Tuesday, July 1, 2025
Homeಜಿಲ್ಲಾ ಸುದ್ದಿಗಳು | District Newsಶಿವಮೊಗ್ಗ, : ಹೃದಯಾಘಾತದಿಂದ ಬಾಣಂತಿ ಸಾವು

ಶಿವಮೊಗ್ಗ, : ಹೃದಯಾಘಾತದಿಂದ ಬಾಣಂತಿ ಸಾವು

Shivamogga, : Woman dies of heart attack

ಶಿವಮೊಗ್ಗ,ಜು.1-ಬಾಣಂತನಕ್ಕೆಂದು ತವರಿಗೆ ಬಂದಿದ್ದ ಒಂದೂವರೆ ತಿಂಗಳ ಬಾಣಂತಿ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಅಯನೂರಿನಲ್ಲಿ ನಡೆದಿದೆ.ಹರ್ಷಿತ(22) ಹೃದಯಾಘಾತಕ್ಕೆ ಬಲಿಯಾದ ಬಾಣಂತಿ. ಶಿವಮೊಗ್ಗ ಜಿಲ್ಲೆಯ ಅಯನೂರಿನ ಹರ್ಷಿತ ಅವರನ್ನು ಹಾಸನ ಜಿಲ್ಲೆಯ ಕೊಮೇನಹಳ್ಳಿಗೆ ಕೊಟ್ಟು ವಿವಾಹ ಮಾಡಲಾಗಿತ್ತು.

ಬಾಣಂತನಕ್ಕಾಗಿ ತವರಿಗೆ ಬಂದಿದ್ದ ಹರ್ಷಿತಾಗೆ ನಿನ್ನೆ ಎದೆನೋವು ಕಾಣಿಸಿಕೊಂಡಿದೆ. ತಂಕಗೊಂಡ ಕುಟುಂಬಸ್ಥರು ಕೂಡಲೇ ಹಾಸನದಿಂದ ಪತಿಯನ್ನು ಕರೆಸಿಕೊಂಡು ಆಸ್ಪತ್ರೆಗೆ ಕರೆದೊಯ್ಯುವಾಗ ಆ್ಯಂಬುಲೆನ್ಸ್‌ನಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಬಾಣಂತನಕ್ಕೆಂದು ತವರು ಸೇರಿದ್ದ ಹರ್ಷಿತಾ ಮರಳಿ ಗಂಡನ ಮನೆಗೆ ಬಾರದಂತಾಗಿದೆ ಎಂದು ಕುಟುಂಬ ಸದಸ್ಯರು ಕಣ್ಣೀರಿಟ್ಟಿದ್ದಾರೆ.ರಾಜ್ಯದಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅದರಲ್ಲೂ ಹಾಸನದಲ್ಲಿ ಸಾವಿನ ಸರಣಿ ಮುಂದುವರೆದಿದ್ದು, ಅದರಲ್ಲೂ ಮಧ್ಯ ವಯಸ್ಸಿನವರಲ್ಲೇ ಹೆಚ್ಚಾಗಿ ಹೃದಯಘಾತಗಳು ಸಂಭವಿಸುತ್ತಿರುವುದು ರಾಜ್ಯದ ಜನತೆಯನ್ನು ಬೆಚ್ಚಿಬೀಳಿಸಿದೆ.

RELATED ARTICLES

Latest News