ಕೋಲ್ಕತ್ತಾ, ಜ.12- ಪದಚ್ಯುತ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಎಲ್ಲಿಯವರೆಗೆ ಭಾರತದಲ್ಲಿ ಇರಲು ಇಚ್ಚಿಸುತ್ತಾರೂ ಬೇಕಾದರೂ ಅಲ್ಲಿಯವರೆಗೆ ಅವಕಾಶನೀಡಬೇಕು ಎಂದು ಮಾಜಿ ರಾಜತಾಂತ್ರಿಕ,ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಹೇಳಿದ್ದಾರೆ.
ಇಲ್ಲಿ ನಡೆಯುತ್ತಿರುವ 16ನೇ ಅಪೀಜಯ್ ಕೋಲ್ಕತ್ತಾ ಸಾಹಿತ್ಯೋತ್ಸವದ ಸಂದರ್ಭದಲ್ಲಿ ಮಾತನಾಡಿದ ಅವರು ಭಾರತೀಯ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಕಳೆದ ತಿಂಗಳು ಢಾಕಾಗೆ ತೆರಳಿ ಅಲ್ಲಿನ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಕ್ಕೆ ಸಂತಸ ವ್ಯಕ್ತಪಡಿಸಿ,ಮಾತುಕತೆ ನಿರಂತರವಾಗಿ ನಡೆಯಬೇಕು ಮತ್ತು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಜೊತೆ ಸಂಪರ್ಕ ಸ್ಥಾಪಿಸುವ ಅಗತ್ಯವಿದೆ ಎಂದರು.
ಶೇಖ್ ಹಸೀನಾ ನಮಗೆ ಸಾಕಷ್ಟು ಒಳ್ಳೆಯದನ್ನು ಮಾಡಿದ್ದಾರೆ ಎಂದು ನಾವು ಎಂದಿಗೂ ಒಪ್ಪುವುದಿಲ್ಲ ಆದರೆ ಆಕೆಗೆ ಆಶ್ರಯ ನೀಡಿರುವುದು ನನಗೆ ಖುಷಿ ತಂದಿದೆ. ಅಕೆ ಬಯಸಿದಷ್ಟು ಕಾಲ ನಾವುಆತಿಥ್ಯ ವಹಿಸಬೇಕು ಎಂದು ನಾನು ಭಾವಿಸುತ್ತೇನೆ. ಅದು ಅವಳ ಜೀವನದುದ್ದಕ್ಕೂ ಆಗಿದ್ದರೂ ಸಹ ಪರವಾಗಿಲ್ಲ ಎಂದು ಹೇಳಿದರು.
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿಯಾಗುತ್ತಿರುವುದು ನಿಜ, ಆದರೆ ಹೆಚ್ಚಾಗಿ ಅವರು ಹಸೀನಾ ಬೆಂಬಲಿಗರು ಎಂದು ಕಾಂಗ್ರೆಸ್ ನಾಯಕ ಹೇಳಿದರು. ಅನೇಕ ಸಂಘರ್ಷಗಳು ರಾಜಕೀಯ ಭಿನ್ನಾಭಿಪ್ರಾಯಗಳ ಇತ್ಯರ್ಥಕ್ಕೆ ಸಂಬಂಧಿಸಿದೆ ಎಂದು ಹೇಳಿದರು. ಇದಕ್ಕೂ ಮೊದಲು ಪ್ರಶ್ನೋತ್ತರ ಅವಧಿಯಲ್ಲಿ ಅಯ್ಯರ್ ಅವರು, ಪಾಕಿಸ್ತಾನಿಗಳು ಭಾರತೀಯರಂತೆಯೇ ಇದ್ದಾರೆ, ಆದರೆ ವಿಭಜನೆಯ ಅಪಘಾತ ಮಾತ್ರ ಅವರನ್ನು ಬೇರೆ ದೇಶವನ್ನಾಗಿ ಮಾಡಿತು ಎಂದು ಅಭಿಪ್ರಾಯಪಟ್ಟರು.
ಪಾಕಿಸ್ತಾನವು ಭಯೋತ್ಪಾದನೆಯನ್ನು ಹರಡುವ ದೇಶವಾಗಿದೆ ಆದರೆ ಅದು ಭಯೋತ್ಪಾದನೆಗೆ ಬಲಿಯಾಗಿದೆ ಎಂದು ಅಯ್ಯರ್ ಹೇಳಿದರು. ಪಾಕಿಸ್ತಾನ ಹಿಂದೆ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅನ್ನು ಅಧಿಕಾರಕ್ಕೆ ತರಬಹುದೆಂದು ಭಾವಿಸಿದ್ದರು, ಆದರೆ ಇಂದು ಅವರ ಏಕೈಕ ದೊಡ್ಡ ಬೆದರಿಕೆ ಅಫ್ಘಾನಿಸ್ತಾನದಲ್ಲಿ ತಾಲಿಬಾಆಗಿದೆ ಎಂದು ಅವರು ಹೇಳಿದರು.