Thursday, April 17, 2025
Homeರಾಜ್ಯPUC Results : ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

PUC Results : ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

Second PUC result announced

ಬೆಂಗಳೂರು,ಏ.8– ವಿದ್ಯಾರ್ಥಿ ಜೀವನದ 2ನೇ ಅತಿ ಮಹತ್ವದ ಘಟ್ಟ ಎನಿಸಿದ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ಶೇ.73.45ರಷ್ಟು ಫಲಿತಾಂಶ ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ.7.7ರಷ್ಟು ಕುಸಿತ ಕಂಡಿದೆ. ಕಳೆದ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಶೇ.81.15ರಷ್ಟು ಬಂದಿತ್ತು. ಈ ಬಾರಿ ಶೇ.73.45 ಬಂದಿದೆ.

ಕಲಾ ವಿಭಾಗದಲ್ಲಿ ಬಳ್ಳಾರಿ ಜಿಲ್ಲೆ ಕೂಡ್ಲಗಿ ತಾಲ್ಲೂಕು ಕೊಟ್ಟೂರಿನ ಹಿಂದೂ ಪಿಯು ಕಾಲೇಜಿನ ಎಲ್‌.ಆರ್‌.ಸಂಜನಾ ಬಾಯಿ ಅವರು 600 ಅಂಕಗಳಿಗೆ 597 ಅಂಕ ಪಡೆದು ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕೆನರಾ ಪಿಯು ಕಾಲೇಜಿನ ವಿದ್ಯಾರ್ಥಿನಿ ದೀಪಶ್ರೀ 600ಕ್ಕೆ 599 ಹಾಗೂ ವಿಜ್ಞಾನ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಕ್‌್ಸಪರ್ಟ್‌ ಪಿಯುಸಿ ಕಾಲೇಜಿನ ವಿದ್ಯಾರ್ಥಿನಿ ಅಮೂಲ್ಯ ಕಾಮತ್‌ 600 ಅಂಕಗಳಿಗೆ 599 ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧುಬಂಗಾರಪ್ಪ ಪರೀಕ್ಷಾ ಮಂಡಳಿ ಅಧ್ಯಕ್ಷ ಬಸವ ರಾಜೇಂಧ್ರ, ಸರ್ಕಾರದ ಪ್ರಧಾನ ಕಾರ್ಯದರ್ಶಿ ರಶಿ ಮಹೇಶ್‌, ಪದವಿಪೂರ್ವ ಮಂಡಳಿ ನಿರ್ದೇಶಕಿ ಸಿಂಧು ರೂಪೇಶ್‌ ಮತ್ತಿತರರು ಇಂದು ಫಲಿತಾಂಶವನ್ನು ಪ್ರಕಟಿಸಿದರು.

ಬಾಲಕಿಯರದ್ದೇ ಮೇಲುಗೈ
2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗೆ ಒಟ್ಟು 3,45,694 ಬಾಲಕಿಯರು ಹಾಜರಾಗಿದ್ದರು. ಈ ಪೈಕಿ 2,69,212 ಬಾಲಕಿಯರು ಉತ್ತೀರ್ಣರಾಗಿದ್ದಾರೆ. ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 6,37,805 ವಿದ್ಯಾರ್ಥಿಗಳ ಪೈಕಿ 4,68,439 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಒಟ್ಟಾರೆ ಶೇಕಡಾ 73.45 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾದಂತಾಗಿದೆ.

ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ.57.11ರಷ್ಟು ಫಲಿತಾಂಶ ಬಂದಿದೆ. ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ 62.69ರಷ್ಟು, ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ 82.66ರಷ್ಟು, ಬಿಬಿಎಂಪಿ ವ್ಯಾಪ್ತಿಯ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ 68.88ರಷ್ಟು, ವಿಭಜಿತ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ.78.58ರಷ್ಟು ಹಾಗೂ ವಸತಿ ಶಾಲಾ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ 86.18ರಷ್ಟು ಫಲಿತಾಂಶ ಬಂದಿದೆ.

ಮಾರ್ಚ್‌ 1ರಿಂದ ಮಾರ್ಚ್‌ 20ರ ವರೆಗೆ ದ್ವಿತೀಯ ಪಿಯು ಪರೀಕ್ಷೆ ನಡೆದಿತ್ತು. ಒಟ್ಟು 1171 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಉತ್ತರಪತ್ರಿಕೆಗಳ ಮೌಲ್ಯಮಾಪನ ಕಾರ್ಯವು 76 ಕೇಂದ್ರಗಳಲ್ಲಿ ಮಾ.21ರಿಂದ ಏ.2ರವರೆಗೆ 28,092 ಮೌಲ್ಯಮಾಪಕರಿಂದ ನಡೆಸಲಾಗಿತ್ತು.

ಶೇ.100ರಷ್ಟು ಫಲಿತಾಂಶ:
ಸರ್ಕಾರಿ ಪದವಿ ಪೂರ್ವ ಕಾಲೇಜು -13
ಅನುದಾನಿತ ಪದವಿಪೂರ್ವ ಕಾಲೇಜು 3
ಅನುದಾನರಹಿತ ಪದವಿಪೂರ್ವ ಕಾಲೇಜು 103
ವಿಭಜಿತ ಪದವಿಪೂರ್ವ ಕಾಲೇಜು -0
ವಸತಿ ಶಾಲಾ ಪದವಿಪೂರ್ವ ಕಾಲೇಜು- 15
ಒಟ್ಟು 134

ಶೂನ್ಯ ಫಲಿತಾಂಶ
ಸರ್ಕಾರಿ ಪದವಿ ಪೂರ್ವ ಕಾಲೇಜು -08
ಅನುದಾನ ಪದವಿಪೂರ್ವ ಕಾಲೇಜು 20
ಅನುದಾನರಹಿತ ಪದವಿಪೂರ್ವ ಕಾಲೇಜು 90
ವಿಭಜಿತ ಪದವಿಪೂರ್ವ ಕಾಲೇಜು -0
ವಸತಿ ಶಾಲಾ ಪದವಿಪೂರ್ವ ಕಾಲೇಜು- 05
ಒಟ್ಟು 123

ಯಾವ ಶ್ರೇಣಿಯಲ್ಲಿ ಎಷ್ಟು ಮಂದಿ ಉತ್ತೀರ್ಣ:
ಉನ್ನತ ಶ್ರೇಣಿ- 1,00,571
ಪ್ರಥಮ ದರ್ಜೆ- 2,78,054
ದ್ವೀತಿಯ ದರ್ಜೆ-70969
ತೃತೀಯ ದರ್ಜೆ-18845

ಕಲಾ ವಿಭಾಗ
1.ಸಂಜನಾಬಾಯಿ 597 ಅಂಕ, ಇಂದೂ ಪಿಯು ಕಾಲೇಜು ವಿಜಯನಗರ ಜಿಲ್ಲೆ
2.ನಿರ್ಮಾಲಾ 596 ಅಂಕ ,ಪಂಚಮಸಾಲಿ ಪಿಯು ಕಾಲೇಜು ಹೂವಿನಹಡಗಲಿ
3.ಕೆ.ಆರ್‌.ಶ್ರೀಜಯ ದರ್ಶನಿ 595, ಬೆಂಗಳೂರು ಮಹಾರಾಣಿ ಕಾಲೇಜು

ವಾಣಿಜ್ಯ ವಿಭಾಗ
1.ದೀಪಶ್ರೀ.ಎಸ್‌‍ ಕೆನರಾ ಪಿಯು ಕಾಲೇಜು, ಮಂಗಳೂರು- ಅಂಕ-599
2.ತೇಜಸ್ವಿನಿ- ಭಾರತಮಾತಾ ಪಿಯು ಕಾಲೇಜು ಕೊಪ್ಪ, ಮೈಸೂರು, ಅಂಕ-598
3.ಎಚ್‌.ವಿ.ಭಾರ್ಗವಿ, ಮಹಿಳಾ ಸಮಾಜ ಪಿಯು ಕಾಲೇಜು, ಕೋಲಾರ, ಅಂಕ-597

ವಿಜ್ಞಾನ ವಿಭಾಗ
1.ಅಮೂಲ್ಯ ಕಾಮತ್‌ – ಎಕ್‌್ಸಫರ್ಟ್‌ ಪಿಯು ಕಾಲೇಜು ಮಂಗಳೂರು, ಅಂಕ-599
2.ದೀಕ್ಷಾ.ಆರ್‌ ವಾಗ್ದೇವಿ ಪಿಯು ಕಾಲೇಜು ತೀರ್ಥಹಳ್ಳಿ, ಅಂಕ-599
3.ಬಿಂದು ನಾವಳೆ-ಆಳ್ವಾಸ್‌‍ ಕಾಲೇಜು ಮೂಡಬಿದಿರೆ, ಅಂಕ-598

ಜಿಲ್ಲವಾರು ಫಲಿತಾಂಶ
1.ಉಡುಪಿ – ಶೇ. 93.90
2.ದ.ಕನ್ನಡ – ಶೇ.93.57
3.ಬೆಂಗಳೂರು ದಕ್ಷಿಣ – ಶೇ.85.36
4.ಕೊಡಗು – ಶೇ. 83.84
5.ಬೆಂಗಳೂರು ಉತ್ತರ – ಶೇ. 83.31
6.ಉತ್ತರ ಕನ್ನಡ – ಶೇ. 82.93
7.ಶಿವಮೊಗ್ಗ – ಶೇ. 79.91
8.ಬೆಂಗಳೂರು ಗ್ರಾ. – ಶೇ. 79.70
9.ಚಿಕ್ಕಮಗಳೂರು – ಶೇ. 79.56
10.ಹಾಸನ – ಶೇ. 77.56
11.ಚಿಕ್ಕಬಳ್ಳಾಪುರ – ಶೇ.75.80
12.ಮೈಸೂರು – ಶೇ.74.30
13.ಚಾಮರಾಜನಗರ – ಶೇ.73.97
14.ಮಂಡ್ಯ – ಶೇ.73.27
15.ಬಾಗಲಕೋಟೆ – ಶೇ.72.83
16.ಕೋಲಾರ – ಶೇ.72.45

17.ಧಾರವಾಡ – ಶೇ.72.32
18.ತುಮಕೂರು – ಶೇ.72.02
19.ರಾಮನಗರ – ಶೇ.69.71
20.ದಾವಣಗೆರೆ – ಶೇ. 69.45
21.ಹಾವೇರಿ – ಶೇ. 67.56
22.ಬೀದರ್‌ – ಶೇ.67.31
23.ಕೊಪ್ಪಳ – ಶೇ.67.20
24.ಚಿಕ್ಕೋಡಿ – ಶೇ.66.76
25.ಗದಗ – ಶೇ. 66.64
26.ಬೆಳಗಾವಿ – ಶೇ.65.37
27.ಬಳ್ಳಾರಿ – ಶೇ.64.41
28.ಚಿತ್ರದುರ್ಗ – ಶೇ. 59.87
29.ವಿಜಯಪುರ – ಶೇ. 58.81
30.ರಾಯಚೂರು – ಶೇ.58.75
31.ಕಲಬುರುಗಿ – ಶೇ. 55.70
32.ಯಾದಗಿರಿ – ಶೇ.48.4

    ವಿದ್ಯಾರ್ಥಿಗಳು https://karresults.nic.in ಜಾಲತಾಣದಲ್ಲಿ ಮಧ್ಯಾಹ್ನ 1:30 ಗಂಟೆಯ ನಂತರ ಫಲಿತಾಂಶ ವೀಕ್ಷಿಸಬಹುದಾಗಿದೆ.

    RELATED ARTICLES

    Latest News