Wednesday, July 9, 2025
Homeಮನರಂಜನೆಸ್ಟನ್ನಿಂಗ್ ಲುಕ್ ನಲ್ಲಿ ಶೈನ್ ಶೆಟ್ಟಿ ಶೈನಿಂಗ್

ಸ್ಟನ್ನಿಂಗ್ ಲುಕ್ ನಲ್ಲಿ ಶೈನ್ ಶೆಟ್ಟಿ ಶೈನಿಂಗ್

Shine Shetty Shining in Stunning Look

ಶೈನ್ ಶೆಟ್ಟಿ ಈಗ ಶೈನಿಂಗ್ ಸ್ಟಾರ್ ಅಂದ್ರೆ ತಪ್ಪಾಗುವುದಿಲ್ಲ. ಬ್ಯಾಕ್ ಟು ಬ್ಯಾಕ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರರಂಗದಲ್ಲಿ ಭರವಸೆಯ ನಟ ಕೂಡ. ಕುಂದಾಪುರದ ಉದಯೋನ್ಮುಖ ಪ್ರತಿಭೆ ಶೈನ್ ಶೆಟ್ಟಿ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹೊಸದಾಗಿ ನಾಲ್ಕು ಫೋಟೋಗಳನ್ನ ಹಾಕಿದ್ದು, ಸ್ಟನ್ನಿಂಗ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಯಾವುದೋ ಸ್ಟ್ರೀಟ್ ನಲ್ಲಿ ಫೋಟೋ ತೆಗೆಸಿಕೊಂಡಂತೆ ಕಾಣಿಸ್ತಾ ಇದೆ. ಕ್ರೀಮಿ ಕಲರ್ ಪ್ಯಾಂಟ್, ಬ್ರೌನ್ ಕಲರ್ ಶರ್ಟ್, ಅದರ ಮೇಲೋಂದಷ್ಟು ಫ್ಲವರ್ಸ್ ಇದ್ದು, ಲುಕ್ ಸಖತ್ತಾಗಿ ಕಾಣಿಸ್ತಾ ಇದೆ. ಈ ಲುಕ್ ನಲ್ಲಿ ಶೈನ್ ಶೆಟ್ಟಿಯನ್ನ ಕಂಡ ಹುಡುಗಿಯರ ಹಾರ್ಟ್ ಬೀಟ್ ಖಂಡಿತ ಜೋರಾಗಿರುತ್ತದೆ.

ಈ ಫೋಟೋಗಳನ್ನು ಹಂಚಿಕೊಂಡಿರುವ ಶೈನ್ ಶೆಟ್ಟಿ ಬ್ಯೂಟಿಫುಲ್ ಸಾಲುಗಳನ್ನ ಬರೆದಿದ್ದಾರೆ. ಫೋಟೋ ಎಷ್ಟು ಅಂದವಾಗಿದೆಯೋ ಸಾಲುಗಳು ಅಷ್ಟೇ ಅಂದವಾಗಿದೆ. `ಕೆಲವು ಭಾವನೆಗಳಿಗೆ ಭಾಷೆಯ ಅಗತ್ಯವಿಲ್ಲ. ಅವುಗಳಿಗೆ ಒಂದು ಕ್ಷಣ ಸಾಕು’ ಎಂದು ಬರೆದಿದ್ದಾರೆ. ಈ ಫೋಟೋಗಳಿಗೆ ಕಮೆಂಟ್ಸ್ ಸೆಕ್ಷನ್ ನೋಡಬೇಕು ನೀವೂ, ಹಾರ್ಟ್ ಗಳೇ ತುಂಬಿವೆ. ಅಂದ್ರೆ ಶೈನ್ ಶೆಟ್ಟಿ ಅಷ್ಟು ಹಾರ್ಟ್ ಕದ್ದಿದ್ದಾರೆ.

ಶೈನ್ ಶೆಟ್ಟಿ ಕಿರುತೆರೆ, ಹಿರಿತೆರೆ ಎರಡರಲ್ಲೂ ಪ್ರೇಕ್ಷಕರನ್ನು ರಂಜಿಸಿದವರು. ಬಿಗ್ ಬಾಸ್ ಸೀಸನ್ 7ರಲ್ಲೂ ಮನರಂಜಿಸಿದವರು. ಉಡುಪಿಯಿಂದ ಬೆಂಗಳೂರಿಗೆ ಬಂದು ಒಂದು ಸಣ್ಣ ತಳ್ಳುವ ಗಾಡಿಯಲ್ಲಿ ಹೊಟೇಲ್ ಶೂರು ಮಾಡಿ, ಬಳಿಕ ದೊಡ್ಡ ಮಟ್ಟದಲ್ಲಿಯೇ ಗಲ್ಲಿ ಕಿಚನ್ ಶುರು ಮಾಡಿದ್ದವರು. ಸದ್ಯ ಅವರ ಜಸ್ಟ್ ಮ್ಯಾರೀಡ್ ಸಿನಿಮಾ ರಿಲೀಸ್ ಗೆ ರೆಡಿ ಇದೆ. ಸಿನಿಮಾದಲ್ಲಿ ಬ್ಯುಸಿ ಇರುವ ಶೈನ್ ಶೆಟ್ಟಿ ಅಭಿಮಾನಿಗಳಿಗಾಗಿ ಸೋಷಿಯಲ್ ಮೀಡಿಯಾದಲ್ಲೂ ಆಕ್ಟೀವ್ ಆಗಿದ್ದಾರೆ.

RELATED ARTICLES

Latest News