ಕಾರವಾರ ಜು.26: ಶಿರೂರು ಬಳಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಗುಡ್ಡ ಕುಸಿದು ಸತತ 12 ದಿನ ಕಾರ್ಯಾಚರಣೆ ನಡೆಸಿದ ರಕ್ಷಣಾ ತಂಡಗಳು ವಾಪಸಾಗಿದೆ. ಘಟನೆಯಲ್ಲಿ ಆಟವಾಡುತಿದ್ದ ಪುಟ್ಟ ಕಂದಮ್ಮಗಳು, ಟೀ ಅಂಗಡಿಯಲ್ಲಿ ಚಹ ಸವಿಯುತಿದ್ದ ಟ್ರಕ್ ಚಾಲಕರು, ಗುಡ್ಡದ ಬದಿಯಲ್ಲಿ ವಿಶ್ರಾಂತಿ ಪಡೆಯುತಿದ್ದ ಚಾಲಕ, ಮನೆಯಲ್ಲಿ ಅಡುಗೆ ಮಾಡುತಿದ್ದ ಮಹಿಳೆ ಸೇರಿ 11 ಜನ ಭೂ ಕುಸಿತ ದುರಂತದಲ್ಲಿ ಕಾಣೆಯಾಗಿದ್ದರು.
ಸತತ ಕಾರ್ಯಾಚರಣೆ ನಂತರ ಗಂಗಾವಳಿ ನದಿ ತೀರದ ಭಾಗದಲ್ಲಿ ಎಂಟು ಶವಗಳು ದೊರೆತಿತ್ತು ಆದರೆ, ಕೇರಳ ಮೂಲದ ಅರ್ಜುನ್, ಶಿರೂರಿನ ಲೋಕೇಶ್ ನಾಯ್ಕ, ಜಗನ್ನಾಥ ನಾಯ್ಕ ರವರಿಗಾಗಿ ಶೋಧ ಕಾರ್ಯ ನಡೆಯುತ್ತಿತ್ತು.ಟೀ ಅಂಗಡಿ ಬಳಿ ಮಣ್ಣು ತೆರವು ಮಾಡಿದರೂ ಯಾವ ಗುರುತು ಪತ್ತೆಯಾಗಲೇ ಇಲ್ಲ. ಹೀಗಾಗಿ ಸೇನಾಪಡೆ , ಖಾಸಗಿ ಏಜೆನ್ಸಿ ಸಹಾಯ ಪಡೆದ ಜಿಲ್ಲಾಡಳಿತ. ತಂತ್ರಜ್ಞಾನ ಸಹಾಯದಿಂದ ಘಟನಾ ಸ್ಥಳದ ಸುತ್ತಮುತ್ತ ಶೋಧ ಕಾರ್ಯ ನಡೆಸಿದೆ.
ಇನ್ನು ದ್ರೋಣ್ ಹಾಗೂ ಥರ್ಮಲ್ ಸ್ಕ್ಯಾನ್ ಕಾರ್ಯಾಚರಣೆ ನಡೆಸಿದ ಖಾಸಗಿ ಕಂಪನಿಯ ನಿವೃತ್ತ ಮೇಜರ್ ಜನರಲ್ ಇಂದ್ರಬಾಲನ್ ಹೇಳುವಂತೆ ನದಿಯಲ್ಲಿ ರೆಲಿಂಗ್, ಟವರ್, ಲಾರಿ, ಟ್ಯಾಂಕರ್ ಕ್ಯಾಬಿನ್ ಸಿಗಬೇಕಿತ್ತು. ಮೂರು ಸ್ಪಾಟ್‌ಗಳು ಸಿಕ್ಕಿದ್ದು, ಅದರ ಪೈಕಿ ಅರ್ಜುನ್ ಲಾರಿ ಯಾವುದು ಎಂದು ಸಿಗಬೇಕಿದೆ . 60 ಮೀ. ಉದ್ದ ಹಾಗೂ 20 ಮೀ. ಆಳದಲ್ಲಿ ಒಂದು ಮೆಟಲ್ ಡಿಟೆಕ್ಟ್ ಆಗಿದ್ದು, 400 ಲಾಗ್ಸ್ ಟ್ರಕ್‌ನಲ್ಲಿದ್ದರಿಂದ ಹೆಚ್ಚು ಆಳದಲ್ಲಿ ಇರುವ ಸಾಧ್ಯತೆಗಳಿತ್ತು. 500 ಮೀ. ದೂರದಲ್ಲಿ ಮರದ ದಿಮ್ಮಿಗಳು ಸಿಕ್ಕಿದ್ದು, ಲಾರಿಯಿಂದ ಕೆಲವು ದಿಮ್ಮಿಗಳು ದೂರಾಗಿವೆ.
ಎರಡು ಸ್ಪಾಟ್‌ಗಳ ಪೈಕಿ ಲಾರಿ ಯಾವುದು ಎಂದು ನೋಡಲಾಗುತ್ತಿದೆ. ತುಂಬಾ ಆಳದಲ್ಲಿರುವ ಸ್ಪಾಟ್ ಲಾರಿಯಾಗಿರಬಹುದು ಎಂದು ಊಹೆ ಮಾಡಲಾಗಿದೆ. ಟ್ರಕ್‌ನ ಉಳಿದ ಭಾಗಗಳ ಜತೆಯೇ ಕ್ಯಾಬಿನ್ ಕೂಡ ಇದೆ. ಅದರೊಳಗೆ ಅರ್ಜುನ್ ಇರುವ ಸಾಧ್ಯತೆಯಿದೆ. ನದಿಯ ನೀರಿನ ಹರಿವಿನ ವೇಗ 8 ನಾಟ್ಸ್ ಇದೆ.
ಡೀಪ್ ಡೈವರ್ಸ್‌ಗಳಿಗೆ ಅಲ್ಲಿ ಹೋಗಿ ಪತ್ತೆ ಮಾಡುವುದು ಭಾರಿ ಕಷ್ಟ ಆಗುತ್ತದೆ. ಹಾಗಾಗಿ ನದಿಯ ನೀರಿನ ಹರಿವು ಕಡಿಮೆ ಆಗುವವರೆಗೂ ಡೀಪ್ ಡೈವರ್ಸ್ ಕಾರ್ಯಾಚರಣೆ ಮಾಡುವುದು ಕಷ್ಟವಾಗಿದೆ. ಇನ್ನು ಮಳೆಯೂ ಕೂಡ ಹೆಚ್ಚುಇರುವುದರಿಂದ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ಆದಷ್ಟು ಬೇಗ ರೆಸ್ಕ್ಯೂ ಕಾರ್ಯಾಚರಣೆ ನಡೆಸಲಾಗುವುದು ಎಂದು ತಜ್ಞರು ತಿಳಿಸಿದ್ದಾರೆ.ಇಂದು ಸೇನೆ ಕಾರ್ಯಾಚರನೆ ಮುಗಿಸಿದ್ದು,ಸ್ಥಳಕ್ಕೆ ಕೇರಳಾದಿಂದ ಕೆಲ ಶಾಸಕರು ಬೇಟಿ ನೀಡಿದ್ದಾರೆ.