Monday, November 25, 2024
Homeರಾಜಕೀಯ | Politicsಮೋದಿ ಸರ್ಕಾರದ ಜೊತೆ ಸಿದ್ದರಾಮಯ್ಯ ಅನಗತ್ಯವಾಗಿ ಕಾಲುಕೆರೆದು ಜಗಳಮಾಡುತ್ತಿದ್ದಾರೆ : ಕೇಂದ್ರ ಸಚಿವ ಹೆಚ್ಡಿಕೆ

ಮೋದಿ ಸರ್ಕಾರದ ಜೊತೆ ಸಿದ್ದರಾಮಯ್ಯ ಅನಗತ್ಯವಾಗಿ ಕಾಲುಕೆರೆದು ಜಗಳಮಾಡುತ್ತಿದ್ದಾರೆ : ಕೇಂದ್ರ ಸಚಿವ ಹೆಚ್ಡಿಕೆ

ಬೆಂಗಳೂರು, ಜು.7 – ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರದ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌‍ ಸರ್ಕಾರ ಅನಗತ್ಯವಾಗಿ ಕಾಲುಕೆರೆದು ಜಗಳ ಮಾಡುವ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಕೇಂದ್ರದ ಜೊತೆ ಸುಖಾಸುಮನೆ ಜಗಳ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಎಲ್ಲಾ ರಾಜ್ಯಗಳು ಕೇಂದ್ರದ ಜೊತೆ ಸೌಹಾರ್ದಯುತವಾದ ವಾತಾವರಣ ಮೂಡಿಸಿ ಕೆಲಸ ಮಾಡಿಕೊಳ್ಳುತ್ತವೆ. ಕರ್ನಾಟಕದಲ್ಲಿ ಸಿದ್ದರಾಮಯ್ಯನವರ ಸರ್ಕಾರ ಕೇಂದ್ರದ ಜೊತೆ ದುರದ್ದೇಶಪೂರ್ವಕವಾಗಿ ಟೀಕೆ ಮಾಡುವುದನ್ನೇ ಕಾಯಕ ಮಾಡಿಕೊಂಡಿದೆ ಎಂದು ಕುಮಾರಸ್ವಾಮಿ ದೂಡಿದ್ದಾರೆ.

ಪಿಟಿಐಗೆ ಸಂದರ್ಶನ ನೀಡಿರುವ ಅವರು ಕೇಂದ್ರದ ಜೊತೆ ನೀವು ಜಗಳ ಮಾಡುವುದರಿಂದ ಯಾವ ಪ್ರಯೋಜನವೂ ಇಲ್ಲ. ಅಲ್ಲಿನ ಸರ್ಕಾರದ ಜೊತೆ ಹೊಂದಾಣಿಕೆ ಮಾಡಿಕೊಂಡು ಮುನ್ನಡೆದರೆ ರಾಜ್ಯಕ್ಕೆ ಅನುಕೂಲವಾಗಲಿದೆ. ಕೇಂದ್ರದಲ್ಲಿ ನರೇಂದ್ರಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರದಲ್ಲಿ ಎಂಬ ಮಾತ್ರಕ್ಕೆ ಪ್ರತಿ ದಿನ ಕುಂಟು ಲಾಭ ಹೇಳುತ್ತಿದ್ದಾರೆ. ಇದರಿಂದ ನಿಮಗೆ ಏನು ಲಾಭ ಸಿಗುತ್ತದೆ ಎಂದು ಪ್ರಶ್ನಿಸಿದ್ದಾರೆ.

ಅನಗತ್ಯವಾಗಿ ನೀವು ಕೇಂದ್ರದ ಜೊತೆ ಸಂಘರ್ಷ ಮಾಡುವುದನ್ನು ನಿಲ್ಲಿಸಿ. ಅಧಿಕಾರಕ್ಕೆ ಬಂದ ಮೊದಲ ದಿನವೇ ಟೀಕೆ ಮಾಡುವುದು, ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಏನೇ ಸಮಸ್ಯೆಗಳಿದ್ದರೂ ಕೂತು ಚರ್ಚಿಸಿ ಸಮಸ್ಯೆಯನ್ನು ಇತ್ಯರ್ಥಪಡಿಸಿಕೊಳ್ಳಬಹುದು. ಆದರೆ ಕಾಂಗ್ರೆಸ್‌‍ ನಾಯಕರು, ಕೇಂದ್ರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದ ರಾಜ್ಯಕ್ಕೆ ಹಿನ್ನಡೆಯಾಗಲಿದೆ ಹೊರತು ಕಾಂಗ್ರೆಸ್‌‍ ಪಕ್ಷಕ್ಕೆ ಅಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕೆಂದು ಕುಮಾರಸ್ವಾಮಿ ಮಾತಿನಲ್ಲೇ ಛಾಟಿ ಬೀಸಿದ್ದಾರೆ.

ಕೇಂದ್ರದಲ್ಲಿ ಆಡಳಿತಾರೂಢ ಎನ್‌ಡಿಎಯ ಭಾಗವಾಗಿರುವ ಜೆಡಿ (ಎಸ್‌‍) ನಾಯಕ, ಪ್ರಧಾನಿ ನರೇಂದ್ರ ಮತ್ತು ಬಿಜೆಪಿ ನಾಯಕತ್ವವು ತನ್ನ ಮೇಲೆ ವಿಶ್ವಾಸವನ್ನು ಹೊಂದಿದೆ ಮತ್ತು ಅವರ ನಿರೀಕ್ಷೆಗಳನ್ನು ಈಡೇರಿಸಲು ಅವರು ಬಯಸುತ್ತಾರೆ ಎಂದು ಹೇಳಿದರು.
ಯುವ ಪೀಳಿಗೆಗೆ ಉದ್ಯೋಗ ಸೃಷ್ಟಿಸುವುದು ಪ್ರಧಾನಮಂತ್ರಿಯವರ ದೃಷ್ಟಿಯಾಗಿದೆ ಮತ್ತು ಅದರ ಬಗ್ಗೆ ನಾನು ಕೂಡ ಗಮನಹರಿಸಿದ್ದೇನೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸೇರಿಸಿದರು.ಲೋಕಸಭೆ ಚುನಾವಣೆಯ ನಂತರ ಪ್ರಧಾನಿ, ಗೃಹ ಸಚಿವ ಅಮಿತ್‌ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರ ಮೇಲೆ ಸ್ವಲ್ಪ ವಿಶ್ವಾಸವಿದೆ ಎಂದು ಕುಮಾರಸ್ವಾಮಿ ಹೇಳಿದರು.

ಜಿಡಿಪಿ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಪ್ರಮುಖ ಪಾತ್ರ ವಹಿಸುವ ಈ ಎರಡು ಸೂಕ್ಷ್ಮ ಇಲಾಖೆಗಳ ಜವಾಬ್ದಾರಿಯನ್ನು ಪ್ರಧಾನಿ ನನಗೆ ನೀಡಿದ್ದಾರೆ. ಉಕ್ಕು ಮತ್ತು ಭಾರೀ ಕೈಗಾರಿಕೆ ಇಲಾಖೆಗಳನ್ನು ವಹಿಸಿರುವುದರಿಂದ ತಮ ಇಲಾಖೆಯ ಅಧ್ಯಯನಕ್ಕೆ ಕನಿಷ್ಠ ಮೂರು ತಿಂಗಳ ಅಗತ್ಯವಿದೆ ಎಂದರು.

RELATED ARTICLES

Latest News