Tuesday, October 14, 2025
Homeರಾಷ್ಟ್ರೀಯ | Nationalಜಾರ್ಖಂಡ್‌ : ನಕ್ಸಲರು ಅಡಗಿಸಿಟ್ಟಿದ್ದ ಭಾರೀ ಶಸ್ತ್ರಾಸ್ತ್ರ ವಶ

ಜಾರ್ಖಂಡ್‌ : ನಕ್ಸಲರು ಅಡಗಿಸಿಟ್ಟಿದ್ದ ಭಾರೀ ಶಸ್ತ್ರಾಸ್ತ್ರ ವಶ

Security forces uncover Naxal hideout in Jharkhand, seize arms and ammunition

ರಾಯ್‌ಪುರ, ಅ.14- ನಕ್ಸಲರು ಅರಣ್ಯದಲ್ಲಿ ಅಡಗಿಸಿಟ್ಟಿದ್ದ ಭಾರಿ ಪ್ರಮಾಣದ ಸ್ಫೋಟಕ ವಸ್ತು ಗಳನ್ನು ವಶಪಡಿಸಿಕೊಳ್ಳುವಲ್ಲಿ ಜಾರ್ಖಂಡ್‌ ಪೊಲೀಸರು ಯಶಸ್ವಿಯಾಗಿದ್ದಾರೆ. ಭದ್ರತಾ ಪಡೆ ಹಾಗೂ ಬಿಜಾಪುರ ಪೊಲೀಸರು ನಡೆಸಿದ ಜಂಟಿ ಕಾರ್ಯಚರಣೆಯಲ್ಲಿ ನಕ್ಸಲರು ಅಡಗಿಸಿಟ್ಟಿದ್ದ ಅಪಾರ ಪ್ರಮಾಣದ ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ನಿನ್ನೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ತಡ್ಪಲ ಬೇಸ್‌‍ ಕ್ಯಾಂಪ್‌ನ ಕೋಬ್ರಾ 206, ಸಿಆರ್‌ಪಿಎಫ್‌‍ 229, 153 ಮತ್ತು 196 ಮತ್ತು ಬಿಜಾಪುರ ಪೊಲೀಸರು ಕೆಜಿಹೆಚ್‌ ತಪ್ಪಲಿನ ಪ್ರದೇಶದಲ್ಲಿ ಜಂಟಿ ಕಾರ್ಯಚರಣೆ ನಡೆಸಿದ್ದಾರೆ.

ಈ ವೇಳೆ ನಕ್ಸಲರು ಅಡಗಿಸಿಟ್ಟಿದ್ದ ಅಪಾರ ಪ್ರಮಾಣದ ಸ್ಫೋಟಕ ವಸ್ತುಗಳು ಪತ್ತೆಯಾಗಿದ್ದು, 51 ಜೀವಂತ ಬಿಜಿಎಲ್‌ಗಳು, 100 ಬಂಡಲ್‌ಗಳ ಹೆಚ್‌ಟಿ ಅಲ್ಯೂಮಿನಿಯಂ ತಂತಿ, 50 ಸ್ಟೀಲ್‌ ಪೈಪ್‌ಗಳು, ಬಿಜಿಎಲ್‌ ನಿರ್ಮಾಣಕ್ಕಾಗಿ ದೊಡ್ಡ ಪ್ರಮಾಣದ ವಿದ್ಯುತ್‌ ತಂತಿ, 20 ಕಬ್ಬಿಣದ ಹಾಳೆಗಳು ಮತ್ತು 40 ಕಬ್ಬಿಣದ ತಟ್ಟೆಗಳನ್ನು ವಶಪಡಿಸಿಕೊಂಡಿದ್ದಾರೆ. ಅದಲ್ಲದೇ ನಕ್ಸಲರು ಇಟ್ಟಿದ್ದ ಐದು ಐಇಡಿಗಳು ಕೂಡ ಶೋಧ ಕಾರ್ಯಾಚರಣೆ ವೇಳೆ ಪತ್ತೆಯಾಗಿದೆ. ಸದ್ಯ ಸ್ಫೋಟಕ ವಸ್ತುಗಳು ಪತ್ತೆಯಾದ ಪ್ರದೇಶದಲ್ಲಿ ನಿರಂತರ ಗಸ್ತು ನಡೆಸಲಾಗುತ್ತಿದೆ.

RELATED ARTICLES

Latest News