Wednesday, December 25, 2024
Homeಮನರಂಜನೆಶಿವಣ್ಣನ ಸರ್ಜರಿ ಸಕ್ಸಸ್, ಇನ್ನೊಂದು ವಾರ ಮುಂದುವರೆಯಲಿದೆ ಚಿಕಿತ್ಸೆ

ಶಿವಣ್ಣನ ಸರ್ಜರಿ ಸಕ್ಸಸ್, ಇನ್ನೊಂದು ವಾರ ಮುಂದುವರೆಯಲಿದೆ ಚಿಕಿತ್ಸೆ

Shivarajkumar Surgery Successful, Doctor Assures Quick Recovery

ವಾಷಿಂಗನ್‌,ಡಿ.25– ಸ್ಯಾಂಡಲ್‌ವುಡ್‌ನ ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ಗೆ ಇಲ್ಲಿನ ಫ್ಲೋರಿಡಾದ ಮಿಯಾಮಿ ಕ್ಯಾನ್ಸರ್‌ ಇನ್ಸಿಟ್ಯೂಟ್‌ನಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ಭಾರತ ಮೂಲದ ತಜ್ಞ ವೈದ್ಯ ಡಾ. ಮುರುಗೇಶ್‌ ನೇತೃತ್ವದಲ್ಲಿ ಮಿಯಾಮಿ ಆಸ್ಪತ್ರೆಯಲ್ಲಿ ಶಿವಣ್ಣನಿಗೆ ಆಪರೇಷನ್‌ ಮಾಡಲಾಗಿದೆ. ಸುಮಾರು 6 ಗಂಟೆಗಳ ಕಾಲ ತಜ್ಞ ವೈದ್ಯರು ಈ ಶಸ್ತ್ರಚಿಕಿತ್ಸೆ ನಡೆಸಿದ್ದು,ಭಾರತೀಯ ಕಾಲಮಾನ ಕಳೆದ ನಿನ್ನೆ ಸಂಜೆ 6 ಗಂಟೆ ಯಿಂದ ರಾತ್ರಿ 11:30ರ ಸುಮಾರಿಗೆ ಶಸ್ತ್ರಚಿಕಿತ್ಸೆ ನಡೆದಿದೆ.

ಆಸ್ಪತ್ರೆಯಲ್ಲಿ ಶಿವಣ್ಣನೊಂದಿಗೆ ಪತ್ನಿ ಗೀತಾ, ಪುತ್ರಿ ನಿವೇದಿತಾ, ಬಾಮೈದ ಮಧು ಬಂಗಾರಪ್ಪ ಜೊತೆಗಿದ್ದಾರೆ. ಇನ್ನೊಂದು ವಾರ ಚಿಕಿತ್ಸೆ ಮುಂದುವರೆಯಲಿದೆ ಎಂದು ಮೂಲಗಳು ತಿಳಿಸಿವೆ.
ನುರಿತ ವೈದ್ಯರು ಶಿವಣ್ಣ ಆರೋಗ್ಯದ ಮೇಲೆ ನಿಗಾ ವಹಿಸಲಿದ್ದು ಚೇತರಿಕೆ ನಂತರ ಬಳಿಕ ಮನೆಗೆ ಶಿಫ್‌್ಟ ಆಗಲಿದ್ದಾರೆ. ಇನ್ನೊಂದು ತಿಂಗಳು ಅಮೆರಿಕದಲ್ಲೇ ಇರುವ ಶಿವರಾಜ್‌ಕುಮಾರ್‌ ಜನವರಿ 26ರಂದು ಭಾರತಕ್ಕೆ ಮರಳಲಿದ್ದಾರೆ.

ಇನ್ನು ಫೋನ್‌ ಮಾಡಿ ಶಿವಣ್ಣ ಆರೋಗ್ಯ ವಿಚಾರಿಸಿದ ಸಿಎಂ ಸಿದ್ದರಾಮಯ್ಯ ಯಶಸ್ವಿ ಶಸ್ತ್ರಚಿಕಿತ್ಸೆಯಿಂದ ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.ಇದರ ಜೊತೆ ಕೆಲ ಕೇಂದ್ರ ಸಚಿವರು ಕೂಡ ಕುಟುಂಬಕ್ಕೆ ದೈರ್ಯ ತುಂಬಿದ್ದಾರೆ.

RELATED ARTICLES

Latest News