ರಾಯ್ಪುರ, ಜ 13- ಛತ್ತೀಸ್ಗಢದ ಕಂಕೇರ್ ಜಿಲ್ಲೆಯಲ್ಲಿ ಹಿರಿಯ ಮಹಿಳಾ ನಕ್ಸಲ್ ಮತ್ತು ಆಕೆಯ ಸಹಚರನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಾವೋವಾದಿಗಳ ವಿಭಾಗೀಯ ಸಮಿತಿ ಸದಸ್ಯ ಮಾಲ್ತಿ ಅಲಿಯಾಸ್ ರಾಜೇ(48) ಮತ್ತು ಆಕೆಯ ಮನೆಯಲ್ಲಿ ಆಶ್ರಯ ನೀಡಿದ್ದ ಶ್ಯಾಮನಾಥ್ ಉಸೇಂದಿ ಅವರನ್ನು ಕೊಯಲಿಬೀಡ ಪೊಲೀಸ್ ಠಾಣೆ ವ್ಯಪ್ತಿಯಲ್ಲಿ ಬಂಧಿಸಲಾಗಿದೆ. ಈಕೆಯ ತಲೆಯ ಮೇಲೆ 8 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು ಎಂದು ಬಸ್ತಾರ್ ರೇಂಜ್ನ ಪೊಲೀಸ್ ಮಹಾನಿರೀಕ್ಷಕ ಸುಂದರರಾಜ್ ತಿಳಿಸಿದ್ದಾರೆ.
ಕಳೆದ ವರ್ಷ ರಾಜೇ ಅವರ ಪತಿಯನ್ನು ಬಂಧಿಸಲಾಗಿತ್ತು ,ಪ್ರಸ್ತುತ ದಂಪತಿಯ ಬಂಧನವು ರಾಜ್ಯದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ನಿರ್ಣಾಯಕ ಬೆಳವಣಿಗೆಯಾಗಿದೆ ಎಂದು ಅವರು ಹೇಳಿದರು.
ರಾಜೇ ಅವರು ಮಾವೋವಾದಿಗಳ ಉತ್ತರ ಬಸ್ತಾರ್ ವಿಭಾಗದ ರೌಘಾಟ್ ಪ್ರದೇಶ ಸಮಿತಿಯ ಉಸ್ತುವಾರಿಯಾಗಿದ್ದಳು , ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಧಾನಿ ರಾಯ್ಪುರದಿಂದ ಸುಮಾರು 200 ಕಿಮೀ ದೂರದಲ್ಲಿರುವ ಕೊಯಲಿಬೆಡಾ ಪ್ರದೇಶದಲ್ಲಿ ಆಕೆಯ ಚಲನವಲನದ ಬಗ್ಗೆ ಪೊಲೀಸರು ಮಾಹಿತಿ ಸ್ವೀಕರಿಸುತ್ತಿದ್ದರು.
ತನಿಖೆಯ ಸಮಯದಲ್ಲಿ, ಆಕೆಯ ಸ್ಥಳವನ್ನು ಕೌಡೋಸಾಲ್ಹೆಭಟ್ ಗ್ರಾಮದಲ್ಲಿ ಪತ್ತೆಯಾಗಿದ್ದು , ಅಲ್ಲಿ ಉಸೇಂಡಿ ಆಕೆಗೆ ಆಶ್ರಯ ನೀಡಿದ್ದ ,ಈಗ ಇಬ್ಬರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.