ಬೆಂಗಳೂರು, ಮೇ 22- ಸಿಇಟಿ 2024ಕ್ಕೆ ಸಂಬಂಧಿಸಿದಂತೆ ಸಿಬಿಎಸ್ಸಿ, ಐಸಿಎಸ್ಸಿಇ, ಐಜಿಸಿಎಸ್‌ಇ ಯ ಹಾಗೂ 2024 ಕ್ಕಿಂತ ಮೊದಲೇ ದ್ವಿತೀಯ ಪಿಯುಸಿ ಹಾಗೂ 12ನೇ ತರಗತಿ ತೇರ್ಗಡೆಯಾಗಿರುವ ಅಭ್ಯರ್ಥಿಗಳು ತಮ್ಮ ಅಂಕಗಳನ್ನು ದಾಖಲಿಸಲು ಮೇ 25 ರವರೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅವಕಾಶ ಮಾಡಿಕೊಟ್ಟಿದೆ.
ಕೆಇಎ ಪೋರ್ಟಲ್ ಮೂಲಕ 12ನೇ ತರಗತಿಯ ಅಂಕಗಳನ್ನು ದಾಖಲಿಸಲು ಮೇ 20 ರವರೆಗೆ ಕಾಲಾವಕಾಶ ನೀಡಲಾಗಿತ್ತು.ಆದರೆ ಇದುವರೆಗೆ ಅಂಕಗಳನ್ನು ದಾಖಲಿಸದೇ ಇರುವ ಅಭ್ಯರ್ಥಿಗಳ ಅನುಕೂಲಕ್ಕಾಗಿ ಮೇ 23 ರ ಸಂಜೆ 4 ರಿಂದ ಮೇ 25 ರ ಸಂಜೆ 5.30 ರವರೆಗೆ ಅಂಕಗಳನ್ನು ದಾಖಲಿಸಲು ಕೆಇಎ ಪೋರ್ಟಲ್ ಅನ್ನು ಮತ್ತೊಮೆ ತೆರೆಯುವುದಾಗಿ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.
ಆರ್ಕಿಟೆಕ್ಚರ್ ಪೋಸ್ಟ್‌ನ ಪ್ರವೇಶಕ್ಕಾಗಿ ಅಭ್ಯರ್ಥಿಗಳು 2024 ರ ನಾಟಾ ಪರೀಕ್ಷೆಯ ಅಂಕಗಳನ್ನು ಅರ್ಹತೆ ಅನುಗುಣವಾಗಿ ದಾಖಲಿಸಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಪ್ರಾಧಿಕಾರದ ವೆಬ್‌ಸೈಟ್ ಸಂಪರ್ಕಿಸಲು ಕೋರಲಾಗಿದೆ.