ಅಹಮದಾಬಾದ್,ಅ.4-ಮಹತ್ವದ ಪರಿವರ್ತನೆಯ ನಡೆಯಲ್ಲಿ ಶುಭಮನ್ ಗಿಲ್ ಅವರನ್ನು ಮುಂಬರುವ ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಭಾರತೀಯ ಏಕದಿನ ತಂಡದ ನಾಯಕರನ್ನಾಗಿ ನೇಮಿಸಲಾಗಿದೆ, ನಾಯಕ ಸ್ಥಾನದಲ್ಲಿದ್ದ ರೋಹಿತ್ ಶರ್ಮಾ ಅವರನ್ನು ಕಳಗಿಳಿಸಿ ಸಾಮಾನ್ಯ ಆಟಗಾರನಾಗಿ ತಂಡಕ್ಕೆ ಆಯ್ಕೆ ಮಾಡಲಾಗಿದೆ ಇದು ಭಾರಿ ಚರ್ಚೆಗೆ ಗ್ರಾಸವಾಗಿದೆ. ವಿರಾಟ್ ಕೊಹ್ಲಿ ಜೊತೆಗೆ ರೋಹಿತ್ ಅವರನ್ನು ಬಿಸಿಸಿಐ ಘೋಷಿಸಿದ 15 ಸದಸ್ಯರ ತಂಡದಲ್ಲಿ ಹೆಸರಿಸಲಾಗಿದೆ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಉಪನಾಯಕನನ್ನಾಗಿ ನೇಮಿಸಲಾಗಿದೆ.
ಇದಲ್ಲದೆ ವೇಗಿ ಜಸ್ಪ್ರೀತ್ ಬುಮ್ರಾಅವರಿಗೆ ಏಕದಿನ ಪಂದ್ಯಕ್ಕೆ ವಿಶ್ರಾಂತಿ ನೀಡಲಾಗಿದೆ, ಆದರೆ ಭರವಸೆಯ ಆಟಗಾರ ಯಶಸ್ವಿ ಜೈಸ್ವಾಲ್ ಅವರನ್ನು ಏಕದಿನ ಪಂದ್ಯಗಳಿಗೆ ಆಯ್ಕೆ ಮಾಡಲಾಗಿದೆ.
ಸಿಡ್ನಿ, ಅಡಿಲೇಡ್ ಮತ್ತು ಮೆಲ್ಬೋರ್ನ್ನಲ್ಲಿ ಅ.19 ರಿಂದ ಅ.25 ರ ನಡುವೆ ಏಕದಿನ ಕ್ರಿಕೆಟ್ ಸರಣಿ ನಡೆಯಲಿವೆ ಮತ್ತು ನಂತರ ಐದು ಟಿ-20 ಕ್ರಿಕೆಟ್ಸರಣಿಯನ್ನು ನಡೆಯಲಿದೆ.
ಭಾರತೀಯ ಏಕದಿನ ತಂಡ: ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ವಿಸಿ), ಅಕ್ಷರ್ ಪಟೇಲ್, ಕೆ.ಎಲ್ ರಾಹುಲ್ (ಡಬ್ಲ್ಯುಕೆ), ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮದ್ ಸಿರಾಜ್, ಅರ್ಶ್ದೀಪ್ ಸಿಂಗ್ ,ಪ್ರಸೀದ್ ಕೃಷ್ಣ, ಪ್ರಶ್ರುದೀಪ್ ಸಿಂ ಮತ್ತು ಯಶಸ್ವಿ ಜೈಸ್ವಾಲ್.
ಭಾರತ ಟಿ-20 ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಶುಬನ್ ಗಿಲ್ (ಉಪನಾಯಕ), ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ , ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಆರ್ಷದೀಪ್ ಸಿಂಗ್, ಸಂಜುನ್ ರಾಧ್ಸನ್, ಕುಲದೀಪ್ ಸಿಂಗ್, ಹಶೀತ್ ರಾಣಾ,ರಿಂಕೂ ಸಿಂಗ್ ,ಸಂಜು ಸ್ಯಾಂಸನ್ ವಾಷಿಂಗ್ಟನ್ ಸುಂದರ್