Friday, May 30, 2025
Homeಅಂತಾರಾಷ್ಟ್ರೀಯ | Internationalಮತ್ತೆ ಜಗತ್ತಿನ ಮುಂದೆ ಬೆತ್ತಲಾದ 'ಪಾಪಿ'ಸ್ತಾನ

ಮತ್ತೆ ಜಗತ್ತಿನ ಮುಂದೆ ಬೆತ್ತಲಾದ ‘ಪಾಪಿ’ಸ್ತಾನ

Shehbaz Sharif Trolled For Gifting Chinese Drill Photo As 'Op Bunyan' Memento To Pak Army Chief

ಇಸ್ಲಾಮಾಬಾದ್, ಮೇ 26– ಭಾರತದ ವಿರುದ್ಧ ಗೊಗರೆದು ಕದನ ವಿರಾಮ ಘೋಷಿಸಿಕೊಂಡಿರುವ ಪಾಕಿಸ್ತಾನ ಮತ್ತೆ ತನ್ನ ನರಿಬುದ್ದಿ ಪ್ರದರ್ಶಿಸಿದೆ. ಭಾರತದ ವಿರುದ್ಧದ ಹೋರಾಟದಲ್ಲಿ ನಾವು ಗೆದ್ದಿದ್ದೇವೆ ಎಂಬ ಸಂಭ್ರಮಾಚರಣೆ ನಡೆಸಿರುವುದು ಮಾತ್ರವಲ್ಲದೆ, ಪಾಕ್ ಪ್ರಧಾನಿ ಶಹಬಾಜ್ ಷರೀಫ್ ಅವರು ಸೇನಾ ಮುಖ್ಯಸ್ಥ ಅಸಿಮ್ ಮುನೀರ್‌ಗೆ ಬೆಂಕಿ ಉಗುಳುತ್ತಿರುವ ರಾಕೆಟ್‌ಗಳ ಫೋಟೋ ಗಿಫ್ಟ್ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.

ಪಾಕಿಸ್ತಾನದ ಅತ್ಯುನ್ನತ ಮಿಲಿಟರಿ ಶ್ರೇಣಿ ಫೀಲ್ಡ್ ಮಾರ್ಷಲ್ ಹುದ್ದೆಗೆ ಬಡ್ತಿ ಪಡೆದ ಹಿನ್ನೆಲೆಯಲ್ಲಿ ಅಸಿಮ್ ಮುನೀರ್ ಪಾಕಿಸ್ತಾನದ ರಾಜಕಾರಣಿಗಳಿಗಾಗಿ ಔತಣಕೂಟವನ್ನು ಆಯೋಜಿಸಿದ್ದರು. ಈ ವೇಳೆ ಶಹಬಾಜ್ ಷರೀಫ್ ದೀರ್ಘ ವ್ಯಾಪ್ತಿಯ ರಾಕೆಟ್ ಲಾಂಚರ್‌ನಿಂದ ಕ್ಷಿಪಣಿ ಚಿಮ್ಮುತ್ತಿರುವ ಫೋಟೋವನ್ನು ಗಿಫ್ಟ್ ನೀಡಿದ್ದರು.

ಶಹಬಾಜ್ ಷರೀಫ್ ಗಿಫ್ಟ್ ನೀಡುತ್ತಿರುವ ಫೋಟೋವನ್ನು ಪಾಕಿಸ್ತಾನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿತ್ತು. ಈ ಫೋಟೋ ಹಂಚಿ ಕೊಂಡ ಬೆನ್ನಲ್ಲೇ ನೆಟ್ಟಿಗರು ಈ ಫೋಟೋದ ಸತ್ಯಾಸತ್ಯತೆ ಪರಿಶೀಲನೆ ಇಳಿದಾಗ ಚೀನಾ ಸೇನೆಯ ಫೋಟೋ ಎನ್ನುವುದು ದೃಢಪಟ್ಟಿದೆ.

2017 ರಲ್ಲಿ ಚೀನಾ ಪರೀಕ್ಷೆ ಮಾಡಿದ್ದ ಫೋಟೋವನ್ನು ಎಡಿಟ್ ಮಾಡಿ ಗಿಫ್ಟ್ ನೀಡಿರುವ ವಿಚಾರ ಬೆಳಕಿಗೆ ಬಂದಿದೆ. ಈ ವಿಚಾರ ಬೆಳಕಿಗೆ ಬಂದ ಬೆನ್ನಲ್ಲೇ ನೆಟ್ಟಿಗರು ಪಾಕಿಸ್ತಾನವನ್ನು ಫುಲ್ ಟ್ರೋಲ್ ಮಾಡಲು ಆರಂಭಿಸಿದ್ದಾರೆ.

ವಿಜಯೋತ್ಸವ ಆಚರಿಸಲು ಪಾಕಿಸ್ತಾನಕ್ಕೆ ಯಾವುದೇ ಫೋಟೋ ಸಿಕ್ಕಿಲ್ಲ. ಈ ಕಾರಣಕ್ಕೆ ಚೀನಾ ಸೇನೆಯ ಫೋಟೋವನ್ನು ಎಡಿಟ್ ಮಾಡಿ ಗಿಫ್ಟ್ ನೀಡಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈಗ ಈ ಫೋಟೋ ಭಾರಿ ವೈರಲ್ ಆಗಿದೆ.

RELATED ARTICLES

Latest News