ಶ್ರೀನಗರ, ಏ.27- ಪಹಲ್ಯಾಮ್ ದಾಳಿಗೆ ಪ್ರತೀಕಾರವಾಗಿ ಭದ್ರತಾ ಪಡೆಗಳ ಸ್ವಚ್ಛ ಕಾಶ್ಮೀರ ಅಭಿಯಾನ ಮತ್ತಷ್ಟು ತೀವ್ರಗೊಂಡಿದೆ. ಉಗ್ರರ ಮನೆಗಳನ್ನು ಹುಡುಕಿ ಹುಡುಕಿ ಧ್ವಂಸ ಮಾಡುತ್ತಿರುವ ಭದ್ರತಾ ಪಡೆ ಇಂದು ಇಬ್ಬರು ಉಗ್ರರ ಮನೆಗಳನ್ನು ಸ್ಫೋಟಿಸಿದೆ.
ಬಂಡಿಪೋರಾದಲ್ಲಿ ಲಷ್ಕರ್-ಎ-ತೈಬಾ ಭಯೋತ್ಪಾದಕ ಜಮೀಲ್ ಅಹ್ಮದ್ ಮನೆಯನ್ನು ಭದ್ರತಾ ಪಡೆಗಳು ಸ್ಫೋಟಿಸಿವೆ. ಈ ಮೂಲಕ ಕಳೆದ ಮೂರು ದಿನಗಳಲ್ಲಿ 9 ಉಗ್ರರ ಮನೆಗಳನ್ನು ಧ್ವಂಸಗೊಳಿಸಿದಂತಾಗಿದೆ. 2016ರಿಂದ ಸಕ್ರಿಯ ಸದಸ್ಯರಾಗಿರುವ ಜಮೀಲ್ ಅವರ ಮನೆಯನ್ನು ಸ್ಫೋಟಿಸುವುದು ಶುಕ್ರವಾರದಿಂದ ಒಂಬತ್ತನೇ ಘಟನೆಯಾಗಿದೆ.
ಭದ್ರತಾ ಪಡೆಗಳು ಈಗ ಅನುಮಾನ ಬಂವರ ಮನೆಗಳನ್ನು ಹುಡುಕಿ ಶಸ್ತ್ರಾಸ್ತ್ರ ಪತ್ತೆ ಮಾಡುತ್ತಿದ್ದಾರೆ. ಉಗ್ರರಿಗೆ ಸಹಕಾರ ನೀಡಿದ ಆರೋಪದ ಅಡಿ ನೂರಾರು ಮಂದಿ ಸಹಚರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ಏತನ್ಮಧ್ಯೆ, ಭದ್ರತಾ ಪಡೆಗಳು ಕಳೆದ ರಾತ್ರಿ ತ್ರಾಲ್‌ನಲ್ಲಿ ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ ಜೊತೆ ಶಾಮೀಲಾಗಿರುವ ಭಯೋತ್ಪಾದಕ ಅಮೀರ್ ನಜೀರ್‌ನ ಮನೆಯನ್ನು ಸ್ಫೋಟಿಸಿದ್ದಾರೆ. ಕಾಶ್ಮೀರದಲ್ಲಿ ಇಬ್ಬರು ಸಕ್ರಿಯ ಎಲಇಟಿ ಭಯೋತ್ಪಾದಕರ ಮನೆಗಳ ಮೇಲೆ ಬಾಂಬ್ ದಾಳಿ ನಡೆಸಿದ ನಂತರ ಈ ಇತ್ತೀಚಿನ ಬೆಳವಣಿಗೆಗಳು ಸಂಭವಿಸಿವೆ.
ಕಳೆದ ಮೂರು ದಿನಗಳಲ್ಲಿ ಪಹಲ್ಯಾಮ್ ಭಯೋತ್ಪಾದನಾ ದಾಳಿಯ ನಂತರ, ಭದ್ರತಾ ಪಡೆಗಳು, ಜಿಲ್ಲೆಯ ಅಧಿಕಾರಿಗಳ ಜೊತೆಯಲ್ಲಿ ಕಣಿವೆಯಾದ್ಯಂತ ಹಲವಾರು ಭಯೋತ್ಪಾದಕರನ್ನು ಗುರಿಯಾಗಿಸಿ ಅವರ ಆಸ್ತಿಗಳನ್ನು ಧ್ವಂಸಗೊಳಿಸಿದರು ಮತ್ತು ಐಇಡಿಗಳಿಂದ ಸ್ಪೋಟಿಸಿದ್ದಾರೆ.
ಶುಕ್ರವಾರ, ಕಾಶ್ಮೀರದ ಬಿಜ್ಜೆಹರಾದಲ್ಲಿ ಪಹಲ್ಯಾಮ್ ಘಟನೆಯಲ್ಲಿ ಭಾಗಿಯಾಗಿರುವ ಪ್ರಮುಖ ಸಂಚುಕೋರ ಲರ್ಷ್ಯ ಭಯೋತ್ಪಾದಕ ಆದಿಲ್ ಹುಸೇನ್ ಥೋಕರ್ ಅವರ ನಿವಾಸದ ಮೇಲೆ ಭದ್ರತಾ ಪಡೆಗಳು ಬಾಂಬ್ ದಾಳಿ ನಡೆಸಿದ್ದವು. ಏ.22ರಂದು ಪಹಲ್ಗಾಮ್ ನ ಬೈಸರನ್ ಮೆಡೋಸ್‌ನಲ್ಲಿ ಪ್ರವಾಸಿಗರ ಹತ್ಯೆಯಲ್ಲಿ ಭಾಗಿಯಾಗಿರುವ ಭಯೋತ್ಪಾದಕರಿಗೆ ಸಹಾಯ ಮಾಡುವಲ್ಲಿ ಥೋಕರ್ ನಿರ್ಣಾಯಕ ಪಾತ್ರ ವಹಿಸಿದ್ದಾರೆ ಎಂದು ನಂಬಲಾಗಿದೆ.
ಶನಿವಾರ ಬಿಜ್ಜೆಹಾರದಲ್ಲಿನ ಉಗ್ರ ಅದಿಲ್ ಹುಸೇನ್ ಥೋಕರ್ ಆಲಿಯಾಸ್ ಆದಿಲ್ ಗೊಜಿಯ ಮನೆಯನ್ನು ಸ್ಫೋಟಿಸಲಾಗಿತ್ತು. ಸುಧಾರಿತ ಸ್ಪೋಟಕ ಸಾಧನಗಳನ್ನು ಬಳಸಿ ಮನೆಯನ್ನು ನಾಶ ಮಾಡಲಾಗಿತ್ತು. ಭದ್ರತಾ ಅಧಿಕಾರಿಗಳ ಪ್ರಕಾರ, ಈತ ಕಾನೂನುಬದ್ದವಾಗಿ ಪಾಕಿಸ್ತಾನಕ್ಕೆ ತೆರಳಿದ್ದ. 2018ರ ಸುಮಾರಿನಲ್ಲಿ ಅಟ್ಟಾರಿ ವಾಘಾ ಗಡಿಯ ಮೂಲಕ ಆದಿಲ್, ಪಾಕಿಸ್ತಾನಕ್ಕೆ ತೆರಳಿದ್ದ. ಅಲ್ಲಿ ಒಂದು ಭಯೋತ್ಪಾದನೆಯ ತರಬೇತಿಯನ್ನು ಪಡೆದು, ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರಕ್ಕೆ ವಾಪಸ್ ಆಗಿದ್ದ. ಪಹಲ್ಟಾಮ್ ದಾಳಿಯ ಸಂಚು ರೂಪಿಸುವಲ್ಲಿ ಈತನದ್ದು ಮುಖ್ಯ ಪಾತ್ರವಾಗಿತ್ತು.
ಇನ್ನೊಂದು ವಿದ್ಯಮಾನದಲ್ಲಿ ತಾಲ್ ನಲ್ಲಿ ಮತ್ತೋರ್ವ ಉಗ್ರ, ಆಸಿಫ್ ಶೇಖ್ ಮನೆಯನ್ನು ಬುಲ್ಲೋಜರ್ ಬಳಸಿ ನೆಲಸಮ ಮಾಡಲಾಗಿತ್ತು. ಮತ್ತೊಬ್ಬ ಉಗ್ರ ಆದಿಲ್ ಶೇಖ್ ಅವರ ಮನೆಯನ್ನೂ ಭದ್ರತಾ ಅಧಿಕಾರಿಗಳು ಕೆಡವಿದ್ದರು. ಈತ, ಪುಲ್ವಾಮಾದ ಮುರ್ರಾನ್ ಎನ್ನುವ ಜಾಗದ ನಿವಾಸಿಯಾಗಿದ್ದ.
ಆಹ್ವಾನ್ ಎನ್ನುವ ಉಗ್ರ ಜೂನ್ 2023ರಲ್ಲಿ ಲಷ್ಕರ್ -ಇ-ತೊಯ್ದಾ ಸಂಘಟನೆಗೆ ಸೇರ್ಪಡೆಗೊಂಡಿದ್ದ. ಶೋಪಿಯಾನ್ ನಲ್ಲಿ ಉಗ್ರ ಸಂಘಟನೆಗೆ ಸೇರಿದ್ದ ಶಾಹಿದ್ ಅಹ್ಮದ್ ನ ಚೋಟಿಪೋರಾ ಪ್ರದೇಶದಲ್ಲಿ ಸ್ಫೋಟಿಸಲಾಗಿತ್ತು. ಇದೇ ರೀತಿಯ ಕಾರ್ಯಾಚರಣೆಯಲ್ಲಿ ಕ್ವಿಮೋಹ್ ಎನ್ನುವ ಜಾಗದಲ್ಲಿರುವ ಜಾರ್ಕಿ ಗನಿ ಎನ್ನುವ ಮನೆಯನ್ನೂ ಧ್ವಂಸಗೊಳಿಸಲಾಗಿತ್ತು.
ಇದೇ ರೀತಿ, ನಾಲ್ಕು ದಿನಗಳ ಹಿಂದೆ ಪಹಲ್ಟಾಮ್ ನಲ್ಲಿ ನಡೆದ ದಾಳಿಯಲ್ಲಿ ಭಾಗಿಯಾಗಿದ್ದವರನ್ನು ಮನೆಯನ್ನೂ ಧ್ವಂಸಗೊಳಿಸಲಾಗುತ್ತಿದೆ. ಇದುವರೆಗೆ, ಐವರ ಮನೆಯನ್ನು ನಾಶ ಮಾಡಿದಂತಾಗಿದೆ. ಓರ್ವ ಉಗ್ರನ ಮನ ಧ್ವಂಸ ಮಾಡುವ ವೇಳೆ, ಆತನ ಸಹೋದರಿ, ಅಣ್ಣ ಹಿಜ್ಜುಲ್ ಮುಜಾಹಿದ್ದೀನ್ ಸಂಘಟನೆಯ ಕಾರ್ಯಕರ್ತ ಎಂದು ಹೇಳಿದ್ದಾಳೆ. ಒಟ್ಟಾರೆ, ಪಹಲ್ಟಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಸಕ್ರಿಯ ಲಷ್ಕರ್ ಕಾರ್ಯಕರ್ತರ ಐದು ಮನೆಗಳನ್ನು ನೆಲಸಮ ಮಾಡಲಾಗಿದೆ.