ಮುಂಬೈ, ಡಿ 15 (ಪಿಟಿಐ) – ಮಗಳು ಶೀನಾ ಬೋರಾ ಹತ್ಯೆಗೆ ಸಂಬಂಸಿದಂತೆ ಮಾಜಿ ಮಾಧ್ಯಮ ಕಾರ್ಯನಿರ್ವಾಹಕ ಇಂದ್ರಾಣಿ ಮುಖರ್ಜಿ ಮತ್ತು ಇತರ ಆರೋಪಿಗಳ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) 23 ಸಾಕ್ಷಿಗಳ ಪಟ್ಟಿಯನ್ನು ಸಲ್ಲಿಸಿದೆ.
ಮುಂಬೈನ ಮಾಜಿ ಪೊಲೀಸ್ ಕಮಿಷನರ್ ರಾಕೇಶ್ ಮಾರಿಯಾ ಮತ್ತು ಇತರ ಪೊಲೀಸ್ ಅಕಾರಿಗಳನ್ನು ಒಳಗೊಂಡಿರುವ ಪಟ್ಟಿಯಲ್ಲಿ ಸಿಬಿಐ ಅವರು ಅವಲಂಬಿತ ಸಾಕ್ಷಿಗಳು ಆಗಿರುವುದರಿಂದ ಅವರನ್ನು ವಿಚಾರಣೆಯಲ್ಲಿ ಪರಿಶೀಲಿಸಲಾಗುವುದಿಲ್ಲ ಎಂದು ಹೇಳಿದರು.
ಇಂದ್ರಾಣಿ ಮತ್ತು ಆಕೆಯ ಇಬ್ಬರು ಮಾಜಿ ಗಂಡಂದಿರಾದ ಪೀಟರ್ ಮುಖರ್ಜಿ, ಸಂಜೀವ್ ಖನ್ನಾ ಅವರುಗಳು ಇಂದ್ರಾಣಿ ಅವರ ಮೊದಲ ಸಂಬಂಧದಿಂದ ಜನಿಸಿದ್ದ ಮಗಳು ಶೀನಾ ಬೋರಾ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಕೇಂದ್ರದಲ್ಲಿ ಮೋದಿ ಹ್ಯಾಟ್ರಿಕ್ ಸರ್ಕಾರ ಗ್ಯಾರಂಟಿ : ಸಮೀಕ್ಷೆ
ಶೀನಾ (24) ಅವರನ್ನು ಏಪ್ರಿಲ್ 24, 2012 ರಂದು ಆಕೆಯ ತಾಯಿ ಇಂದ್ರಾಣಿ, ಖನ್ನಾ ಮತ್ತು ಚಾಲಕ ಶ್ಯಾಮ್ವರ್ ರೈ ಅವರು ಪೀಟರ್ ಮುಖರ್ಜಿಯೊಂದಿಗೆ ಸಂಚು ರೂಪಿಸಿ ಕೊಲೆ ಮಾಡಿದ್ದರು ಎಂದು ಆರೋಪಿಸಲಾಗಿತ್ತು.