Friday, April 4, 2025
Homeಬೆಂಗಳೂರುಬ್ರ್ಯಾಂಡ್ ಬೆಂಗಳೂರಲ್ಲಿ ಕಾಮುಕರ ಅಟ್ಟಹಾಸ, ಅಣ್ಣನ ಮೇಲೆ ಹಲ್ಲೆ ಮಾಡಿ ತಂಗಿಯನ್ನು ಎಳೆದೊಯ್ದು ಅತ್ಯಾಚಾರ

ಬ್ರ್ಯಾಂಡ್ ಬೆಂಗಳೂರಲ್ಲಿ ಕಾಮುಕರ ಅಟ್ಟಹಾಸ, ಅಣ್ಣನ ಮೇಲೆ ಹಲ್ಲೆ ಮಾಡಿ ತಂಗಿಯನ್ನು ಎಳೆದೊಯ್ದು ಅತ್ಯಾಚಾರ

brother attacked, sister dragged and raped in Bengaluru,

ಬೆಂಗಳೂರು, ಏ.3- ಅಣ್ಣ-ತಂಗಿ ನಡೆದು ಹೋಗುತ್ತಿದ್ದಾಗ ಅಣ್ಣನ ಮೇಲೆ ಹಲ್ಲೆ ಮಾಡಿ ತಂಗಿಯನ್ನು ಎಳೆದೊಯ್ದು ಅತ್ಯಾಚಾರವೆಸಗಿರುವ ಘಟನೆ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ನಡೆದಿದೆ.

ಅತ್ಯಾಚಾರಕ್ಕೊಳಗಾದ 19 ವರ್ಷದ ಯುವತಿಯನ್ನು ಬಿಹಾರ ಮೂಲದವರು ಎಂದು ಗುರುತಿಸಲಾಗಿದೆ. ಈ ಯುವತಿ ಕೇರಳದಲ್ಲಿ ವಾಸವಿರುವ ತನ್ನ ಅಕ್ಕ -ಭಾವನ ಜೊತೆ ನೆಲೆಸಿದ್ದಳು. ಅಲ್ಲಿ ಕೆಲಸ ಮಾಡುತ್ತಿದ್ದ, ಈಕೆಗೆ ಕೆಲಸ ಇಷ್ಟವಾಗದ ಕಾರಣ ವಾಪಾಸ್ ತನ್ನ ಊರಿಗೆ ಹೋಗಲು ನಿರ್ಧರಿಸಿ ಕೇರಳದ ಯರ್ನಾಕೂಲಂನಿಂದ ರೈಲು ಹತ್ತಿದಾಗ ನಗರದಲ್ಲಿ ನೆಲೆಸಿರುವ ತನ್ನ ದೊಡ್ಡಮ್ಮನ ಮಗ(ಅಣ್ಣ)ನಿಗೆ ಮೊಬೈಲ್ ಕರೆ ಮಾಡಿ ತಿಳಿಸಿದ್ದಾಳೆ.

ಆ ವೇಳೆ ನಾನೂ ಊರಿಗೆ ಬರುತ್ತೇನೆ. ಇಬ್ಬರು ಒಟ್ಟಿಗೆ ಬಿಹಾರಕ್ಕೆ ಹೋಗೋಣ. ನೀನು ಕೆಆರ್‌ಪುರಂ ರೈಲ್ವೆ ನಿಲ್ದಾಣದಲ್ಲಿ ಇಳಿದುಕೊಳ್ಳುವಂತೆ ಹೇಳಿದ್ದರಿಂದ ರೈಲು ಬೆಂಗಳೂರಿನ ಕೆಆರ್‌ಪುರಂ ರೈಲು ನಿಲ್ದಾಣಕ್ಕೆ ಬಂದಾಗ ಆಕೆ ಇಳಿದುಕೊಂಡಿದ್ದಾಳೆ. ಆಗ ಮುಂಜಾನೆ 1 ಗಂಟೆ ಆಗಿತ್ತು.

ರೈಲು ಬರುವಷ್ಟರಲ್ಲಿ ಈಕೆಯ ಅಣ್ಣ ಬಂದು ಕಾಯುತ್ತಿದ್ದರು. ಸಹೋದರಿ ಬಂದಾಗ ಊಟ ಮಾಡಿಕೊಂಡು ಊರಿಗೆ ರೈಲಿನಲ್ಲಿ ಹೋಗೋಣವೆಂದು ಹೇಳಿ ಇಬ್ಬರು ನಡೆದುಕೊಂಡು ಹೋಗುತ್ತಿದ್ದರು.

ಇವರಿಬ್ಬರು ಹೋಗುವುದನ್ನು ಗಮನಿಸಿದ ಇಬ್ಬರು ಆಟೋ ಚಾಲಕರು ಹಿಂಬಾಲಿಸಿಕೊಂಡು ಹೋಗಿದ್ದಾರೆ. ಆವೇಳೆ ಸಮಯ 1.30 ಆಗಿತ್ತು. ಔಟರ್‌ರಿಂಗ್ ರಸ್ತೆಯ ಲೌರಿ ಮೆಮೊರಿಯಲ್ ಶಾಲೆ ಬಳಿ ಅಣ್ಣ-ತಂಗಿಯನ್ನು ಅಡ್ಡಗಟ್ಟಿದ್ದಾರೆ. ಆಟೋ ಚಾಲಕ ಸೈಯದ್ ಮೂಸಾ ಯುವಕನ್ನು ಹಿಡಿದುಕೊಂಡು ಹೊಡೆದಿದ್ದಾನೆ. ಈತನ ಜೊತೆಗೆ ಇದ್ದ ಮತ್ತೊಬ್ಬ ಆಟೋ ಚಾಲಕ ಆಸೀಫ್ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರವೆಸಗಿದ್ದಾನೆ.

ಆ ಸಂದರ್ಭದಲ್ಲಿ ಸಹಾಯಕ್ಕಾಗಿ ಕೂಗಾಡಿದ್ದಾರೆ. ಇದರಿಂದ ಹೆದರಿದ ಆಟೋ ಚಾಲಕರಿಬ್ಬರು ಸ್ಥಳದಿಂದ ಪರಾರಿಯಾಗಿದ್ದಾರೆ.ಈ ಮಾರ್ಗದಲ್ಲಿ ಹೋಗುತ್ತಿದ್ದ ಬೈಕ್ ಸವಾರನೊಬ್ಬ ಹುಡಗ-ಹುಡುಗಿ ಕೂಗಾಡುತ್ತಿರುವುದನ್ನು ಗಮನಿಸಿ ಜಗಳವಾಡುತ್ತಿದ್ದಾರೆ ಎಂದು ತಪ್ಪಾಗಿ ತಿಳಿದುಕೊಂಡು ತಕ್ಷಣ 112ಗೆ ಕರೆಮಾಡಿ ಗಲಾಟೆಯಾಗುತ್ತಿದೆ ಎಂದು ಹೇಳಿ ತನ್ನ ಪಾಡಿಗೆ ತಾನು ಹೊರಟು ಹೋಗಿದ್ದಾನೆ.

ವಿಷಯ ತಿಳಿದು ಗಸ್ತಿನಲ್ಲಿದ್ದ ಚೀತಾ ಪೊಲೀಸರು ಸ್ಥಳಕ್ಕೆ ಬಂದಾಗ ಸಂತ್ರಸ್ಥ ಯುವತಿ ಹಾಗೂ ಈಕೆಯ ಅಣ್ಣ ನಡೆದ ವಿಷಯವನ್ನು ತಿಳಿಸಿದ್ದಾರೆ. ತಕ್ಷಣ ಯುವತಿಯನ್ನು ಸಂತೈಸಿ, ಆರೋಪಿಗಳ ಹುಡುಕಾಟ ನಡೆಸಿ ಘಟನೆ ನಡೆದ 5 ನಿಮಿಷದಲ್ಲೇ ಆರೋಪಿ ಆಸಿಫ್‌ನನ್ನು ಬಂಧಿಸಿ ವಿಚಾರಣೆ ನಡೆಸಿ ಈತನ ಮಾಹಿತಿ ಮೇರೆಗೆ ಮತ್ತೊಬ್ಬ ಆರೋಪಿ ಸೈಯದ್ ಮೂಸಾನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಂತ್ರಸ್ಥ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.ಈ ಬಗ್ಗೆ ಮಹಾದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಆಟೋ ಚಾಲಕರಿಬ್ಬರು ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನವರು. ಇವರಿಬ್ಬರು ಮುಳಬಾಗಿಲಿನಿಂದ ಬೆಂಗಳೂರಿಗೆ ಬಂದು ಇಲ್ಲೇ ಆಟೋ ಓಡಿಸಿಕೊಂಡು ರಾತ್ರಿ ವೇಳೆ ಆಟೋದಲ್ಲೇ ಮಲಗುತ್ತಿದ್ದರು. ಅಗತ್ಯವಿದ್ದಾಗ ಮಾತ್ರ ಊರಿಗೆ ಹೋಗುತ್ತಿದ್ದರು ಎಂಬುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

RELATED ARTICLES

Latest News