ಚಂಡೀಗಢ,ಮೇ 27– ಹರಿಯಾಣದ ಪಂಚಕುಲದ ವಸತಿ ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರಿನೊಳಗೆ ಒಂದೇ ಕುಟುಂಬದ ಏಳು ಮಂದಿಯ ಮೃತದೇಹಗಳು ಪತ್ತೆಯಾಗಿದೆ. ಪಂಚಕುಲದಸೆಕ್ಟರ್-27 ಪ್ರದೇಶದಲ್ಲಿ ಮನೆಯ ಮುಂದೆ ಕಾರು ನಿಂತಿತ್ತು, ಅದರೊಳಗೆ ಇದ್ದವರುನಿಗೂಢವಾಗಿಮೃತಪಟ್ಟಿರುವುದುತಡರಾತ್ರಿ ಬೆಳಕಿಗೆ ಬಂದಿದೆ.
ಪೊಲೀಸರು ದಾವಿಸಿ ಪರಿಶೀಲಿಸಿದಾಗ ಕಾರಿನೊಳಗೆ ದಂಪತಿ, ಮೂವರು ಮಕ್ಕಳು ಮತ್ತು ಇಬ್ಬರು ವೃದ್ಧರು ಮೃತಪಟ್ಟಿರುವುದು ಕಂಡುಬಂದಿದೆ ಮತ್ತು ಇವರು ಡೆಹ್ರಾಡೂನ್‌ನ ನಿವಾಸಿಗಳಾಗಿದ್ದು, ಎಲ್ಲರೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಕುಟುಂಬವು ಭಾರೀ ಸಾಲ ಮತ್ತು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದರಿಂದ ಈ ನಿರ್ಧಾರಕ್ಕೆ ಬಂದಿರಬಹುದು ಎಂದು ಹೇಳಲಾಗಿದೆ. ಡೆಹ್ರಾಡೂನ್ ಕುಟುಂಬದೊಂದಿಗೆ ನಿವಾಸಿ ಪ್ರವೀಣ್ ಮಿತ್ತಲ್, ಪಂಚಕುಲದ ಬಾಗೇಶ್ವರ ಧಾಮದಲ್ಲಿ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದರು ಎಂದು ಮೂಲಗಳು ತಮ್ಮ ತಿಳಿಸಿವೆ.
ಸದ್ಯಕ್ಕೆ, ನಾವು ಪ್ರಕರಣವನ್ನು ಎಲ್ಲಾ ಕೋನಗಳಿಂದ ತನಿಖೆ ನಡೆಸುತ್ತಿದ್ದೇವೆ. ನಾವು ಸ್ಥಳೀಯರಿಂದ ಮಾಹಿತಿ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಹರಿಯಾಣದ ಪಂಚಕುಲದ ಡಿಸಿಪಿ (ಅಪರಾಧ) ಅಮಿತ್ ದಹಿಯಾ ಹೇಳಿದ್ದಾರೆ.