Thursday, December 26, 2024
Homeರಾಜ್ಯಮುಡಾ ಕೇಸಿನಲ್ಲಿ ಸಿದ್ದರಾಮಯ್ಯ ಪಾರಾಗಲು ಸಾಧ್ಯವಿಲ್ಲ : ಹೆಚ್‌.ಡಿ.ಕೆ

ಮುಡಾ ಕೇಸಿನಲ್ಲಿ ಸಿದ್ದರಾಮಯ್ಯ ಪಾರಾಗಲು ಸಾಧ್ಯವಿಲ್ಲ : ಹೆಚ್‌.ಡಿ.ಕೆ

Siddaramaiah cannot escape in the Muda case: HDK

ಬೆಂಗಳೂರು,ಡಿ.5- ಮುಡಾ ಕೇಸಿನಲ್ಲಿ ಸಿದ್ದರಾಮಯ್ಯ ಅವರು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಕೇಂದ್ರದ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾದಲ್ಲಿ ಏನೆಲ್ಲಾ ನಡೆದಿದೆ ಎಂಬುದು ಹಾದಿ ಬೀದಿಯಲ್ಲಿ ಚರ್ಚೆ ನಡೆಯುತ್ತಿದೆ. ಈ ಸರ್ಕಾರ ಮತ್ತು ಸಚಿವರು ಆಲಿಬಾಬಾ 40 ಕಳ್ಳರ ರೀತಿ ಇದ್ದಾರೆ. ಮುಡಾ ಅಕ್ರಮದ ಬಗ್ಗೆ ಜಾರಿ ನಿರ್ದೇಶನಾಲಯ ಲೋಕಾಯುಕ್ತಗೆ ಪತ್ರ ಬರೆದಿದೆ.

ಇ.ಡಿ.ಪತ್ರಕ್ಕೂ ಕೇಂದ್ರ ಸರ್ಕಾರಕ್ಕೂ ಏನು ಸಂಬಂಧ? ಮುಡಾ ಹಗರಣದ ಬಗ್ಗೆ ಹೈಕೋರ್ಟ್‌ನಲ್ಲಿ ತನಿಖೆಗೆ ಆದೇಶ ಆಗಿದೆ. ಅದರ ಮೇಲೆ ತನಿಖೆ ನಡೆಯಿತ್ತಿದೆ. ಇ.ಡಿ.ಯವರಿಗೆ ಕೇಂದ್ರ ಸೂಚನೆ ಕೊಟ್ಟಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಮುಡಾ ಕೇಸಿನಲ್ಲಿ ರಾಜ್ಯಪಾಲರಿಗೆ ದೂರು ನೀಡಿದವರೇ ಇ.ಡಿ.ಗೂ ದೂರು ಕೊಟ್ಡಿದ್ದಾರೆ. ಮುಡಾದಲ್ಲಿ ಹಣಕಾಸು ವ್ಯವಹಾರ ನಡೆದಿರುವ ಹಿನ್ನಲೆಯಲ್ಲಿ ದೂರು ನೀಡಿದ್ದಾರೆ. ಅದರ ಮೇಲೆ ಇ.ಡಿ.ತನಿಖೆ ನಡೆಸಿ ಮಾಹಿತಿ ಕೊಟ್ಟಿದೆ. ಇದರಲ್ಲಿ ಕೇಂದ್ರವನ್ನು ದೂರಿದರೆ ಉಪಯೋಗ ಏನು? ಎಂದು ಅವರು ಪ್ರಶ್ನಿಸಿದರು.

ಸಿಎಂ-ಡಿಸಿಎಂ ನಡುವೆ ಅಧಿಕಾರ ಹಂಚಿಕೆ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ನೋಡಿ ರಾಷ್ಟ್ರೀಯ ಪಕ್ಷದಲ್ಲಿ ಇಷ್ಟೆಲ್ಲಾ ನಡೆಯುತ್ತಿದೆ. ರಾಷ್ಟ್ರೀಯ ವಾಹಿನಿಯಲ್ಲಿ ಅಧಿಕಾರ ಹಂಚಿಕೆ ಒಪ್ಪಂದ ಆಗಿದೆ ಎಂದು ಸ್ವತಃ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿಕೆ ಕೊಟ್ಟಿದ್ದಾರೆ. ಅಂತಹ ಒಪ್ಪಂದ ಆಗಿಲ್ಲ ಎಂದು ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಕೊಡುತ್ತಿದ್ದಾರೆ. ಇದು ಎಲ್ಲೆಲ್ಲಿಗೆ ಹೋಗಿ ನಿಲ್ಲುತ್ತದೆ ಎಂದು ನೋಡೋಣ ಎಂದು ಟಾಂಗ್‌ ಕೊಟ್ಟರು.

ಸಿದ್ದರಾಮಯ್ಯ ನಮ ಬಗ್ಗೆ ಮಾತನಾಡುವುದಕ್ಕೆ ಯಾವ ನೈತಿಕತೆ ಇಟ್ಟುಕೊಂಡಿದ್ದಾರೆ? ಪರಿಹಾರ ರೂಪದಲ್ಲಿ 14 ಸೈಟ್‌ ಪಡೆದಿರುವುದೇ ಕಾನೂನುಬಾಹಿರ. ಬಾಮೈದ ಕೊಂಡುಕೊಂಡಿರೋದೆ ಕಾನೂನುಬಾಹಿರ. ಸಿದ್ದರಾಮಯ್ಯಈ ಕೇಸ್‌‍ನಲ್ಲಿ ತಪ್ಪಿಸಿಕೊಳ್ಳೋಕೆ ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಕಾನೂನು ಎಲ್ಲರಿಗೂ ಒಂದೇ. ಕಾನೂನು ವ್ಯಾಪ್ತಿಯಲ್ಲಿ ತಪ್ಪು ಮಾಡಿದರೆ ಶಿಕ್ಷೆ ಅನುಭವಿಸಬೇಕು ಎಂದು ಅವರು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌‍ ಅಧಿಕಾರಕ್ಕೆ ಬಂದಾಗಿನಿಂದ 17ರಿಂದ 18 ಎಸ್‌‍ ಐಟಿಗಳನ್ನು ರಚನೆ ಮಾಡಿಕೊಂಡು ರಾಜಕೀಯ ಹಗೆತನ ತೋರುತ್ತಿರುವ ವ್ಯಕ್ತಿಗಳನ್ನು ಏನೆಂದು ಕರೆಯಬೇಕು? ಇ.ಡಿ.ಯನ್ನು ಸಚಿವ ಕೃಷ್ಣಭೈರೇಗೌಡರು ಸೀಳುನಾಯಿ ಎಂದು ನಿಂದಿಸಿದ್ದಾರೆ. ಅವರ ಹೇಳಿಕೆಯನ್ನು ಗಮನಿಸಿದ್ದೇನೆ. ಅವರಿಗೆ ಹ್ಯಾಟ್‌್ಸಆಫ್‌ ಮಾಡೋಣ ಎಂದು ಲೇವಡಿ ಮಾಡಿದರು.

ಲೋಕಾಯುಕ್ತ ಅಧಿಕಾರಿಗಳು ಯಾರು? ಸರ್ಕಾರದ ಅಧೀನದಲ್ಲಿ ಬರುವರರು ತಾನೇ? ಇವತ್ತು ಎಷ್ಟು ಜನ ಮಂತ್ರಿಗಳು ಸಮಜಾಯಿಷಿ ಕೊಡುತ್ತಿದ್ದಾರೆ. ಎಲ್ಲರೂ ರಿಲೆಯಲ್ಲಿ ನಿಂತವರಂತೆ ಇ.ಡಿ.ಯನ್ನು ಬೈಯ್ಯುತ್ತಿದ್ದಾರೆ. ತಪ್ಪು ಮಾಡಿದ್ದಾರೆ. ಹತಾಶೆಯಿಂದ ನಿಂದನೆ ಮಾಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಹಾಸನದ ಪ್ರಕರಣಕ್ಕೆ ಸಂಬಂಧಿಸಿ ವಕೀಲ ದೇವರಾಜೇಗೌಡ ಅವರು ಆಡಿಯೋ ರಿಲೀಸ್‌‍ ಮಾಡಿದ್ದರು. ಆಡಿಯೋದಲ್ಲಿ ಡಿ.ಕೆ.ಶಿವಕುಮಾರ್‌ ಏನೇನು ಹೇಳಿದರು ಎನ್ನುವುದನ್ನು ಇಡೀ ದೇಶವೇ ಕೇಳಿಸಿಕೊಂಡಿದೆ. ಹಾಸನದಲ್ಲಿ ಅದೇನೋ ಸಮಾವೇಶ ಮಾಡುತ್ತಿದ್ದಾರಂತೆ. ಸಾಂತ್ವನ ಹೇಳುವುದಕ್ಕೆ ಹೋಗುತ್ತಾರಂತೆ. ಯಾರಿಗೆ ಸಾಂತ್ವನ ಹೇಳ್ತೀಯಪ್ಪ? ಎಂದು ಕುಮಾರಸ್ವಾಮಿ ಕಿಡಿಕಾರಿದರು.

ಆ ಹೆಣ್ಣು ಮಕ್ಕಳ ಫೋಟೋ ಹಾಕಿ ಬೀದಿ ಬೀದಿಗಳಲ್ಲಿ ಪ್ರಚಾರ ಮಾಡಿದರಲ್ಲವೇ? ಯಾರಾದರೂ ಒಬ್ಬರನ್ನಾದರೂ ಬಂಧಿಸಿದ್ದೀರಾ ಇವರು? ಆ ವಿಡಿಯೋ ಹರಿಯಬಿಟ್ಟವರನ್ನು ಅರೆಸ್ಟ್‌ ಮಾಡಿದಿರಾ? ಇದು ನಿಮ ಎಸ್‌‍ಐಟಿ ತನಿಖೆನಾ? ಇದೆಲ್ಲದ್ದಕ್ಕೂ ಕಾಲ ಒಂದು ದಿನ ಉತ್ತರ ಕೊಡುತ್ತದೆ.

ಸತ್ಯಗಳು ಹೊರಗೆ ಬರುವುದು ನಿಶ್ಚಿತ. ಕೃಷ್ಣಭೈರೇಗೌಡರೇ ನೀವು ಹೇಗೆ ನಡೆದುಕೊಳ್ಳುತ್ತೀರಾ. ನಿಮ ಸರ್ಕಾರ ಹೇಗೆ ನಡೆದುಕೊಳ್ಳುತ್ತಿದೆ? ಸಚಿವ ಪರಮೇಶ್ವರ್‌ ಹೇಳಿಕೆ ನೋಡಿದೆ. ಇವರನ್ನು ದೇವರೇ ಕಾಪಾಡಬೇಕು. ಹಾಗಲ ಕಾಯಿಗೆ ಬೇವಿನ ಕಾಯಿ ಸಾಕ್ಷಿ ಎಂಬಂತೆ ಆಗಿದೆ ಇವರದ್ದು ಎಂದು ಹೇಳಿದರು.

RELATED ARTICLES

Latest News