Monday, September 1, 2025
Homeರಾಜಕೀಯ | Politicsಸಿದ್ದರಾಮಯ್ಯ, ಡಿಕೆಶಿ ರಾಹು-ಕೇತುಗಳಂತೆ ಹಿಂದೂಗಳನ್ನು ಕಾಡುತ್ತಿದ್ದಾರೆ : ಆರ್‌. ಅಶೋಕ್‌

ಸಿದ್ದರಾಮಯ್ಯ, ಡಿಕೆಶಿ ರಾಹು-ಕೇತುಗಳಂತೆ ಹಿಂದೂಗಳನ್ನು ಕಾಡುತ್ತಿದ್ದಾರೆ : ಆರ್‌. ಅಶೋಕ್‌

Siddaramaiah, DK are haunting Hindus like Rahu-Ketu: R. Ashok

ಬೆಂಗಳೂರು,ಸೆ.1- ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಹಿಂದೂಗಳಿಗೆ ರಾಹುಕೇತುಗಳಂತೆ ಕಾಡುತ್ತಿದ್ದಾರೆ. ಇವರಿಗೆ ಮುಸ್ಲಿಮರ ದರ್ಗಾಗಳನ್ನು ಮುಟ್ಟಲು ಧೈರ್ಯವಿಲ್ಲ.

ಹಿಂದೂ ದೇವಸ್ಥಾನಗಳ ಮೇಲೆಯೇ ಕಣ್ಣು ಎಂದು ಬಿಜೆಪಿ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌ ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ಷಡ್ಯಂತ್ರ ಮಾಡಿ ಎಸ್‌‍ಐಟಿ ತನಿಖೆಗೆ ಕೊಟ್ಟರು. ಈಗ ಚಾಮುಂಡೇಶ್ವರಿ ಬೆಟ್ಟಕ್ಕೆ ಕಣ್ಣು ಹಾಕಿದ್ದಾರೆ. ಈ ನಿಟ್ಟಿನಲ್ಲಿ ಧಮಸ್ಥಳ ಚಲೋ ಮಾದರಿಯಲ್ಲೇ ಚಾಮುಂಡೇಶ್ವರಿ ಚಲೋ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ನಾವು ಧರ್ಮಸ್ಥಳ ಉಳಿಸಲು ಬಂದಿದ್ದೇವೆ. ಈ ಕಾರ್ಯಕ್ರಮದ ಮೂಲಕ ಹಿಂದು ಧರ್ಮ ಉಳಿಸುವ ಕೆಲಸ ಮಾಡುತ್ತೇವೆ. ಹಿಂದು ದೇವಸ್ಥಾನಗಳನ್ನ ಮುಟ್ಟಿದರೆ ಹುಷಾರ್‌ ಎಂಬ ಸಂದೇಶ ರವಾನೆ ಮಾಡುತ್ತೇವೆ ಎಂದು ಎಚ್ಚರಿಕೆ ಕೊಟ್ಟರು.

ಶಾಸಕ ಮುನಿರತ್ನ ಮಾತನಾಡಿ, ವಾಲೀಕಿ ನಿಗಮದಲ್ಲಿ ಅವ್ಯವಹಾರ ಆಗಿ ಪತ್ರ ಬರೆದು ಅಧಿಕಾರಿಯೊಬ್ಬರು ಆತಹತ್ಯೆ ಮಾಡಿಕೊಂಡರು, ಬೋವಿ ನಿಗಮದಲ್ಲೂ ಒಬ್ಬ ಅಧಿಕಾರಿ ಆತಹತ್ಯೆ ಮಾಡಿಕೊಳ್ಳುತ್ತಾರೆ. ಆಗ ಈ ರಾಜ್ಯ ಸರ್ಕಾರ ಎಚ್ಚೇತ್ತುಕೊಳ್ಳುತ್ತದೆ. ಈ ಸರ್ಕಾರ ಶೇ.85 ಕಮೀಷನ್‌ ಸರ್ಕಾರ ಎಂದು ದೂರಿದರು.

ಬಿಜೆಪಿ ಮುಖಂಡರಾದ ಭಾರತಿ ಶೆಟ್ಟಿ ಮಾತನಾಡಿ, ಮಾಜಿ ಪ್ರಧಾನಿ ದಿವಂಗತ ರಾಜೀವ್‌ ಗಾಂಧಿ ಹೇಳಿದ್ದರು. ಶೇ.15ರಷ್ಟು ಜನರಿಗೆ ಶೇ.85% ಮಧ್ಯದಲ್ಲಿ ಸೋರಿಕೆ ಆಗುತ್ತದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಈಗ 85% ಕಮಿಷನ್‌ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೇಲನೆ ವಿರೋಧ ಪಕ್ಷದ ಉಪನಾಯಕ ಛಲವಾದಿ ನಾರಾಯಣ ಸ್ವಾಮಿ ಮಾತನಾಡಿ, ಬೋವಿ ನಿಗಮ ಅಷ್ಟೇ ಅಲ್ಲ. ಎಲ್ಲ ನಿಗಮಗಳು ಹಾಗೂ ಇಲಾಖೆಗಳಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ಈ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಹೇಳಿದರು.

RELATED ARTICLES

Latest News