Sunday, September 29, 2024
Homeಆರೋಗ್ಯ / ಜೀವನಶೈಲಿಐಟಿಸಿ ಸನ್‌ಫೀಸ್ಟ್‌ ಬೇಕ್ಡ್‌ ಕ್ರಿಯೇಷನ್ಸ್‌ ಬೇಕರಿ ಕೆಫೆ ಉದ್ಘಾಟಿಸಿದ ಶ್ರೇಯಾಂಕಾ ಪಾಟೀಲ್

ಐಟಿಸಿ ಸನ್‌ಫೀಸ್ಟ್‌ ಬೇಕ್ಡ್‌ ಕ್ರಿಯೇಷನ್ಸ್‌ ಬೇಕರಿ ಕೆಫೆ ಉದ್ಘಾಟಿಸಿದ ಶ್ರೇಯಾಂಕಾ ಪಾಟೀಲ್

ಬೆಂಗಳೂರು: ಐಟಿಸಿ ಸನ್‌ಫೀಸ್ಟ್‌ ಬೇಕ್ಡ್‌ ಕ್ರಿಯೇಷನ್ಸ್‌ ಅವರ ಮೊದಲ ಬೇಕರಿ ಕೆಫೆಯನ್ನು ಭಾರತೀಯ ಕ್ರಿಕೆಟಿಗರಾದ ಶ್ರೇಯಾಂಕಾ ಪಾಟೀಲ್‌ ಉದ್ಘಾಟಿಸಿದರು. ಫ್ಯಾಬ್‌ ಇಂಡಿಯಾ ಎಕ್ಸ್‌ಪೀರಿಯ್ಸ್‌ ಮಳಿಗೆಯಲ್ಲಿ ತೆರೆಯಲಾದ ಈ ಕೆಫೆ ಬೆಂಗಳೂರಿನಲ್ಲೇ ಮೊದಲನೆಯದು.

ಈ ಮೊದಲು ಕ್ಲೌಡ್‌ ಕಿಚನ್‌ ಹೊಂದಿದ್ದ ಐಟಿಸಿ ಸನ್‌ಫೀಸ್ಟ್‌ ಇದೀಗ ತಮ್ಮ ಕೆಫೆಯನ್ನೇ ತೆರೆದಿದೆ. ಇದರಲ್ಲಿ ಕ್ರೋಸೆಂಟ್ಸ್ ಮತ್ತು ಸ್ಯಾಂಡ್‌ವಿಚ್‌, ಪುಲ್-ಅಪಾರ್ಟ್ ಬ್ಯಾಗಲ್ಸ್ ಮತ್ತು ಬಾಗಲ್ ಟೋಸ್ಟಿಗಳು, ಡೆಸರ್ಟ್‌ ಮತ್ತು ಪೇಸ್ಟ್ರಿ, ಲೆಬ್ರೇಶನ್ ಕೇಕ್‌ ಸೇರಿದಂತೆ ಕ್ಯುರೇಟೆಡ್ ಉತ್ಪನ್ನಗಳನ್ನು ಒಳಗೊಂಡಿದೆ.

ಈ ಕುರಿತು ಮಾತನಾಡಿದ ಶ್ರೇಯಾಂಕಾ ಪಾಟೀಲ್‌, ಮೊದಲಿನಿಂದಲೂ ಐಟಿಸಿ ಅವರ ಎಲ್ಲಾ ತಿನಿಸುಗಳು ನನಗೆ ಅಚ್ಚುಮೆಚ್ಚು. ಇದೀಗ ಇವರ ಕೆಫೆ ಬೆಂಗಳೂರಿನಲ್ಲಿ ತೆರೆದಿರುವುದು ಸಂತಸ ತಂದಿದೆ. ಸಾಕಷ್ಟು ಜನರಿಗೆ ಗುಣಮಟ್ಟದ ಬೇಕರಿ ತಿನಿಸು ತಿನ್ನುವ ಹಂಬಲವಿರುತ್ತದೆ. ಅಂಥವರಿಗಾಗಿ ಈ ಕೆಫೆ ಹೆಚ್ಚು ಸೂಕ್ತ ಎಂದು ಹೇಳಿದರು.

ITC ಲಿಮಿಟೆಡ್‌ನ ಫುಡ್-ಟೆಕ್ ಬಿಸಿನೆಸ್ ಹೆಡ್ ರೋಹಿತ್ ಭಲ್ಲಾ ಮಾತನಾಡಿ, ಮುಂದಿನ ದಿನಗಳಲ್ಲಿ ಎಂಜಿ ರಸ್ತೆ, ಜಯನಗರದಲ್ಲಿಯೂ ಕೆಫೆ ತೆರೆಯುವ ಯೋಜನೆ ಹೊಂದಿದ್ದೇವೆ ಎಂದರು,

RELATED ARTICLES

Latest News