ಅಲಾಸ್ಕಾ, ಫೆ.7- ಹತ್ತು ಜನರಿದ್ದ ಬೇರಿಂಗ್ ಏರ್ ಫ್ಲೈಟ್ ನಿನ್ನೆ ಮಧ್ಯಾಹ್ನ ಅಲಾಸ್ಕಾದ ನೋಮ್ ಬಳಿ ನಾಪತ್ತೆಯಾಗಿದೆ ಎಂದು ವರದಿಯಾಗಿದೆ. ಫ್ಲೈಟ್ ಟ್ರ್ಯಾಕಿಂಗ್ ವೆಬ್ಸೈಟ್ ಫ್ಲೈಟ್ ರಾಡಾರ್ನ ಮಾಹಿತಿಯ ಪ್ರಕಾರ, ನೋಮ್-ಬೌಂಡ್ ವಿಮಾನವು ಅಲಾಸ್ಕನ್ ಪಟ್ಟಣವಾದ ಉನಾಲಕ್ಲೀಟ್ನಿಂದ ಸ್ಥಳೀಯ ಕಾಲಮಾನ ಮಧ್ಯಾಹ್ನ 2.37 ಕ್ಕೆ ಟೇಕ್ ಆಫ್ ಆದ ನಂತರ 3.16 ಕ್ಕೆ ರಾಡಾರ್ ಆಫ್ ಆಯಿತು.
ಸೆಸ್ನಾ 208ಬಿ ಗ್ರ್ಯಾಂಡ್ ಕ್ಯಾರವಾನ್ ವಿಮಾನವು ಪೈಲಟ್ ಸೇರಿದಂತೆ ಹತ್ತು ಮಂದಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು. ಶೋಧ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ಅಲಾಸ್ಕಾದ ಸಾರ್ವಜನಿಕ ಸುರಕ್ಷತಾ ಇಲಾಖೆಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.