Friday, May 24, 2024
Homeಬೆಂಗಳೂರುಹಗಲು-ರಾತ್ರಿ ಕನ್ನಗಳವು ಮಾಡುತ್ತಿದ್ದ ಮೂವರು ರೌಡಿಗಳು ಸೇರಿ 7 ಮಂದಿ ಸೆರೆ

ಹಗಲು-ರಾತ್ರಿ ಕನ್ನಗಳವು ಮಾಡುತ್ತಿದ್ದ ಮೂವರು ರೌಡಿಗಳು ಸೇರಿ 7 ಮಂದಿ ಸೆರೆ

ಬೆಂಗಳೂರು, ಏ.12-ಉತ್ತರ ವಿಭಾಗದ ರಾಜಗೋಪಾಲನಗರ ಮತ್ತು ಸಂಜಯನಗರ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಹಗಲು ಮತ್ತು ರಾತ್ರಿ ವೇಳೆ ಕನ್ನಗಳವು ಮಾಡುತ್ತಿದ್ದ ಮೂವರು ರೌಡಿಗಳು ಸೇರಿದಂತೆ 7 ಮಂದಿಯನ್ನು ಬಂಧಿಸಿದ್ದಾರೆ.ಆರೋಪಿಗಳಿಂದ 50 ಸಾವಿರ ನಗದು ಸೇರಿದಂತ ಒಟ್ಟು 38.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ಒಡವೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ರಾಜಗೋಪಾಲನಗರ:
ಲಗ್ಗೆರೆ ಮುಖ್ಯರಸ್ತೆಯಲ್ಲಿ ಅನುಮಾನಾಸ್ಪದ ವಾಗಿ ತಿರುಗಾಡುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಿಸಿ, ಪರಿಶೀಲಿಸಿದಾಗಒಬ್ಬನ ಪ್ಯಾಂಟ್ಜೇಬಿನಲ್ಲಿ ಒಂದು ಜೊತೆ ಬೆಳ್ಳಿಯ ಕಾಲುಚೈನು ಹಾಗೂ ಮತ್ತೊಬ್ಬನ ಜೇಬಿನಲ್ಲಿ ಬೆಳ್ಳಿಯ ಉಡುದಾರ ಪತ್ತೆಯಾಗಿದೆ. ಇವುಗಳ ಬಗ್ಗೆ ಸರಿಯಾದ ಉತ್ತರ ನೀಡದೆ ತಡವರೆಸಿದ್ದರಿಂದ ಇಬ್ಬರನ್ನು ಠಾಣೆಗೆ ಕರೆದೊಯ್ದು ವಿಚಾರಣೆಗೆ ಒಳಪಡಿಸಿದಾಗ ಮೂವರ ಬಗ್ಗೆ ಬಾಯಿಬಿಟ್ಟಿದ್ದಾರೆ.

ಈ ಹಿನ್ನೆಲೆಯಲ್ಲಿ ರಾಜಗೋಪಾಲನಗರ ಠಾಣಾ ಪೊಲೀಸರು ರೌಡಿ ಮಣಿಕಂಠ, ದೀಕ್ಷಿತ್, ತುಮಕೂರಿನ ರೌಡಿ ಅಜಯ್ ಮತ್ತು ಕೀರ್ತಿಯನ್ನು ಬಂಧಿಸಿ 28.50 ಲಕ್ಷ ಮೌಲ್ಯದ 470 ಗ್ರಾಂ ಚಿನ್ನಾ, 500 ಗ್ರಾಂ ಬೆಳ್ಳಿ ಒಡವೆಗಳು, 50 ಸಾವಿರ ಹಣ ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.

ಸಂಜಯನಗರ:
ಮನೆಯ ಮುಖ್ಯದ್ವಾರದ ಬಾಗಿಲಿನ ಲಾಕ್ ಒಡೆದು ಒಳನುಗ್ಗಿ ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗಿದ್ದ ಗಿರಿನಗರದ ರೌಡಿ ನರಸಿಂಹರೆಡ್ಡಿ ಹಾಗೂ ಕಾರ್ತಿಕ್ ಮತ್ತು ನರಸಿಂಹನನ್ನು ಬಂಧಿಸಿ 10 ಲಕ್ಷ ಮೌಲ್ಯದ 151 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ರೌಡಿ ನರಸಿಂಹರೆಡ್ಡಿ ವಿರುದ್ಧ 36 ಪ್ರಕರಣಗಳಿವೆ.ಇನ್ನಿಬ್ಬರು ಆರೋಪಿಗಳಾದ ಕಾರ್ತಿಕ್ ಮತ್ತು ನರಸಿಂಹ ಕೋಲಾರ ಮೂಲದವರು.

ಈ ರೌಡಿ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಬಂದಿದ್ದು, ಈತನ ವಿರುದ್ಧ ಒಟ್ಟು 36 ಪ್ರಕರಣಗಳು ದಾಖಲಾಗಿದೆ ಎಂದು ತನಿಖೆಯಿಂದ ತಿಳಿದು ಬಂದಿದೆ. ಆರೋಪಿಗಳ ಬಂಧನದಿಂಧ ಒಟ್ಟು 3 ಪ್ರಕರಣಗಳು ಪತ್ತೆಯಾಗಿವೆ. ಇನ್ಸ್ಪೆಕ್ಟರ್ ಭಾಗ್ಯವತಿ ಜೆ. ಬಂಟಿ ಮತ್ತು ಸಿಬ್ಬಂದಿ ಈ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

RELATED ARTICLES

Latest News