ಬೆಂಗಳೂರು, ಜು.18– ಕಾರವಾರದ ಅಂಕೋಲಾ ತಾಲ್ಲೂಕಿನ ಶಿರೂರು ಬಳಿಯ ಮಂಗಳೂರು- ಗೋವಾ ಹೆದ್ದಾರಿಯಲ್ಲಿ ದಿಢೀರ್ ಮಣ್ಣು ಕುಸಿದು ಗಂಗಾವಳಿ ನದಿಗೆ ಕೊಚ್ಚಿಕೊಂಡು ಹೋದವರ ಪೈಕಿ ಇಂದು ಬೆಳಗ್ಗೆ ಅಂಕಿತಾ(5) ಹಾಗೂ ಟ್ಯಾಂಕರ್ ಚಾಲಕ ಮುರುಗನ್ ಮೃತದೇಹ ಪತ್ತೆಯಾಗಿವೆ.
ಗೋಕರ್ಣ ಸಮುದ್ರದ ದಡದಲ್ಲಿ ಟ್ಯಾಂಕರ್ ಚಾಲಕ ಮುರುಗನ್ ಹಾಗೂ ಅಂಕಿತಾ ಮೃತದೇಹ ತೇಲುತ್ತಿದ್ದುದು ಕಂಡು ಅಗ್ನಿಶಾಮಕ ದಳ ಇಂದು ಶವಗಳನ್ನು ಮೇಲೆತ್ತಿದ್ದಾರೆ. ಅಂದಿನ ಘಟನೆಗೆ ಸಂಬಂಧಿಸಿದಂತೆ ಇದುವರೆಗೂ ಆರು ಶವಗಳು ಪತ್ತೆಯಾಗಿವೆ.
ಈ ಭಾಗದಲ್ಲಿ ಕಳೆದೊಂದು ವಾರದಿಂದ ದಾರಾಕಾರ ಮಳೆ ಸುರಿಯುತ್ತಿದ್ದು, ಮನೆಗೆ ಹೊಂದಿಕಂಡಂತೆ ಶಿರೂರಿನ ಲಕ್ಷ್ಮಣ ನಾಯ್ಕ್ ಕುಟುಂಬ ಚಹಾ ಅಂಗಡಿ ಹಾಗೂ ಹೊಟೇಲ್ ನಡೆಸುತ್ತಾ ಜೀವನ ನಡೆಸುತ್ತಿದ್ದರು.
ಮಂಗಳವಾರ ಬೆಳಗ್ಗೆ ಏಕಾಏಕಿ ಗುಡ್ಡದ ಮಣ್ಣು ಕುಸಿಯುತ್ತಿದ್ದಂತೆ ಈ ಭಾಗದ ಜನರು ಆ ಭಾಗದಿಂದ ಓಡಿ ಪ್ರಾಣ ಉಳಿಸಿಕೊಂಡರೆ, ನೋಡ ನೋಡುತ್ತಿದ್ದಂತೆ ಲಕ್ಷ್ಮಣನಾಯ್‌್ಕ ಅವರ ಮನೆ- ಹೊಟೇಲ್ ಮೇಲೆ ಮಣ್ಣು ಕುಸಿದಿದೆ.ಆ ಸಂದರ್ಭದಲ್ಲಿ ಟ್ಯಾಂಕರ್‌ಗಳನ್ನು ನಿಲ್ಲಿಸಿ ಚಹಾ ಸೇವಿಸುತ್ತಿದ್ದ ಚಾಲಕರು ಹಾಗೂ ಲಕ್ಷ್ಮಣ್‌ನಾಯ್ಕ್ ಅವರ ಕುಟುಂಬದ ಐದು ಮಂದಿ ಸೇರಿ ಹಲವು ಮಂದಿ ನಾಪತ್ತೆಯಾಗಿದ್ದರು.
ತದನಂತರದಲ್ಲಿ ಅವರಿಗಾಗಿ ಹುಡುಕಾಟ ನಡೆಸಿದಾಗ ಪಕ್ಕದಲ್ಲೇ ಹರಿಯುತ್ತಿದ್ದ ಗಂಗಾವಳಿ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದ ಬಗ್ಗೆ ಶಂಕೆ ವ್ಯಕ್ತಪಡಿಸಿ ಎಸ್‌ಡಿಆರ್‌ಎಫ್ ಅಗ್ನಿ ಶಾಮಕದಳ ಹಾಗೂ ಪೊಲೀಸರು ಹುಡುಕಾಟ ನಡೆಸಿದಾಗ ಗೋಕರ್ಣ ಸಮುದ್ರದ ಬ್ರಿಡ್‌್ಜ ಬಳಿ ಒಂದೇ ಕುಟುಂಬದ ನಾಲ್ವರ ಮೃತದೇಹಗಳನ್ನು ಹೊರ ತೆಗೆಯಲಾಗಿತ್ತು. ಇಂದು ಅದೇ ಕುಟುಂಬಕ್ಕೆ ಸೇರಿದ ಅಂಕಿತಾ ಹಾಗೂ ಶವ ಹಾಗೂ ಟ್ಯಾಂಕರ್ ಚಾಲಕ ಮುರುಗನ್ ಮೃತದೇಹ ಪತ್ತೆಯಾಗಿವೆ.
ಇಂದೂ ಸಹ ಜೆಸಿಬಿಗಳ ಮೂಲಕ ಹೆದ್ದಾರಿಯಲ್ಲಿ ಕುಸಿದು ಬಿದ್ದಿರುವ ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಈ ಮಾರ್ಗದ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.ನದಿಯಲ್ಲಿ ತೇಲಿ ಹೋಗಿರುವ ಟ್ಯಾಂಕರ್‌ನಿಂದ ಗ್ಯಾಸ್‌ನ್ನು ಯಾವ ರೀತಿ ಖಾಲಿ ಮಾಡಬಹುದೆಂಬುದರ ಬಗ್ಗೆ ತಜ್ಞರ ಸಲಹೆ ಪಡೆಯಲು ಜಿಲ್ಲಾಡಳಿತ ಮುಂದಾಗಿದೆ.
ಈ ಭಾಗದಲ್ಲಿ ಏಕಾಏಕಿ ದಿಢೀರ್ ಮಣ್ಣು ಕುಸಿಯಲು ಕಾರಣವೇನೆಂಬುದರ ಬಗ್ಗೆ ಅರಿಯಲು ಜಿಯೋಗ್ರಾಫಿಕಲ್ ಸರ್ವೆ ಆಫ್ ಇಂಡಿಯಾ ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಅಂದು ಮಣ್ಣು ಕುಸಿತವಾಗಿ ಏಕಾಏಕಿ ಹರಿದ ನೀರಿನ ರಭಸಕ್ಕೆ ಗ್ರಾಮದ ನಾಲ್ಕು ಮನೆಗಳು ಕುರುಹಿಲ್ಲದಂತೆ ನೀರಿನಲ್ಲಿ ಕೊಚ್ಚಿಹೋಗಿವೆ. ಅಲ್ಲದೆ, ಐದಾರು ಮನೆಗಳು ಸಂಪೂರ್ಣ ಹಾನಿಯಾಗಿವೆ.