Friday, May 17, 2024
Homeಕ್ರೀಡಾ ಸುದ್ದಿಪಾಕ್ - ಭಾರತ ಪಂದ್ಯಕ್ಕೆ ರಾಸಾಯನಿಕ ದಾಳಿ ಬೆದರಿಕೆ

ಪಾಕ್ – ಭಾರತ ಪಂದ್ಯಕ್ಕೆ ರಾಸಾಯನಿಕ ದಾಳಿ ಬೆದರಿಕೆ

ನವದೆಹಲಿ,ಅ.10- ಇದೇ 14 ರಂದು ಗುಜರಾತ್‍ನ ನರೇಂದ್ರ ಮೋದಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯಕ್ಕೆ ಹಿಂದೆಂದೂ ಕಾಣದ ಅಭೂತಪೂರ್ವ ಭದ್ರತೆಯನ್ನು ಒದಗಿಸಲಾಗಿದೆ. ಪಂದ್ಯದ ಆರಂಭಕ್ಕೂ ಮುನ್ನವೇ ಬೆದರಿಕೆ ಕರೆಗಳು ಬಂದಿರುವ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಕ್ರೀಡಾಂಗಣ ಸುತ್ತಮುತ್ತ ಏಳು ಸುತ್ತಿನ ಸರ್ಪಗಾವಲಿನ ಭದ್ರತೆಯನ್ನು ಒದಗಿಸಲಾಗಿದೆ.

ಸುಮಾರು 11 ಸಾವಿರ ಎನ್‍ಎಸ್‍ಜಿ ಕ್ಷಿಪ್ರ ಕಾರ್ಯಾಪಡೆ, ಗೃಹರಕ್ಷಕ ದಳ, ಗುಜರಾತ್ ಪೊಲೀಸರು ಸೇರಿದಂತೆ ವಿವಿಧ ಶ್ರೇಣಿಯ ಭದ್ರತೆಯನ್ನು ಒದಗಿಸಲಾಗಿದೆ. ಕಳೆದ 20 ವರ್ಷಗಳಿಂದ ಅಹಮ್ಮದಾಬಾದ್ ನಗರದಲ್ಲಿ ಒಂದೇ ಒಂದು ಸಣ್ಣ ಕೋಮುಗಲಭೆ ಸಂಭವಿಸಿಲ್ಲ. ಅದೇ ರೀತಿ ಇದೇ 14 ರಂದು ನಡೆಯುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ನಾವು ಎಲ್ಲಾ ರೀತಿಯ ಭದ್ರತೆಯನ್ನು ಒದಗಿಸಿದ್ದೇವೆ ಎಂದು ನಗರ ಪೊಲೀಸ್ ಆಯುಕ್ತ ಜಿ.ಎಸ್.ಮಲ್ಲಿಕ್ ಹೇಳಿದ್ದಾರೆ.

ಪ್ರತಿ ಕ್ಷಣವೂ ಅಲರ್ಟ್ ಆಗಿರುತ್ತಿದ್ದ ಇಸ್ರೇಲ್ ಎಡವಿದ್ದೆಲ್ಲಿ..?, ಮೊಸಾದ್ ವಿಫಲವಾಗಿದ್ದೇಕೆ..?

ಪಂದ್ಯ ವೀಕ್ಷಿಸಲು ಅಂದಾಜು ಒಂದು ಲಕ್ಷ ಪ್ರೇಕ್ಷಕರು ಆಗಮಿಸುವ ಸಾಧ್ಯತೆ ಇದೆ. ನಮಗೆ ನಿಖರವಾಗಿ ಬೆದರಿಕೆ ಕರೆ ಬಂದಿದೆ. ಯಾವುದೇ ಕಾರಣಕ್ಕೂ ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡಬಾರದು. ಪಂದ್ಯವನ್ನು ಯಶಸ್ವಿಯಾಗಿ ನಡೆಸಿಕೊಡಲು ನಾವು ಸಂಪೂರ್ಣವಾಗಿ ಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.

ಗುಜರಾತ್ ಪೊಲೀಸ್ ಮೀಸಲು ಪಡೆಯ 13 ಕಂಪನಿಗಳ ಜೊತೆಗೆ ಕ್ಷಿಪ್ರ ಕಾರ್ಯಾಪಡೆ ಕಾರ್ಯ ನಿರ್ವಹಿಸಲಿದೆ. ಬೆದರಿಕೆ ಕರೆಯಿಂದ ಕೆಲವು ಸಂದರ್ಭದಲ್ಲಿ ಕಾಲ್ತುಳಿತ ಉಂಟಾಗುವ ಸಂಭವವಿದೆ. ಹೀಗಾಗಿ ನಾವು ಇದಕ್ಕಾಗಿಯೇ ವಿಶೇಷ ಕ್ಷಿಪ್ರ ಕಾರ್ಯಪಡೆಯನ್ನು ನಿಯೋಜನೆ ಮಾಡಿದ್ದೇವೆ. ಒಂದೇ ಒಂದು ಸಣ್ಣ ಅಹಿತಕರ ಘಟನೆ ನಡೆಯದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಸಿದ್ಧರಾಗಿದ್ದೇವೆ ಎಂದಿದ್ದಾರೆ.

ನಗರ ಇಲ್ಲವೇ ಕ್ರೀಡಾಂಗಣದ ಅಕ್ಕಪಕ್ಕ ಶಂಕಿತ ಉಗ್ರರು ರಾಸಾಯನಿಕ ವಿಕರಣಗಳನ್ನು ಚೆಲ್ಲಿ ಸ್ಪೋಟಿಸುವ ಬೆದರಿಕೆಯೊಡ್ಡಿದ್ದಾರೆ. ಇದಕ್ಕಾಗಿ ನಾವು ನುರಿತ ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆಯ ತಂಡವನ್ನು ನಿಯೋಜನೆ ಮಾಡಿದ್ದೇವೆ. ಜೊತೆಗೆ ಬಾಂಬ್ ನಿಷ್ಕ್ರಿಯ ದಳ ನುರಿತ ಶ್ವಾನಗಳು ಸೇರಿದಂತೆ ಹಲವು ಶ್ರೇಣಿಯ ಭದ್ರತೆಯನ್ನು ನಿಯೋಜನೆ ಮಾಡಲಾಗಿದೆ.

ದೆಹಲಿಯಲ್ಲಿ ಗುಂಪು ಘರ್ಷಣೆಗೆ ಇಬ್ಬರು ಬಲಿ, ಮತ್ತೊಬ್ಬ ಗಂಭೀರ

ಗ್ಯಾಂಗ್‍ಸ್ಟಾರ್ ಲಾರೆನ್ಸ್ ಬಿಶ್ಣೋಯ್ ಅವರನ್ನು ಬಿಡುಗಡೆ ಮಾಡಬೇಕೆಂದು ವಿದೇಶದಿಂದ ಬೆದರಿಕೆ ಕರೆಯೊಂದು ಕೆಲದಿನಗಳ ಹಿಂದೆ ಬಂದಿತ್ತು. 500 ಕೋಟಿ ರೂ. ನಗದು ನೀಡುವಂತೆ ಬೇಡಿಕೆ ಇಡಲಾಗಿದೆ. ಈ ಹಿನ್ನೆಲೆಯಲ್ಲಿ ಪಂದ್ಯಕ್ಕೆ ಸಣ್ಣದೊಂದು ಅಹಿತಕರ ಘಟನೆ ಉಂಟಾಗದಂತೆ ಗುಜರಾತ್ ಪೊಲೀಸರು ಭದ್ರತೆಯನ್ನು ಹೆಚ್ಚಿಸಿದ್ದಾರೆ.

RELATED ARTICLES

Latest News