Sunday, May 4, 2025
Homeರಾಷ್ಟ್ರೀಯ | Nationalಪಹಲ್ಗಾಮ್ ದಾಳಿ ಕಹಿ ಘಟನೆಯ ನಡುವೆಯೂ ಕಾಶ್ಮೀರದಲ್ಲಿ ಶಂಕರ ಜಯಂತಿ ಆಚರಣೆ

ಪಹಲ್ಗಾಮ್ ದಾಳಿ ಕಹಿ ಘಟನೆಯ ನಡುವೆಯೂ ಕಾಶ್ಮೀರದಲ್ಲಿ ಶಂಕರ ಜಯಂತಿ ಆಚರಣೆ

Shankara Jayanti celebrated in Kashmir

ಶ್ರೀನಗರ, ಮೇ.3- ಪಹಲ್ಲಾಮ್ ದಾಳಿ ನಡುವೆಯೂ ಜಮ್ಮು-ಕಾಶ್ಮೀರದಲ್ಲಿ ಆದಿ ಶಂಕರಾಚಾರ್ಯರ ಜಯಂತಿ ಆಚರಿಸಲಾಗಿದೆ. ಸಿಆರ್‌ಪಿಎಫ್ ತಂಡದ ಸಹಾಯದಿಂದ ವಿಶೇಷ ಹೋಮ ನೆರವೇರಿಸಲಾಗಿದೆ. ಮೈಸೂರು ಮತ್ತು ಬೆಂಗಳೂರಿನಿಂದ ತೆರಳಿದ್ದ 13 ಜನರ ತಂಡ ಈ ವಿಶೇಷ ಪೂಜೆ ಮಾಡಿದೆ.

ಜಮ್ಮು ಕಾಶ್ಮೀರದಲ್ಲಿ ಶಾಂತಿ, ನೆಮ್ಮದಿ ನೆಲೆಸಲೆಂದು ಪ್ರಾರ್ಥಿಸಲಾಗಿದೆ. ದೇಶ ರಕ್ಷಣೆಗಾಗಿ ಯೋಧರಿಗೆ ಹೆಚ್ಚು ಆರೋಗ್ಯ ಶಕ್ತಿ ಸಿಗಲೆಂದು ಆಶಿಸಿ ರುದ್ರಾಭಿಷೇಕ, ಮೃತ್ಯುಂಜಯ ಜಪ ಮಾಡಲಾಗಿದೆ.

ಜಮ್ಮು-ಕಾಶ್ಮೀರ ತಂಡದಿಂದ ವಿಶೇಷ ವಾದ್ಯಗೋಷ್ಠಿ ಕೂಡ ನಡೆಯಿತು. ಜಿಲ್ಲಾ ಆಡಳಿತದಿಂದ ವಿಶೇಷ ಪೂಜೆ, ಹೋಮ-ಹವನ ನಡೆದಿದೆ. ಡಾಕ್ಟರ್‌ ನಾಗಲಕ್ಷ್ಮಿ ನಾಗಾರ್ಜುನ್ ಮೈಸೂರು ತಂಡವು ಭರತನಾಟ್ಯದ ಮೂಲಕ ಶಂಕರಾಚಾರ್ಯ ಜೀವನ ಕಥೆಯನ್ನು ಪ್ರಸ್ತುತ ಪಡಿಸಿತು.

RELATED ARTICLES

Latest News