Friday, January 10, 2025
Homeರಾಜ್ಯಶ್ವೇತಾ ಗೌಡ ವಂಚನೆ ಕೇಸ್ : ಮಾಜಿ ಸಚಿವ ವರ್ತೂರು ಪ್ರಕಾಶ್‌ಗೆ ಬಂಧನ ಭೀತಿ

ಶ್ವೇತಾ ಗೌಡ ವಂಚನೆ ಕೇಸ್ : ಮಾಜಿ ಸಚಿವ ವರ್ತೂರು ಪ್ರಕಾಶ್‌ಗೆ ಬಂಧನ ಭೀತಿ

Shweta Gowda fraud case: Former minister Varthur Prakash faces arrest threat

ಬೆಂಗಳೂರು,ಡಿ.24- ಚಿನ್ನಾಭರಣ ಖರೀದಿಸಿ ವಂಚಿಸಿದ ಪ್ರಕರಣದಲ್ಲಿ ಫೇಸ್‌‍ಬುಕ್‌ ಸ್ನೇಹಿತೆ ಶ್ವೇತಾ ಗೌಡ ಪ್ರಕರಣ ಸಂಬಂಧ ಇಂದು ಮಾಜಿ ಸಚಿವ ವರ್ತೂರು ಪ್ರಕಾಶ್‌ ಅವರು ಪುಲಕೇಶಿ ನಗರ ಪೊಲೀಸ್‌‍ ಠಾಣೆಗೆ ವಿಚಾರಣೆಗೆ ಹಾಜರಾದರು.

ಚಿನ್ನದ ವ್ಯಾಪಾರಿಗೆ ಶ್ವೇತಾ ವಂಚಿಸಿದ್ದಾರೆಂಬ ಪ್ರಕರಣ ಸಂಬಂಧ ವರ್ತೂರು ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಈ ಹಿಂದೆ ಎರಡು ಬಾರಿ ನೋಟಿಸ್‌‍ ನೀಡಲಾಗಿತ್ತಾದರೂ, ಅವರು ಹಾಜರಾಗಿರಲಿಲ್ಲ.

ಇದೀಗ ಮೂರನೇ ಬಾರಿ ನೋಟಿಸ್‌‍ ನೀಡಿದ್ದರಿಂದ ಬೆಳಿಗ್ಗೆಯೇ ವಿಚಾರಣೆಗೆ ಹಾಜರಾಗಿದ್ದು, ಪುಲಕೇಶಿ ನಗರ ಉಪ ವಿಭಾಗದ ಎಸಿಪಿ ಕಚೇರಿಯಲ್ಲಿ ಎಸಿಪಿ ಗೀತಾ ಅವರು ವಿಚಾರಣೆ ನಡೆಸುತ್ತಿದ್ದಾರೆ.

ಬಂಧನ ಬೀತಿ:
ವರ್ತೂರು ಪ್ರಕಾಶ್‌ ಅವರಿಗೆ ತನ್ನ ಪೇಸ್‌‍ ಬುಕ್‌ ಗೆಳತಿಯಿಂದಲೇ ಬಂಧನ ಬೀತಿ ಎದುರಾಗಿದೆ. ವಂಚಕಿ ಶ್ವೇತಾ ವಿಚಾರಣೆ ವೇಳೆ ಹಲವು ಸ್ಪೋಟಕ ಮಾಹಿತಿಗಳು ಬಹಿರಂಗವಾಗಿವೆ.
ಆರೋಪಿತೆ ಶ್ವೇತಾ ಹಲವು ಜ್ಯೂವಲ್ಲರಿ ಅಂಗಡಿಯ ಮಾಲೀಕರಿಗೆ ವಂಚಿಸಿದ ಆರೋಪ ಕೇಳಿ ಬಂದಿದೆ.

ಅಲ್ಲದೇ ಶಿವಮೊಗ್ಗ ಮೂಲದ ಜ್ಯುವೆಲ್ಲರಿ ಮಾಲೀಕರಿಗೆ ವಂಚಿಸಿದ ಆರೋಪ ಸಂಬಂಧ ಕಮರ್ಷಿಯಲ್‌ ಸ್ಪ್ರೀಟ್‌ ಠಾಣೆಯಲ್ಲಿ ಮೊತ್ತೊಂದು ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

RELATED ARTICLES

Latest News