Monday, November 25, 2024
Homeಜಿಲ್ಲಾ ಸುದ್ದಿಗಳು | District Newsಶಿವನ ಸಮುದ್ರದ ದೇವಾಲಯಗಳಲ್ಲಿ 4 ತಿಂಗಳಲ್ಲಿ 20ಲಕ್ಷಕ್ಕೂ ಹೆಚ್ಚು ಕಾಣಿಕೆ ಸಂಗ್ರಹ

ಶಿವನ ಸಮುದ್ರದ ದೇವಾಲಯಗಳಲ್ಲಿ 4 ತಿಂಗಳಲ್ಲಿ 20ಲಕ್ಷಕ್ಕೂ ಹೆಚ್ಚು ಕಾಣಿಕೆ ಸಂಗ್ರಹ

ಕೊಳ್ಳೇಗಾಲ,ಜೂನ್‌.14-ತಾಲ್ಲೂಕಿನ ಶಿವನ ಸಮುದ್ರದ ಬಳಿಯ ದೇವಾಲಯಗಳ ಹುಂಡಿ ಏಣಿಕೆ ಕಾರ್ಯ ನಡೆದಿದ್ದು ಕಳೆದ 4 ತಿಂಗಳ ಅವಧಿಯಲ್ಲಿ ಬರೋಬ್ಬರಿ 20ಲಕ್ಷಕ್ಕೂ ಹೆಚ್ಚು ಕಾಣಿಕೆ ಸಂಗ್ರಹವಾಗಿದೆ.

ಉಪವಿಭಾಗಾಧಿಕಾರಿ ಮಹೇಶ್‌ ನೇತೃತ್ವದಲ್ಲಿ ಮಧ್ಯ ರಂಗನಾ ಥಸ್ವಾಮಿ ದೇವಾಲಯದ ದಾಸೋಹ ಭವನದಲ್ಲಿ ಸಮೂಹ ದೇವಾಲಯಗಳಾದ ಮಧ್ಯ ರಂಗನಾಥಸ್ವಾಮಿ ದೇವಾಲಯ, ಪ್ರಸನ್ನ ಮೀನಾಕ್ಷಿ ಹಾಗು ಸೋಮೇಶ್ವರ ದೇವಾಲಯ ಮತ್ತು ಆದಿಶಕ್ತಿ ಮಾರಮ್ಮ ದೇವಾಲಯಗಳಹುಂಡಿಗಳ ಎಣಿಕೆ ನಡೆದಿದೆ. ಈ ಮೂರು ದೇವಾಲಯಗಳಿಂದ ಒಟ್ಟು 20,12,910 ರೂ. ನಗದು ಸಂಗ್ರಹವಾಗಿದೆ.

ಇದಲ್ಲದೆ 2.5 ಗ್ರಾಂ. ಚಿನ್ನದ ಪದಾರ್ಥಗಳು, 5 ಗ್ರಾಂ ಬೆಳ್ಳಿ ಕೂಡ ಭಕ್ತರು ಸರ್ಮಪಿಸಿದ್ದಾರೆ. ಸಮೂಹ ದೇವಾಲಯಗಳ ಕಾರ್ಯ ನಿರ್ವಾಹಕಾಧಿಕಾರಿ ಸುರೇಶ್‌ ಉಪ ತಹಶೀಲ್ದಾರ್‌ ವಿಜಯ ಕುಮಾರ್, ಕಸಬಾ ರಾಜಸ್ವ ನೀರಿಕ್ಷಕ ನಿರಂಜನ್‌‍, ಪಾಳ್ಯ ರಾಜಸ್ವ ನೀರಿಕ್ಷಕ ರಂಗಸ್ವಾಮಿ, ಗ್ರಾಮ ಆಡಳಿತಾಧಿಕಾರಿ ರಾಕೇಶ್‌‍, ಮಮತ, ಪ್ರದೀಪ್‌‍, ಶಾಂತರಾಜು, ಮಹದೇವಸ್ವಾಮಿ, ಕುಮಾರ್, ಪ್ರಸಾದ್‌‍, ಗ್ರಾಮ ಸಹಾಯಕ ಸೀಗನಾಯಕ, ಕೋಟೇಕ್‌ ಮಹೀಂದ್ರಾ ಬ್ಯಾಂಕ್‌ ಸಿಬ್ಬಂದಿ, ದೇವಾಲಯದ ಅರ್ಚಕರಾದ ಶ್ರೀಧರ್‌ ಮಾಧವನ್‌, ಮಧುಸೂದನ, ನಾಗರಾಜು ದೀಕ್ಷಿತ್‌ ಮತ್ತಿತರಿದ್ದರು.

ಕೊಳ್ಳೇಗಾಲ,ತಾಲ್ಲೂಕಿನ ಶಿವನ ಸಮುದ್ರದ ಸಮೂಹ ದೇವಾಲಯಗಳ ಹುಂಡಿ ಏಣಿಕೆ ಕಾರ್ಯ ಗುರುವಾರ ನಡೆದಿದ್ದು. 4 ತಿಂಗಳ ಅವಧಿಯಲ್ಲಿ ಬರೋಬ್ಬರಿ 20,12,910 ರೂ. ನಗದು ಹಣ ಸಂಗ್ರಹವಾಗಿದೆ.ಉಪವಿಭಾಗಾಧಿಕಾರಿ ಮಹೇಶ್‌ ನೇತೃತ್ವದಲ್ಲಿ ಮಧ್ಯ ರಂಗನಾ ಥಸ್ವಾಮಿ ದೇವಾಲಯದ ದಾಸೋಹ ಭವನದಲ್ಲಿ ಸಮೂಹ ದೇವಾಲಯಗಳಾದ ಮಧ್ಯ ರಂಗನಾಥಸ್ವಾಮಿ ದೇವಾಲಯ, ಪ್ರಸನ್ನ ಮೀನಾಕ್ಷಿ ಹಾಗು ಸೋಮೇಶ್ವರ ದೇವಾಲಯ ಮತ್ತು ಆದಿಶಕ್ತಿ ಮಾರಮ್ಮ ದೇವಾಲಯಗಳಹುಂಡಿಗಳ ಎಣಿಕೆ ನಡೆದಿದೆ. ಈ ಮೂರು ದೇವಾಲಯಗಳಿಂದ ಒಟ್ಟು 20,12,910 ರೂ. ನಗದು ಸಂಗ್ರಹವಾಗಿದೆ. 2.5 ಗ್ರಾಂ. ಚಿನ್ನದ ಪದಾರ್ಥಗಳು, 5 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ.

ಈ ವೇಳೆ ಸಮೂಹ ದೇವಾಲಯಗಳ ಕಾರ್ಯ ನಿರ್ವಾಹಕಾಧಿಕಾರಿ ಸುರೇಶ್‌‍, ಉಪ ತಹಶೀಲ್ದಾರ್‌ ವಿಜಯ ಕುಮಾರ್, ಕಸಬಾ ರಾಜಸ್ವ ನೀರಿಕ್ಷಕ ನಿರಂಜನ್‌‍, ಪಾಳ್ಯ ರಾಜಸ್ವ ನೀರಿಕ್ಷಕ ರಂಗಸ್ವಾಮಿ, ಗ್ರಾಮ ಆಡಳಿತಾಧಿಕಾರಿ ರಾಕೇಶ್‌‍, ಮಮತ, ಪ್ರದೀಪ್‌‍, ಶಾಂತರಾಜು, ಮಹದೇವಸ್ವಾಮಿ, ಕುಮಾರ್, ಪ್ರಸಾದ್‌‍, ಗ್ರಾಮ ಸಹಾಯಕ ಸೀಗನಾಯಕ, ಕೋಟೇಕ್‌ ಮಹೀಂದ್ರಾ ಬ್ಯಾಂಕ್‌ ಸಿಬ್ಬಂದಿ, ದೇವಾಲಯದ ಅರ್ಚಕರಾದ ಶ್ರೀಧರ್, ಮಾಧವನ್‌‍, ಮಧುಸೂದನ್‌‍, ನಾಗರಾಜು ದೀಕ್ಷಿತ್‌ ಮತ್ತಿತರಿದ್ದರು.

RELATED ARTICLES

Latest News