Sunday, May 19, 2024
Homeಕ್ರೀಡಾ ಸುದ್ದಿಐಸಿಸಿ ಪ್ರಶಸ್ತಿಗಾಗಿ ಗಿಲ್-ಸಿರಾಜ್ ಫೈಟ್

ಐಸಿಸಿ ಪ್ರಶಸ್ತಿಗಾಗಿ ಗಿಲ್-ಸಿರಾಜ್ ಫೈಟ್

ನವದೆಹಲಿ,ಅ.10- ಐಸಿಸಿ ಪ್ರಕಟಿಸಿರುವ ಸೆಪ್ಟೆಂಬರ್ ತಿಂಗಳ ಪ್ರತಿಷ್ಠಿತ ಪ್ರಶಸ್ತಿಗಾಗಿ ಟೀಮ್ ಇಂಡಿಯಾದ ಯುವ ಆಟಗಾರರಾದ ಶುಭಮನ್ ಗಿಲ್ ಹಾಗೂ ಮೊಹಮ್ಮದ್ ಸಿರಾಜ್ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿದೆ. ನ್ಯೂಜಿಲೆಂಡ್ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ಇಂಗ್ಲೆಂಡ್‍ನ ಆರಂಭಿಕ ಆಟಗಾರ ಡೇವಿಡ್ ಮಾಲನ್ ಅವರು ಕೂಡ ಭಾರತದ ಆಟಗಾರರಿಗೆ ಪೈಪೋಟಿ ನೀಡಲು ಐಸಿಸಿ ಪ್ರಕಟಿಸಿರುವ ಸೆಪ್ಟೆಂಬರ್ ತಿಂಗಳ ಅಟಗಾರನ ಪ್ರಶಸ್ತಿ ಸಾಲಿನಲ್ಲಿ ಸ್ಥಾನ ಪಡೆದಿದ್ದಾರೆ.

ಏಷ್ಯಾಕಪ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಟೀಮ್ ಇಂಡಿಯಾದ ಯುವ ಆಟಗಾರ ಶುಭಮನ್ ಗಿಲ್ ಅವರು ಈ ಪ್ರದರ್ಶನದಿಂದಾಗಿಯೇ ಸೆಪ್ಟೆಂಬರ್ ತಿಂಗಳ ಆಟಗಾರನ ಪ್ರಶಸ್ತಿ ರೇಸ್‍ನಲ್ಲಿದ್ದಾರೆ. 2023ರ ವಿಶ್ವಕಪ್‍ನ ಸಮಯದಲ್ಲಿ ಡೆಂಗ್ಯು ಜ್ವರದಿಂದ ಬಳಲುತ್ತಿರುವ ಗಿಲ್ , ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದರು. ಈಗ ಆಫ್ಘಾನಿಸ್ತಾನ ಹಾಗೂ ಪಾಕಿಸ್ತಾನ ವಿರುದ್ಧದ ಪಂದ್ಯಗಳಿಂದ ಅವರು ತಂಡದಿಂದ ಹೊರಗುಳಿಯಲಿದ್ದಾರೆ.

ಪಾಕ್ – ಭಾರತ ಪಂದ್ಯಕ್ಕೆ ರಾಸಾಯನಿಕ ದಾಳಿ ಬೆದರಿಕೆ

ಏಷ್ಯಾಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 5 ವಿಕೆಟ್ ಪಡೆದು ಒಡಿಐ ಶ್ರೇಯಾಂಕ ಪಟ್ಟಿಯಲ್ಲಿ ಮೊಹಮ್ಮದ್ ಸಿರಾಜ್ ನಂಬರ್ 1 ಸ್ಥಾನವನ್ನು ಅಲಂಕರಿಸಿದ್ದರಲ್ಲದೆ ಐಸಿಸಿ ಪ್ರಶಸ್ತಿಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಗಿಲ್ ಸೆಪ್ಟೆಂಬರ್ ತಿಂಗಳಲ್ಲಿ ಆಡಿದ 8 ಪಂದ್ಯಗಳಿಂದ 1 ಶತಕ ಸೇರಿದಂತೆ 480 ರನ್ ಗಳಿಸಿದ್ದಾರೆ. ಮಲಾನ್ 277 ರನ್ ಬಾರಿಸಿದ್ದಾರೆ. ಮೊಹಮ್ಮದ್ ಸಿರಾಜ್ 11 ವಿಕೆಟ್ ಪಡೆದಿದ್ದಾರೆ.

RELATED ARTICLES

Latest News