ್ರಚಾರಕ್ಕಾಗಿ ಜೂನ್‌ 4ರವರೆಗೆ ಮಧ್ಯಂತರ ಜಾಮೀನು ಕೋರಿದರು.ಪ್ರತಿವಾದಿಗಳ ಮಾತುಗಳನ್ನು ಕೇಳದೆ ಕಳೆದ ಸೆಪ್ಟೆಂಬರ್‌ 2022 ರಲ್ಲಿ, ಆಪಾದಿತ ಬ್ಯಾಂಕ್‌ ಸಾಲದ ವಂಚನೆಗೆ ಸಂಬಂಧಿಸಿದ ಮನಿ ಲಾಂಡರಿಂಗ್‌ ತನಿಖೆಯ ಭಾಗವಾಗಿ ಇಡಿ ಅವರಿಗೆ ಸಂಬಂಧಿಸಿದ ಹಲವಾರು ಆವರಣಗಳ ಮೇಲೆ ದಾಳಿ ನಡೆಸಿತು.

ಇಡಿ ತಂಡ ದಾಳಿ ವೇಳೆ 32 ಲಕ್ಷ ರೂಪಾಯಿ ನಗದು, ಕೆಲವು ಮೊಬೈಲ್‌ ಫೋನ್‌ಗಳು ಮತ್ತು ಹಾರ್ಡ್‌ ಡ್ರೈವ್‌ಗಳನ್ನು ವಶಪಡಿಸಿಕೊಂಡಿದೆ ನಂತರ ಬಂದಿಸಿತ್ತು . ಜೂನ್‌ 1 ರಂದು ಕೊನೆಯ ಹಂತದಲ್ಲಿ ಪಂಜಾಬ್‌ ರಾಜ್ಯದಲ್ಲಿ ಲೋಕಸಭೆ ಚುನಾವಣೆ ನಡೆಯುತ್ತಿದೆ.

RELATED ARTICLES

Latest News