Wednesday, April 2, 2025
Homeಅಂತಾರಾಷ್ಟ್ರೀಯ | Internationalಹಿಜ್ಬುಲ್ಲಾ ಕೇಂದ್ರ ಕಚೇರಿ ಮೇಲೆ ಇಸ್ರೇಲ್ ಏರ್ ಸ್ಟ್ರೈಕ್, ಹಸನ್‌ ನಸ್ರಲ್ಲಾ ಫಿನಿಶ್..?

ಹಿಜ್ಬುಲ್ಲಾ ಕೇಂದ್ರ ಕಚೇರಿ ಮೇಲೆ ಇಸ್ರೇಲ್ ಏರ್ ಸ್ಟ್ರೈಕ್, ಹಸನ್‌ ನಸ್ರಲ್ಲಾ ಫಿನಿಶ್..?

Senior Hezbollah commanders were target of Beirut headquarters strike

ಜೆರುಸಲೆಂ,ಸೆ.28- ಇಸ್ರೇಲಿ ವಾಯುಪಡೆಯು ಲೆಬನಾನ್‌ ರಾಜಧಾನಿ ಬೈರುತ್‌ನ ಹಿಜ್ಬುಲ್ಲಾದ ಮುಖ್ಯ ಕೇಂದ್ರ ಕಚೇರಿಯ ಮೇಲೆ ದಾಳಿ ನಡೆಸಿರುವುದಾಗಿ ಸೇನೆ ತಿಳಿಸಿದೆ.ಲೆಬನಾನ್ನಲ್ಲಿ ಹಿಜ್ಬುಲ್ಲಾದ ಭದ್ರಕೋಟೆಯನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ ಹಸನ್‌ ನಸ್ರಲ್ಲಾ ಸಾವನ್ನಪ್ಪಿದ್ದಾನೆ. ದಾಳಿಯಲ್ಲಿ 2 ಬಲಿ ಆಗಿದ್ದು, 76 ಮಂದಿಗೆ ಗಾಯಗಳಾಗಿವೆ.

ಇರಾನ್‌ ನಮ ಮೇಲೆ ದಾಳಿ ಮಾಡಿದರೆ, ನಾವು ಪ್ರತಿದಾಳಿ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದೇನೆಂದು ಇಸ್ರೇಲ್‌ ಅಧ್ಯಕ್ಷ ನೆತನ್ಯಾಹು ಹೇಳಿದ್ದಾರೆ. ನೆತನ್ಯಾಹು ವಿಶ್ವಸಂಸ್ಥೆಯಲ್ಲಿ ಹಿಜ್ಬುಲ್ಲಾ ಉಗ್ರರ ವಿರುದ್ಧ ಗುಡುಗಿದ ಬೆನ್ನಲ್ಲೇ ಈ ದಾಳಿ ನಡೆದಿದೆ.

ಇದಕ್ಕೂ ಮೊದಲು ಇಸ್ರೇಲಿ ಸೈನ್ಯವು ನಸ್ರಲ್ಲಾವನ್ನು ಗುರಿಯಾಗಿಟ್ಟುಕೊಂಡು ಬೈರುತ್ನಲ್ಲಿರುವ ಹಿಜ್ಬುಲ್ಲಾದ ಪ್ರಧಾನ ಕಛೇರಿಯ ಮೇಲೆ ದಾಳಿ ಮಾಡಿತು, ಅಲ್ಲಿ ಹಲವಾರು ಬಹುಮಹಡಿ ಕಟ್ಟಡಗಳನ್ನು ಒಂದರ ನಂತರ ಮತ್ತೊಂದರಂತೆ ಕೆಡವಲಾಯಿತು. ದಾಳಿಯ ವೇಳೆ ನಸ್ರಲ್ಲಾ ಈ ಸ್ಥಳದಲ್ಲಿ ಇದ್ದಾನೋ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ಹಿಜ್ಬುಲ್ಲಾ ಕೂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಈ ದಾಳಿಯಲ್ಲಿ ಕನಿಷ್ಠ 8 ಜನರು ಸಾವನ್ನಪ್ಪಿದ್ದಾರೆ ಮತ್ತು 91 ಮಂದಿ ಗಾಯಗೊಂಡಿದ್ದಾರೆ ಎಂದು ಲೆಬನಾನ್‌ ಆರೋಗ್ಯ ಸಚಿವಾಲಯ ತಿಳಿಸಿದೆ. ಆರು ಕಟ್ಟಡಗಳ ಅವಶೇಷಗಳಡಿಯಲ್ಲಿ ಇನ್ನೂ ಶೋಧ ಕಾರ್ಯಾಚರಣೆ ನಡೆಯುತ್ತಿದ್ದು, ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ
ಲೆಬನಾನ್‌ನ್ಲಿ ಇಸ್ರೇಲಿ ವೈಮಾನಿಕ ದಾಳಿಗಳು ಈ ವಾರ ಗಮನಾರ್ಹವಾಗಿ ಹೆಚ್ಚಾಗಿದೆ.

ಆರೋಗ್ಯ ಸಚಿವಾಲಯದ ಪ್ರಕಾರ, ಈ ವಾರ ಲೆಬನಾನ್ನಲ್ಲಿ ನಡೆದ ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 720 ಕ್ಕೂ ಹೆಚ್ಚು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ. ಈ ಇತ್ತೀಚಿನ ದಾಳಿಗಳಿಂದಾಗಿ, ಇಸ್ರೇಲ್‌ ಮತ್ತು ಹೆಜ್ಬೊಲ್ಲಾ ನಡುವಿನ ಸಂಘರ್ಷವು ಪೂರ್ಣ ಪ್ರಮಾಣದ ಯುದ್ಧವಾಗಿ ಬದಲಾಗುವ ಸಾಧ್ಯತೆಯು ಬಲವಾಗಿದೆ.

ಈ ದಾಳಿಯಲ್ಲಿ ಸಾವನ್ನಪ್ಪಿದ್ದು ನಸ್ರಲ್ಲಾ ಅಲ್ಲ, ಆತನ ಮಗಳು ಜೈನಾಬ್‌ ಎಂದು ಹೇಳಿಕೊಂಡಿದೆ. ಆದಾಗ್ಯೂ ಹೆಜ್ಬುಲ್ಲಾ ಅಥವಾ ಲೆಬನಾನ್‌ ಅಧಿಕಾರಿಗಳಿಂದ ಯಾವುದೇ ಅಧಿಕೃತ ದೃಢೀಕರಣ ಬಂದಿಲ್ಲ ಎಂದು ಸ್ಥಳೀಯ ಸುದ್ದಿ ವಾಹಿನಿಗಳಿಂದ ವರದಿಯಾಗಿದೆ.
ಅವರು ಅಂತಹ ದಾಳಿಯಿಂದ ಬದುಕುಳಿದಿದ್ದಾರೆ ಎಂದು ಊಹಿಸಿಕೊಳ್ಳುವುದು ಅಸಾಧ್ಯ ಎಂದು ಸೇನಾ ಅಧಿಕಾರಿ ತಿಳಿಸಿದ್ದಾರೆ.

ಹಲವಾರು ಹೀಬ್ರೂ ಮಾಧ್ಯಮ ವರದಿಗಳು ಭೂಗತ ಪ್ರಧಾನ ಕಚೇರಿಯ ಮೇಲಿನ ದಾಳಿಯಲ್ಲಿ ನಸ್ರಲ್ಲಾ ಕೊಲ್ಲಲ್ಪಟ್ಟರು ಎಂದು ಇಸ್ರೇಲಿ ವರದಿಗಳು ತಿಳಿಸಿವೆ. ಇಸ್ರೇಲ್‌ ದಾಳಿಯಲ್ಲಿ ಆರು ಕಟ್ಟಡಗಳು ಧ್ವಂಸಗೊಂಡಿವೆ ಎಂದು ಹಿಜ್ಬುಲ್ಲಾಗೆ ನಿಕಟವಾದ ಮೂಲವೊಂದು ತಿಳಿಸಿದೆ. ಹಿಜ್ಬುಲ್ಲಾ ಮತ್ತು ಇಸ್ರೇಲ್‌ ನಡುವಿನ ಸುಮಾರು ಒಂದು ವರ್ಷದ ಸಂಘರ್ಷದಲ್ಲಿ ಬೈರುತ್‌ನಲ್ಲಿ ನಡೆದ ಅತಿದೊಡ್ಡ ದಾಳಿ ಇದಾಗಿದೆ. ದಾಳಿಯಲ್ಲಿ ಸುಮಾರು ಟನ್‌ಗಳಷ್ಟು ಸ್ಫೋಟಕ ಬಾಂಬ್‌ಗಳು ಇದ್ದವು ಎಂದು ಇಸ್ರೇಲಿ ದೂರದರ್ಶನ ಜಾಲಗಳು ವರದಿ ತಿಳಿಸಿದೆ.

ಇಸ್ರೇಲ್‌, ಹಮಾಸ್‌‍ ಯುದ್ಧಕ್ಕೆ ಹಿಜ್ಬುಲ್ಲಾ ಉಗ್ರರು ಪ್ರವೇಶಿಸಿ ಕಾವು ಹೆಚ್ಚಿಸಿರುವ ಹೊತ್ತಿನಲ್ಲೇ, ಯೆಮೆನ್ನ ಹೌತಿ ಉಗ್ರರು ಕೂಡಾ ಯುದ್ಧಕ್ಕೆ ಪ್ರವೇಶ ಮಾಡಿದ್ದಾರೆ. ಇಸ್ರೇಲ್‌ ದಾಳಿಗೆ ಗುರುವಾರ ಹಿಜ್ಬುಲ್ಲಾ ಉಗ್ರ ಮೊಹಮದ್‌ ಸ್ರುರ್‌ ಸಾವನ್ನಪ್ಪಿದ್ದ. ಪ್ರತಿಯಾಗಿ ಹೌತಿ ಉಗ್ರರು ಗುರುವಾರ ರಾತ್ರಿ ಕ್ಷಿಪಣಿ ದಾಳಿ ನಡೆಸಿದ್ದಾರೆ. ಈ ಕ್ಷಿಪಣಿಯನ್ನು ಗಡಿಯಿಂದ ಹೊರಗೆ ನಮ ವಾಯುರಕ್ಷಣಾ ವ್ಯವಸ್ಥೆ ಹೊಡೆದುರುಲಿಸಿದೆ ಎಂದು ಇಸ್ರೇಲ್‌ ಹೇಳಿದೆ. ಹೌತಿ ಉಗ್ರರನ್ನು ಸ್ರುರ್‌ ಬರಂಬಲಿಸುತ್ತಿದ್ದ. ಆತನ್ನು ಇಸ್ರೇಲ್‌ ಹತ್ಯೆ ಮಾಡಿದ ಕಾರಣ ಹೌತಿ ಸಿಟ್ಟಿಗೆದ್ದಿದೆ.

RELATED ARTICLES

Latest News