Sunday, October 5, 2025
Homeಮನರಂಜನೆಶಿವಾರ್ಜುನ್‌ ಅವರಿಗೆ 2021ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ

ಶಿವಾರ್ಜುನ್‌ ಅವರಿಗೆ 2021ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ

Shivarjuna wins 2021 State Film Award

ಬೆಂಗಳೂರು, ಅ.5- ಕಳೆದ 2021ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ಹಿರಿಯ ನಿರ್ಮಾಣ ನಿರ್ವಾಹಕ ಶಿವಕುಮಾರ್‌ ಎಸ್‌‍(ಶಿವಾರ್ಜುನ್‌) ಪೊಗರು ಚಿತ್ರಕ್ಕಾಗಿ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದಾರೆ.

40 ವರ್ಷಗಳ ಹಿಂದೆ ಸಂಸಾರದ ಗುಟ್ಟು, ಪ್ರೇಮ ಪರ್ವ ಮುಂತಾದ ಚಿತ್ರಗಳಲ್ಲಿ ನಟನಾಗಿ ಕಾಣಿಸಿಕೊಂಡಿದ್ದ ಶಿವಾರ್ಜುನ್‌ ಅವರು ನಂತರ ಗೌರಿಶಂಕರ್‌, ಎಸ್‌‍.ರಾಮಚಂದ್ರ, ಮಧುಸೂದನ್‌, ಸುಂದರನಾಥ ಸುವರ್ಣ ಅವರಂತಹ ಹಿರಿಯ ಛಾಯಾಗ್ರಾಹಕರ ಬಳಿ ಸಹಾಯಕ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಆನಂತರ ನಿರ್ಮಾಣ ನಿರ್ವಾಹಕರಾಗಿ ಕನ್ನಡದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆಗಳಾದ ವಜ್ರೇಶ್ವರಿ, ಈಶ್ವರಿ, ರಾಮು ಫಿಲಂಸ್‌‍, ಕೆ.ಸಿ.ಎನ್‌.ಮೂವೀಸ್‌‍ ಹಾಗೂ ಅರ್ಜುನ್‌ ಸರ್ಜಾ ಅವರ ಶ್ರೀರಾಮ ಫಿಲಂಸ್‌‍ ನಿರ್ಮಾಣದ ಚಿತ್ರಗಳಿಗೆ ಶಿವಾರ್ಜುನ್‌ ನಿರ್ಮಾಣ ನಿರ್ವಾಹಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅಷ್ಟೇ ಅಲ್ಲದೆ ಹೆಸರಾಂತ ನಿರ್ದೇಶಕ ರಾಜಮೌಳಿ ಅವರ ಸಿಂಹಾದ್ರಿ, ವಿಕ್ರಮಾರ್ಕುಡು, ಸ್ಟೂಡೆಂಟ್‌ ನಂ.1, ಛತ್ರಪತಿ ಚಿತ್ರಗಳಿಗೆ ಹಾಗೂ ತೆಲುಗು, ತಮಿಳಿನ ಸೂಪರ್‌ ಹಿಟ್‌ ಚಿತ್ರಗಳಿಗೂ ನಿರ್ಮಾಣ ನಿರ್ವಾಹಕರಾಗಿ(ಕರ್ನಾಟಕದಲ್ಲಿ) ಕೆಲಸ ಮಾಡಿದ್ದಾರೆ.

ಕನ್ನಡದ ಸುಮಾರು 600 ಚಿತ್ರಗಳಿಗೆ ಹಾಗೂ ಪರಭಾಷೆಯ ಸುಮಾರು 150ಕ್ಕೂ ಹೆಚ್ಚು ಚಿತ್ರಗಳಿಗೆ ನಿರ್ಮಾಣ ನಿರ್ವಾಹಕರಾಗಿ ಕೆಲಸ ಮಾಡಿರುವ ಶಿವಾರ್ಜುನ್‌, ಚಿರಂಜೀವಿ ಸರ್ಜಾ ಅಭಿನಯದ ಶಿವಾರ್ಜುನ ಚಿತ್ರವನ್ನು ನಿರ್ಮಾಣ ಕೂಡ ಮಾಡಿದ್ದಾರೆ.

ಲಾಕಪ್‌ ಡೆತ್‌, ಸಿಂಹದ ಮರಿ, ಎಕೆ 47, ಮೋಜುಗಾರ ಸೊಗಸುಗಾರ ಹೀಗೆ ಕನ್ನಡದ ಅನೇಕ ಸೂಪರ್‌ ಹಿಟ್‌ ಚಿತ್ರಗಳಿಗೆ ನಿರ್ಮಾಣ ನಿರ್ವಹಣೆ ಮಾಡಿರುವ ಶಿವಾರ್ಜುನ್‌ ಅವರಿಗೆ ಪ್ರಸ್ತುತ 2021 ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಯಲ್ಲಿ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರದ ನಿರ್ಮಾಣ ನಿರ್ವಹಣೆಗಾಗಿ ರಾಜ್ಯ ಪ್ರಶಸ್ತಿ ಬಂದಿದೆ.

RELATED ARTICLES

Latest News