Friday, November 22, 2024
Homeರಾಜಕೀಯ | Politicsಸಿದ್ದರಾಮಯ್ಯನವರಿಗೆ ರಾಜೀನಾಮೆ ಬಿಟ್ಟು ಬೇರೆ ದಾರಿ ಇಲ್ಲ : : ವಿಜಯೇಂದ್ರ ಭವಿಷ್ಯ

ಸಿದ್ದರಾಮಯ್ಯನವರಿಗೆ ರಾಜೀನಾಮೆ ಬಿಟ್ಟು ಬೇರೆ ದಾರಿ ಇಲ್ಲ : : ವಿಜಯೇಂದ್ರ ಭವಿಷ್ಯ

CM Siddaramaiah has no choice but to resign : : Vijayendra

ಬೆಂಗಳೂರು,ಅ.1– ಮುಡಾ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಸಿಎಂ ಸಿದ್ದರಾಮಯ್ಯ ಈ ಬಾರಿ ಬಚಾವ್ ಆಗುವ ಯಾವುದೇ ಲಕ್ಷಣಗಳಿಲ್ಲ. ಬದಲಿಗೆ ಅವರು ಯಾವುದೇ ಕ್ಷಣದಲ್ಲೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಭವಿಷ್ಯ ನುಡಿದಿದ್ದಾರೆ.

ಕಳೆದ ಬಾರಿ ಹೂಬ್ಲೆಟ್ ವಾಚ್ ಪ್ರಕರಣದಲ್ಲಿ ಎಸಿಬಿ ಮೂಲಕ ಕ್ಲೀನ್ಚಿಟ್ ತೆಗೆದುಕೊಂಡಿದ್ದರು. ಆದರೆ ಈ ಬಾರಿ ಮುಡಾ ಪ್ರಕರಣದಲ್ಲಿ ಅವರೇ ಮೊದಲ ಆರೋಪಿಯಾಗಿದ್ದು, ಅಕ್ರಮ ಹಣ ವಹಿವಾಟು ತಡೆ ಕಾಯ್ದೆಯಡಿ ಜಾರಿನಿರ್ದೇಶನಾಲಯ ಇಸಿಐಆರ್ ದಾಖಲಿಸಿದೆ. ಹೀಗಾಗಿ ಅವರು ರಾಜೀನಾಮೆ ನೀಡದೆ ಬೇರೆ ಗತ್ಯಾಂತರವಿಲ್ಲ ಎಂದು ಹೇಳಿದರು.

ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸಿದ್ದರಾಮಯ್ಯನವರು ಈ ಪ್ರಕರಣದಲ್ಲಿ ತಮನ್ನು ತಾವು ರಕ್ಷಣೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಬಂಡನತ ತೋರದೆ ತಕ್ಷಣವೇ ರಾಜೀನಾಮೆ ನೀಡಬೇಕು. ಕಳೆದ ಬಾರಿ ನಾನು ಕೆಲವೇ ದಿನಗಳಲ್ಲಿ ರಾಜೀನಾಮೆ ಕೊಡುತ್ತಾರೆ ಎಂದಿದ್ದಾರೆ. ಪರಿಸ್ಥಿತಿ ಈಗ ಕೆಲವೇ ಸಮಯಕ್ಕೆ ಬಂದು ನಿಂತಿದೆ ಎಂದು ವ್ಯಂಗ್ಯವಾಡಿದರು.

ಕಳೆದ ರಾತ್ರಿ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹಸಚಿವ ಡಾ.ಜಿ.ಪರಮೇಶ್ವರ್ ಸೇರಿದಂತೆ ಕೆಲವರ ಜೊತೆ ಮಾತುಕತೆ ನಡೆಸಿದ್ದಾರೆ. ಕೆಲವು ಸಚಿವರು ಇಡಿ ಮಧ್ಯಪ್ರವೇಶ ಮಾಡಿದ ಮೇಲೆ ಎನಫ್ ಇಸ್ ಎನಫ್ ಎಂದು ಭವಿಷ್ಯವನ್ನು ನುಡಿದಿದ್ದಾರೆ. ಇಷ್ಟಾದರೂ ರಾಜೀನಾಮೆ ನೀಡದಿರುವುದು ಅವರ ಬಂಡತನಕ್ಕೆ ಸಾಕ್ಷಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.

ನೀವು ಈಗ ಆರೋಪಿ ಸ್ಥಾನದಲ್ಲಿ ನಿಂತಿದ್ದೀರಿ. 14 ನಿವೇಶನಗಳನ್ನು ವಾಪಸ್ ಕೊಟ್ಟರೆ ಪ್ರಕರಣ ಇತ್ಯರ್ಥವಾಗುವುದಿಲ್ಲ. ನಿಮ ಹಾಗೂ ಕುಟುಂಬವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅದರಲ್ಲೂ ಮೊದಲ ಆರೋಪಿ ನೀವು. ಯಾವ ನೈತಿಕತೆ ಇಟ್ಟುಕೊಂಡು ಸಿಎಂ ಸ್ಥಾನದಲ್ಲಿ ಮುಂದುವರೆಯುತ್ತೀರಿ ಎಂದು ಪ್ರಶ್ನೆ ಮಾಡಿದರು.

ಕಾನೂನು ಬಾಹಿರವಾಗಿ ಸೈಟ್ಗಳನ್ನು ಪಡೆದುಕೊಂಡಿದ್ದರಿಂದ ವಿಧಿಯಿಲ್ಲದೆ ವಾಪಸ್ ಕೊಟ್ಟಿರಬಹುದು. ಆಗ ಮಾತ್ರಕ್ಕೆ ಪ್ರಕರಣ ಇತ್ಯರ್ಥವಾಗುವುದಿಲ್ಲ. ಆರೋಪಿ ಆರೋಪಿಯೇ ಎಂದು ಕಿಡಿಕಾರಿದರು.

ಹಿಂದೆ ವಾಲೀಕಿ ಪ್ರಕರಣದಲಲೂ ಏನೂ ನಡೆದಿಲ್ಲ ಎಂದು ತಿಪ್ಪೇ ಸವರುವ ಕೆಲಸ ಮಾಡಿದ್ದಿರಿ. ಕೊನೆಗೆ 82 ಕೋಟಿ ಅಕ್ರಮ ನಡೆದಿದೆ ಎಂದು ಸದನದಲ್ಲಿ ನೀವೇ ಒಪ್ಪಿಕೊಂಡಿದ್ದೀರಿ. ಈಗ ಮೂಡಾದಲ್ಲೂ ಅದೇ ರೀತಿ ಬಹುಕೋಟಿ ವಂಚನೆಯಾಗಿದೆ. ಅಧಿಕಾರದಲ್ಲಿ ನೀವು ಮುಂದುವರೆಯಲೇಬಾರದೆಂದು ಆಗ್ರಹ ಮಾಡಿದರು.

ಮುಡಾದಲ್ಲಿ ಪ್ರಮುಖವಾಗಿ ಎರಡು ಪ್ರಕರಣಗಳು ನಡೆದಿವೆ. ಪತ್ನಿ ಪಾರ್ವತಿ ಹೆಸರಿನಲ್ಲಿ 14 ನಿವೇಶನ ಪಡೆದಿರುವುದು ಒಂದು ಕಡೆ. ಮತ್ತೊಂದು ಕಡೆ ಸಿಎಂ ಅವರು ಅವರ ಹಿಂಬಾಲಕರಿಗೆ 5 ಸಾವಿರ ಕೋಟಿ ಬೆಲೆ ಬಾಳುವ ನಿವೇಶನಗಳನ್ನು ಹಂಚಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಪ್ರಾರಂಭದಲ್ಲಿ ನಾವು ಹೇಳಿದಾಗ ನಾನೇಕೆ ಕೊಡಬೇಕು ಎಂದು ದುರಹಂಕಾರದ ಮಾತುಗಳನ್ನು ಸಿದ್ದರಾಮಯ್ಯ ಮಾತನಾಡಿದರು. ಕಳಂಕ ರಹಿತ ಮುಖ್ಯಮಂತ್ರಿಗಳಿಗೆ ಕಳಂಕ ಅಟ್ಟಿಕೊಳ್ಳಬಾರದು ಎಂಬುದು ನಮ ಮನವಿ. ಎಷ್ಟೇ ಆದರೂ ನೀವು 40 ವರ್ಷಗಳಲ್ಲಿ ಒಂದು ಕಪ್ಪುಚುಕ್ಕೆ ಇಲ್ಲದಂತೆ ಆಡಳಿತ ನಡೆಸಿದ್ದೇನೆ ಎಂದು ಹೇಳುತ್ತೀದ್ದೀರಿ ಎಂದು ಕುಹುಕ ವಾಡಿದರು.

ನಾವು ಮುಡಾ ಪ್ರಕರಣವನ್ನು ಮುಂದಿಟ್ಟುಕೊಂಡು ಬೆಂಗಳೂರಿನಿಂದ ಮೈಸೂರುವರೆಗೂ ಪಾದಯಾತ್ರೆ ನಡೆಸಿದ ಪರಿಣಾಮ ಇಂದು ತನಿಖಾ ಹಂತಕ್ಕೆ ಬಂದಿದೆ. ಮುಂದಿನ ದಿನಗಳಲ್ಲೂ ನಮ ಸರ್ಕಾರದ ವಿರುದ್ದ ಹೋರಾಟ ಮುಂದುವರೆಯಲಿದೆ ಎಂದು ವಿಜಯೇಂದ್ರ ಎಚ್ಚರಿಸಿದರು.

RELATED ARTICLES

Latest News