Sunday, September 7, 2025
Homeರಾಜಕೀಯ | Politicsಖುಷಿಯಿಂದ ಮುಸ್ಲಿಮರ ಟೋಪಿ ಹಾಕಿಕೊಳ್ಳುವ ಸಿದ್ದರಾಮಯ್ಯ : ಯತ್ನಾಳ್‌ ಲೇವಡಿ

ಖುಷಿಯಿಂದ ಮುಸ್ಲಿಮರ ಟೋಪಿ ಹಾಕಿಕೊಳ್ಳುವ ಸಿದ್ದರಾಮಯ್ಯ : ಯತ್ನಾಳ್‌ ಲೇವಡಿ

Siddaramaiah happily wears a Muslim cap: Yatnal teases

ಬಾಗಲಕೋಟೆ, ಸೆ.7- ಹಾಲುಮತ ಸಮುದಾಯದ ಕಾರ್ಯಕ್ರಮದಲ್ಲಿ ಪೇಟ ತೊಡಿಸಲು ಹೋದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರಾಕರಿಸುತ್ತಾರೆ. ಈದ್‌-ಮಿಲಾದ್‌ ಪ್ರಯುಕ್ತ ನಡೆದ ಶಾಂತಿ ಸಮಾವೇಶದಲ್ಲಿ ಪೇಟ ತೊಡೆಸಿದರೆ ಖುಷಿಯಾಗಿ ಹಾಕಿಕೊಳ್ಳುತ್ತಾರೆ ಎಂದು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡಪಾಟೀಲ್‌ ಯತ್ನಾಳ್‌ ಲೇವಡಿ ಮಾಡಿದ್ದಾರೆ.

ಬಾಗಲಕೋಟೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಯಾವುದೇ ಶುಭ ಸಮಾರಂಭ ನಡೆಯುವ ಮುನ್ನ ಹಾಲು ಮತದವರನ್ನು ಕರೆಸಿ, ಅವರಿಂದ ಕಂಬಳಿ ಹಾಸಿ, ನೀರಿನ ತಂಬಿಗೆ ಇರಿಸುವ ಮೂಲಕ ಶುಭಾರಂಭ ಮಾಡಲಾಗುತ್ತದೆ. ಅಂತಹ ಪವಿತ್ರ ಸಮುದಾಯದ ಪೇಟವನ್ನು ಅದೇ ಜಾತಿಯಲ್ಲಿ ಹುಟ್ಟಿದ ಸಿದ್ದರಾಮಯ್ಯ ತಿರಸ್ಕರಿಸುತ್ತಾರೆ. ಆದರೆ ಮತಗಳ ಓಲೈಕೆಗಾಗಿ ಅನ್ಯಧರ್ಮಿಯರ ಪೇಟ ಹಾಕಿಕೊಳ್ಳುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇರಾನ್‌, ತುರ್ಜಕಿಸ್ತಾನ್‌ ಮುಂತಾದ ಬಹುತೇಕ ದೇಶಗಳಲ್ಲಿ ಪರಸ್ಪರ ಬಾಂಬ್‌ ಹಾಕಲಾಗುತ್ತಿದೆ. ಅಲ್ಲಿ ಅಶಾಂತಿ, ಅಸಹನೆ ತಾಂಡವಾಡುತ್ತಿದೆ. ಅಂತಹ ದೇಶಗಳಿಂದ ಬಂದವರು ನಮಗೆ ಶಾಂತಿಮಂತ್ರವನ್ನು ಪಠಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಗಣೇಶೋತ್ಸವ ಆಚರಣೆಗೆ ನಾನಾ ರೀತಿಯ ಷರತ್ತುಗಳನ್ನು ಹಾಕಲಾಗುತ್ತಿದೆ, ಇದನ್ನು ಒಪ್ಪಲು ಸಾಧ್ಯವಿಲ್ಲ. 2028ಕ್ಕೆ ತಮದೇ ಸರ್ಕಾರ ಅಧಿಕಾರಕ್ಕೆ ಬರಲಿದೆ. ಆ ವೇಳೆ ಗಣೇಶೋತ್ಸವದ ಮೇಲೆ ಕಲ್ಲು ತೂರುವ ಯಾರಿಗೂ ಉಳಿಗಾಲ ಇರುವುದಿಲ್ಲ. ಗಣೇಶೋತ್ಸವದ ಹಿಂದೆ ಜೆಸಿಬಿ ಸಾಗುತ್ತಿರುತ್ತದೆ. ಕಲ್ಲು ಹೊಡೆದವರ ಮನೆಗೆ ತಕ್ಷಣವೇ ಜೆಸಿಬಿ ನುಗ್ಗಿಸಿ ಧ್ವಂಸಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಹಿಂದೆ ಬಿಜೆಪಿ ಸರ್ಕಾರದಲ್ಲೂ ಕೆಲ ಕಡಿವಾಣ ಹಾಕಲಾಗಿತ್ತು. ಅಂತಹ ಯಾವ ಷರತ್ತುಗಳನ್ನು ನಾವು ಒಪ್ಪುವುದಿಲ್ಲ. ನಮಗೆ ಭಕ್ತಿ ಬಂದಷ್ಟು ಗಣೇಶನ ಆಚರಣೆ ಮಾಡುತ್ತೇವೆ. ಡಿಜೆ ಹಾಕಿ ಡ್ಯಾನ್ಸ್ ಮಾಡೇ ಮಾಡುತ್ತೇವೆ ಎಂದು ಆಗಿನ ಮುಖ್ಯಮಂತ್ರಿ ಬಸವರಾಜ್‌ ಬೊಮಾಯಿ ಅವರಿಗೆ ನೇರವಾಗಿ ಹೇಳಿ ಬಂದಿದ್ದೆ ಎಂದರು.

ಟೋಪಿ ಹಾಕಿ ಕೊಂಡಿರುವವರ ಮತಗಳು ನನಗೆ ಬೇಡ ಎಂದು ಈಗಲೂ ನಾನು ಪುನರುಚ್ಚರಿಸುತ್ತೇನೆ. ನನ್ನ ಹೇಳಿಕೆಯಲ್ಲಿ ಯಾವುದೇ ಬದಲಾವಣೆಯಿಲ್ಲ, ನಾನು ಯಾರಿಗೂ ಹೆದರುವುದಿಲ್ಲ ಎಂದು ತಿಳಿಸಿದರು.

ಈ ಹಿಂದೆ ದೇಶದ ಜನ ಅಟಲ್‌ಬಿಹಾರಿ ವಾಜ್‌ಪೇಯಿ, ನರೆಂದ್ರ ಮೋದಿ ಅವರು ಪ್ರಧಾನಿಗಳಾಬೇಕೆಂದು ಬಯಸಿದ್ದರು. ಅದರಂತೆ ಅವರು ಪ್ರಧಾನಿಗಳಾದರು. ಬಸನಗೌಡಪಾಟೀಲ್‌ ಮುಖ್ಯಮಂತ್ರಿಯಾಗಬೇಕೆಂದು ರಾಜ್ಯದ ಜನ ಮನೆ ಮನೆಗಳಲ್ಲಿ ಮಾತನಾಡುತ್ತಿದ್ದಾರೆ. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಈ ರಾಜ್ಯದ ಹಿಂದೂಗಳ ಮತಗಳಿಂದ ನಾನು ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳಿದರು.

RELATED ARTICLES

Latest News