ಕ್ಯಾಲಿರ್ಫೋನಿಯಾ,ಜು.15– ಹದಿನೆಂಟು ದಿನಗಳ ಬಾಹ್ಯಾಕಾಶ ನಡಿಗೆ ನಂತರ ಭಾರತೀಯ ಗಗನಯಾತ್ರಿ ಶುಭಾಂಷು ಶುಕ್ಲಾ ಸೇರಿದಂತೆ ನಾಲ್ವರು ಭೂಮಿಗೆ ಸುರಕ್ಷಿತವಾಗಿ ಬಂದಿಳಿದಿದ್ದಾರೆ.
ಶುಭಾಂಷು ಸುಮಾರು 433 ಗಂಟೆಗಳ ಕಾಲ ಬಾಹ್ಯಾಕಾಶದಲ್ಲಿದ್ದು ಹೊಸ ದಾಖಲೆ ನಿರ್ಮಿಸಿದ್ದಾರೆ.
ನಾಲ್ವರು ಗಗನಯಾತ್ರಿಗಳನ್ನು ಹೊತ್ತ ಡ್ರಾಗನ್ ಕ್ಯಾಪ್ಸುಲ್ ಕ್ಯಾಲಿರ್ಫೋನಿಯಾದ ಫೆಸಿಫಿಕ್ ಸಾಗರದತ್ತ ಇಂದು ಬಂದಿಳಿದಿದೆ. ಅಂತಾರಿಕ್ಷಾದಲ್ಲಿ ಸುಮಾರು 17 ದಿನ ವಿವಿಧ ಪ್ರಯೋಗಗಳಲ್ಲಿ ಪಾಲ್ಗೊಂಡಿದ್ದ ಕಮಾಂಡರ್ ಶುಭಾಂಷು, ಅಮೆರಿಕದ ಪೆಗ್ಗಿ ವಿಟ್ಸನ್, ಹಂಗೇರಿಯ ಟರ್ಬೋ ಕಾಪು, ಪೊಲೆಂಡ್‌ನ ಸ್ಲಾವೋಸ್ ಯುವಿನ್ನಿವ್‌ಕಿ ಸುರಕ್ಷಿತವಾಗಿ ಭೂಮಿಯನ್ನು ಸ್ಪರ್ಶಿಸಿದ್ದಾರೆ.
ಈ ಪ್ರಯೋಗ ಯಶಸ್ವಿಯಾಗಿದ್ದು, ಮಿಷನ್ ಪೈಲೆಟ್ ಶುಭಾಂಷು ಬಗ್ಗೆ ಇಡೀ ಭಾರತಾದ್ಯಂತ ಹೆಮ್ಮೆ ವ್ಯಕ್ತವಾಗಿದೆ. ಅವರ ಕುಟುಂಬ ಸದಸ್ಯರು ಗಗನಯಾತ್ರೆಯನ್ನು ಯಶ್ವಸಿಗೊಳಿಸಿ ಸುರಕ್ಷಿತವಾಗಿ ಮರಳಿದ್ದಕ್ಕೆ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.ಪ್ರಸ್ತುತ ಅವರನ್ನು ಭೂಮಿಯ ವಾತಾವರಣಕ್ಕೆ ಒಗ್ಗಿಕೊಳ್ಳುವ ಸಲುವಾಗಿ ಅವರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಆಕ್ಸಿಯಂ-4 ಮಿಷನ್‌ನಲ್ಲಿ ಪ್ರಯೋಗಗಳನ್ನು ನಡೆಸಿ ನಿನ್ನೆ ಈ ನಾಲ್ವರು ಗಗನಯಾತ್ರಿಗಳು ಭೂಮಿಯತ್ತ ಪ್ರಯಾಣ ಆರಂಭಿಸಿದ್ದರು.ಭೂಮಿಯ ಓಜನ್ ಪದರ ದಾಟುವವರೆಗೂ ವೇಗವಾಗಿ ಬಂದ ಡ್ರಾಗ್ಯನ್ ನಂತರ ವೇಗ ಕಡಿಮೆ ಮಾಡಿಕೊಂಡು ಸುರಕ್ಷಿತವಾಗಿ ಭೂಮಿಯ ವಾತಾವರಣಕ್ಕೆ ಬಂದಿದೆ.
ನಂತರ ಪ್ಯಾರಚೂಟ್‌ಗಳು ತೆರೆದುಕೊಂಡು ಸುರಕ್ಷಿತವಾಗಿ ಸಮುದ್ರದಲ್ಲಿ ಇಳಿದಿದೆ. ಸುಮಾರು 22 ಗಂಟೆಗಳ ಪ್ರಯಾಣದ ನಂತರ 4 ಗಂಟೆ ವೇಳೆಗೆ ಭೂಮಿಯನ್ನು ತಲುಪಿದೆ.ಭೂಮಿಯತ್ತ ತೆರಳುವ ಮುನ್ನ ಗಗನಯಾತ್ರಿಗಳು ಸಾಮೂಹಿಕ ಫೊಟೋವನ್ನು ಕಳುಹಿಸಿದ್ದು, ಇದಕ್ಕೆ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಪ್ರತಿಕ್ರಿಯೆ ನೀಡಿ, ಶುಭಾಂಷು ನಿಮಗೆ ಸ್ವಾಗತ. ನೀವು ಭೂಮಿಗೆ ಮರಳುವುದನ್ನು ಇಡೀ ದೇಶ ಎದುರು ನೋಡುತ್ತಿದ್ದಾರೆ ಎಂದು ಟ್ವಿಟ್ ಮಾಡಿದ್ದರು.ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ವಿಜ್ಞಾನಿಗಳಿಗೆ ಎಲ್ಲರಿಂದ ಅಭಿನಂದನೆಗಳು ಹರಿದುಬಂದಿದೆ.